ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಹುಚ್ಚನವ್ವನಹಳ್ಳಿ ಮಂಜುನಾಥ ಬಣದ ನೇತೃತ್ವದಲ್ಲಿ ರೈತರು ಶುಕ್ರವಾರ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪಿ. ಸೂರಪ್ಪ ಭರಮಸಾಗರ, ಪಾಪಮ್ಮ, ಸತೀಶ್‌ಕೋಟೆ, ರಂಗಸ್ವಾಮಿ, ಗೌರಿ ರಾಜಪ್ಪ, ಅಜ್ಜಪ್ಪ ಇತರರು ಇದ್ದರು.
ಚಿತ್ರದುರ್ಗ: ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭ, ಹಿರಿಯೂರು ತಾಲೂಕು ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರತೆ ಒದಗಿಸುವುದೂ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹುಚ್ಚನವ್ವನಹಳ್ಳಿ ಬಣದ ನೇತೃ ತ್ವದಲ್ಲಿ ರೈತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಯೂನಿಯನ್ ಪಾರ್ಕ್ನಿಂದ ಡಿಸಿ ಕಚೇರಿಗೆ ಮೆರವಣಿಗೆ ನಡೆಸಿದ ರೈತರು, ಜಿಲ್ಲೆಯಲ್ಲಿ ತಕ್ಷಣ ಮೆಕ್ಕೆ ಜೋಳ ಖರೀದಿ ಕೇಂದ್ರ ಆರಂ ಭಿಸಬೇಕು. ವಿವಿ ಸಾಗರ ಜಲಾಶಯಕ್ಕೆ ಕೆಎಸ್‌ಐಎಸ್‌ಎಫ್ ಭದ್ರತೆ ಒದಗಿಸಬೇಕು. ಮೆಕ್ಕೆಜೋಳ ಎಥೆನಾಲ್, ಕೋಳಿ, ಪಶು ಆ ಹಾರ ಉತ್ಪಾದನೆ ಬಳಸಲಾಗುತ್ತದೆ. ಎಥೆನಾಲ್‌ನಿಂದ ೪೦ಕ್ಕೂ ಹೆಚ್ಚು ಉಪ ಉತ್ಪನ್ನಗಳನ್ನು ತಯಾರಾಗುತ್ತವೆ. ಇದರಿಂದ ಸ ರ್ಕಾರಗಳಿಗೆ ೫೦ ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಲಿದೆ.
ಕೇAದ್ರ ಸರ್ಕಾರ ಬೆಂಬಲ ಬೆಲೆ ಕಾನೂನು ಜಾರಿಗೆ ತರಬೇಕು. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸುವವರಿಗೆ ಶಿಕ್ಷೆ ವಿಽಸಬೇಕು. ಕರ್ನಾಟಕದಲ್ಲಿ ಇರುವ ಮೆಕ್ಕೆಜೋಳದ ಸಂಸ್ಕರಣಾ ಕಂಪನಿಗಳು ಹಾಗೂ ದೊಡ್ಡ ಕೋಳಿ -Áರಂ ಕಂಪನಿಗಳು ಕ ರ್ನಾಟಕ ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ಜಿಲ್ಲಾಽಕಾರಿಗೆ ಮನವಿ ಸಲ್ಲಿಸಿದ ರು.
ಸಂಘದ ಜಿಲ್ಲಾಧ್ಯಕ್ಷ ಪಿ.ಸೂರಪ್ಪ ಭರಮಸಾಗರ, ಪಾಪಮ್ಮ, ಸತೀಶ್‌ಕೋಟೆ, ರಂಗಸ್ವಾಮಿ, ಗೌರಿರಾಜಪ್ಪ, ಅಜ್ಜಪ್ಪ, ಎನ್.ಟಿ. ಶಿವಣ್ಣ, ಸಿದ್ದರಾಜು, ಉಮಾಪತಿ , ಶಾಂತಮ್ಮ, ವಸಂತಕುಮಾರ್, ಮಂಜುನಾಥ್, ಎಂ. ಆಶಾ ಇತರರು ಪ್ರತಿಭಟನೆಯಲ್ಲಿ ಇದ್ದರು.