ಕನಿಷ್ಠ ವೇತನ ಜಾರಿಗೆ ಆಗ್ರಹ

ಕನಿಷ್ಠ ವೇತನ ಜಾರಿ ಸೇರಿ ೧೩ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಡಿ.ಎಂ. ಮಲಿಯಪ್ಪ, ಶಿವಣ್ಣ, ರಂಗನಾಥ್, ಜಯಲಕ್ಷಿ÷್ಮÃ, ಜ್ಯೋತಿ, ನೇತ್ರಾ ಇತರರಿದ್ದರು.
ಕನಿಷ್ಠ ವೇತನ ಜಾರಿ ಸೇರಿ ೧೩ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಡಿ.ಎಂ. ಮಲಿಯಪ್ಪ, ಶಿವಣ್ಣ, ರಂಗನಾಥ್, ಜಯಲಕ್ಷಿ÷್ಮÃ, ಜ್ಯೋತಿ, ನೇತ್ರಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತಿ ಬಳಿಕ ೬ ಲಕ್ಷ ರೂ. ಇಡಿಗಂಟು ನೀಡಿ
  • ರಾಜ್ಯ ಗ್ರಾಪಂ ನೌಕರರ ಜಿಲ್ಲಾ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ
  • ಸಿಎಂಗೆ ಮನವಿ
ಚಿತ್ರದುರ್ಗ:

ಕನಿಷ್ಠ ವೇತನ ಜಾರಿಗೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಗ್ರಾಪಂ ನೌಕರರ ಸಂಘ (ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ನ್ಯಾಯಯುತವಾದ ೧೩ ಬೇಡಿಕೆಗಳನ್ನೂ ತ್ವರಿತವಾಗಿ ಈಡೇರಿಸುವಂತೆ ಒತ್ತಾಯಿಸಿ ಜಿಪಂ ಮೂಲಕ ಸಿಎಂಗೆ ಮನವಿ ಪತ್ರ ರವಾನಿಸಿದರು.
ಸಮಿತಿ ಅಧ್ಯಕ್ಷ ಡಿ.ಎಂ. ಮಲಿಯಪ್ಪ ಮಾತನಾಡಿ, ಗ್ರಾಪಂ ನೌಕರರಿಗೆ ೭-೮ ವರ್ಷಗಳಿಂದ ವೇತನ ಪರಿಷ್ಕರಣೆ ಆಗದೆ, ಪ್ರಸ್ತುತ ಬೆಲೆ ಏರಿಕೆ ನಡುವೆ ಜೀವನ ನಡೆಸುವುದು ಕಷ್ಟವಾಗಿದೆ. ಮಾಸಿಕ ಸಂಬಳ ಮಕ್ಕಳ ಶಿಕ್ಷಣ, ಆರೋಗ್ಯದ ವೆಚ್ಚಕ್ಕೂ ಸಾಕಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ದುಡಿಯುವ ಈ ವರ್ಗಕ್ಕೆ ಮೇ ೨೨ರಂದು ಸರ್ಕಾರ ಹೊರಡಿಸಿದ ಹೊಸ ಆದೇಶದನ್ವಯ ವೇತನ ಜಾರಿಗೊಳಿಸಬೇಕು. ಸ್ವಚ್ಛವಾ ಹಿನಿ ಮಹಿಳಾ ವಾಹನ ಚಾಲಕಿಯರು, ಕಸಗುಡಿಸುವ ಸಿಬ್ಬಂದಿ ೧-೨ ವರ್ಷದಿಂದ ವೇತನ ಇಲ್ಲದೆ ಕೆಲಸ ಮಾಡುತ್ತಿz್ದÁರೆ. ಕೂಡಲೇ ಸಂಜೀವಿನಿ ಒಕ್ಕೂಟದಿಂದ ಬೇರ್ಪಡಿಸಿ ಪಂಚಾಯತಿ ಮೂಲಕ ಸಂಬಳ ಪಾವತಿಸುವಂತೆ ಆಗ್ರಹಿಸಿದರು.
ಕರವಸೂಲಿಗಾರ, ಕ್ಲರ್ಕ್-ಡಾಟಾ ಎಂಟ್ರಿ ಆಪರೇಟರ್, ನೀರು ಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರೆಂದು ಘೋಷಿಸಬೇಕು. ಸೇವಾ ಹಿರಿತನ ಪರಿಗಣಿಸಿ ಇಕ್ರಿಮೆಂಟ್ ನೀಡಬೇಕು. ೫ ವರ್ಷ ಸೇವೆ ಸಲ್ಲಿಸಿದವರಿಗೆ ರೂ. ೭೫೦, ೧೦ ವರ್ಷ ಮೇಲ್ಪಟ್ಟು ೧೫೦೦ ರೂ., ೧೫ ವರ್ಷ ದಾಟಿದವರಿಗೆ ೩ ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ನೌಕರರು ನಿವೃತ್ತಿ ಅಥವಾ ಮರಣ ಹೊಂದಿದಲ್ಲಿ ೬ ಲಕ್ಷ ರೂ. ಇಡಿಗಂಟು ನೀಡಬೇಕು. ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಕೆಲಸ, ಒಡಂಬಡಿಕೆ ಪತ್ರ ಮತ್ತು ಪ್ರತಿ ವರ್ಷದ ನವೀಕರಣ ಪದ್ಧತಿ ರದ್ದುಪಡಿಸಬೇಕು. ಪ್ರತಿ ಪಂಚಾಯತಿಗೆ ಒಬ್ಬರೇ ಚಾಲಕರೆಂದು ಪರಿಗಣಿಸಿ ೧೫ ಸಾವಿರ ರೂ. ವೇತನ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿ ಗ್ರಾಪಂಗೂ ಲೆಕ್ಕ ಸಹಾಯಕ ಹುz್ದೆ ಸೃಷ್ಟಿಸಬೇಕು. ಈಗಾಗಲೇ ಖಾಲಿ ಇರುವ ಎಲ್ಲ ಹುz್ದÉಗಳನ್ನು ಭರ್ತಿ ಮಾಡಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುz್ದÉಗಳನ್ನು ನಿಗದಿಗೊಳಿಸಬೇಕು. ಗ್ರೇಡ್-೧ ಕಾರ್ಯದರ್ಶಿಗಳಿಂದ ಪಿಡಿಒ ಹುz್ದÉಗೆ ರಾಜ್ಯಮಟ್ಟದಲ್ಲಿ ನೀಡುವ ಮುಂಬಡ್ತಿ ಕೈಬಿಟ್ಟು ಜಿ¯್ಲÁ ಮಟ್ಟದಲ್ಲೇ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಬಿಲ್ ಕಲೆಕ್ಟರ್, ಗುಮಾಸ್ತ ವೃಂದದಿAದ ಗ್ರೇಡ್-೨ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುz್ದÉಗಳಿಗೆ ನೇಮಕಗೊಂಡ ನೌಕರರಿಗೆ ಕೆಸಿಎಸ್‌ಆರ್ ೩೨೫ ನಿಯಮಾನುಸಾರ ಹಿಂದಿನ ಸೇವೆ ಪರಿಗಣಿಸಿ ಹಳೆ ಪಿಂಚಣಿ ಜಾರಿಗೊಳಿಸಬೇಕು. ಗ್ರೇಡ್-೧ ಪಂಚಾಯತಿಗಳನ್ನು ಜನಸಂಖ್ಯೆ ಆಧರಿಸಿ ಮೇಲ್ದರ್ಜೆಗೆ ಏರಿಸಬೇಕು ಎಂದು ಸರ್ಕಾರವನ್ನು ಕೋರಿದರು.

ಪದಾಽಕಾರಿಗಳಾದ ಬಿ. ಶಿವಣ್ಣ, ವಿ. ರಂಗಸ್ವಾಮಿ, ಎ. ಸೂರಪ್ಪ, ಜಯಲಕ್ಷಿ÷್ಮÃ, ಸನತ್, ಸಿದ್ಧರಾಮ್, ಶಶಿ, ವೆಂಕಟೇಶ್, ಜ್ಯೋತಿ, ನೇತ್ರಾ, ಮಮತಾ, ಮಲ್ಲಿಕಾರ್ಜುನ್, ಅನಿಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net