ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಪಂಚಾಯತ್ ಅಭಿವೃದ್ಧಿ ಅಽಕಾರಿಗಳ ಜಿಲ್ಲಾ ಸಂಘದಿAದ ಜಿಪಂ ಸಿಇಒ ಡಾ.ಎಸ್.ಆಕಾಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಡಿ.ಎಸ್. ಡಾ. ರಂಗಸ್ವಾಮಿ, ಆರ್.ಪಾತಣ್ಣ, ಆರ್. ಅಂಜಿನಪ್ಪ, ಟಿ. ಲಲಿತಾ, ಇರ್ಫಾನುಲ್ಲಾ ಖಾನ್ ಇತರರು ಇದ್ದರು.
ರಾಜ್ಯ ಪಂಚಾಯತ್ ಅಭಿವೃದ್ಧಿ ಅಽಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿAದ ಮನವಿ
ಆಯುಕ್ತಾಲಯ ರಚನೆ
ಚಿತ್ರದುರ್ಗ: ಗದಗ ಜಿಲ್ಲೆ ಕೊತಬಾಲ ಗ್ರಾಪಂ ಪಿಡಿಒ ಮುಕ್ತಂಹುಸೇನ ಕರಡಿಗುಡ್ಡ ಅವರ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಪಂಚಾಯತ್ ಅಭಿವೃದ್ಧಿ ಅಽಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ಜಿಪಂ ಸಿಇಒ ಡಾ.ಎಸ್.ಆಕಾಶ್ ಅವರ ಮೂಲಕ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಸಚಿವ ಪ್ರಿಯಾಂಕ್‌ಖರ್ಗೆ ಅವರಿಗೆ ಮನವಿ ರವಾನಿಸಿದರು.
ಹಿಂದಿನ ಪ್ರಕರಣಕ್ಕೆ ಸಂಬAಽಸಿದ ಲೋಕಾಯಕ್ತ ತನಿಖೆ, ವೇತನವಿಲ್ಲದೆ ಬೇಸರದಿಂದ ಕೊತಬಾಲದೊಂದಿಗೆ ಅಸೂಟಿ ಗ್ರಾಪಂನಲ್ಲೂ ಕಾರ್ಯನಿರ್ವಹಿಸುತ್ತಿದ್ದ ಮುಕ್ತಂಹುಸೇನ ಅವರು ಆತ್ಮಹತ್ಯೆಗೆ ಶರಣರಾಗಿರುವುದು ರಾಜ್ಯದ ಪಿಡಿಒಗಳಿಗೆ ತೀವ್ರ ಆಘಾತ ಉಂಟು ಮಾಡಿದೆ ಎಂದು ಸಂಘದ ಪದಾಽಕಾರಿಗಳು ಆತಂಕ ವ್ಯಕ್ತಪಡಿಸಿದರು.
ಇದು ಒಬ್ಬ ಅಽಕಾರಿ ದುರಂತ ಅಂತ್ಯವಲ್ಲ, ಬದಲಿಗೆ ರಾಜ್ಯದ ಪಿಡಿಒಗಳು ಎದುರಿಸುತ್ತಿರುವ ನೈಜ, ಭೀಕರ ಪರಿಸ್ಥಿತಿಗೆ ಹಿಡಿದ ಕನ್ನಡಿ. ಗ್ರಾಮೀಣಾಭಿವೃದ್ಧಿ ಆಧಾರ ಸ್ತಂಭವಾಗಿರುವ ಪಿಡಿಒಗಳಿಂದು ತೀವ್ರ ಕೆಲಸದ ಒತ್ತಡದಲ್ಲಿ ನಲುಗುತ್ತಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ನೌಕರರ ಮೇಲಿರುವ ನಿರಂತರ ಒತ್ತಡ, ಸಂಭವಿಸುತ್ತಿರುವ ಅಕಾಲಿಕ ಸಾವುಗಳ ಕುರಿತ ಅಧ್ಯಯನಕ್ಕೆ ಕಳೆದ ಒಂದು ವರ್ಷದ ಹಿಂದೆ ರಚಿಸಲಾದ ಮೀನಾಕ್ಷಿ ಸುಂದರA ಅವರ ಅಧ್ಯಕ್ಷತೆ ಸಮಿತಿ ಈವರೆಗೂ ವರದಿ ಸಲ್ಲಿಸಿಲ್ಲ. ಸಮಿತಿ ಶೀಘ್ರ ವರದಿ ಸಲ್ಲಿಸಬೇಕು.
ಮುಕ್ತಂಹುಸೇನ ಅವರ ಸಾವಿಗೆ ನ್ಯಾಯ ಒದಗಿಸಬೇಕು. ಆತ್ಮಹತ್ಯೆ ಪ್ರಕರಣ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು. ನೊಂದ ಕುಟುಂಬ ವರ್ಗಕ್ಕೆ ಸಿಗಬೇಕಾದ ಎಲ್ಲ ಆರ್ಥಿಕ ಸೌಲಭ್ಯಗಳು, ಬಾಕಿ ವೇತನ ಬಿಡುಗಡೆ ಹಾಗೂ ಕುಟುಂಬ ವರ್ಗದವರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು.
ಪಿಡಿಒಗಳಿಗೆ ಅನ್ವಯವಾಗುವಂತೆ ಆಯುಕ್ತಾಲಯ ರಚನೆ, ಜಿಪಂ, ತಾಪಂ ಕಚೇರಿಗಳಲ್ಲಿರುವ ಸಿಬ್ಬಂದಿಗೆ ಕನಿಷ್ಠ ಸೇವಾ ಅವಽ ನಿಗದಿಪಡಿಸಿ ಕಡ್ಡಾಯ ವರ್ಗಾವಣೆ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು. ಇಲ್ಲಿ ೧೦-೧೫ವರ್ಷಗಳಿಂದ ಒಂದೇ ಸ್ಥಳ, ಹುದ್ದೆಯಲ್ಲಿ ಹಲವು ಸಿಬ್ಬಂದಿ ಬೇರು ಬಿಟ್ಟಿದ್ದಾರೆ. ಇದರಿಂದಾಗಿ ಕಡತಗಳ ವಿಲೇವಾರಿ ವಿಳಂಬ, ಪಿಡಿಒಗಳಿಗೆ ಕಿರುಕುಳದಂಥ ಸನ್ನಿವೇಶಗಳು ಎದುರಾಗಿರುತ್ತಿವೆ.
ಒಬ್ಬ ಪಿಡಿಒಗೆ ಒಂದೇ ಗ್ರಾಪಂ ಕಾರ್ಯಾಭಾರ ವಹಿಸಬೇಕು. ಹಿರಿಯ ಅಽಕಾರಿಗಳು ಸೂಕ್ತ ಮಾರ್ಗದರ್ಶನ, ಸಣ್ಣಪುಟ್ಟ ಆಡಳಿ ತಾತ್ಮಕ ಕಾರಣಗಳಿಗೆ ಅಮಾನತು ಪದ್ಧತಿ ಕೈ ಬಿಡಬೇಕು, ಇಲಾಖೆ ವಿಚಾರಣೆ ಮತ್ತಿತರ ತನಿಖೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವುದೂ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಆರ್. ಪಾತಣ್ಣ, ಆರ್. ಅಂಜಿನಪ್ಪ, ಜಿ.ದೇವರಾಜ್, ಆರ್. ವಸಂತಕುಮಾರ್, ಜಿ.ಆರ್. ನಂದೀಶ್, ಎನ್. ಶಿಲ್ಪಾ, ಟಿ. ವಿರೇಶ್, ಟಿ. ಲಲಿತಾ, ಎನ್. ಇರ್ಫಾನುಲ್ಲಾ ಖಾನ್, ಸಂತೋಷ್, ಬಸವರಾಜ್, ನಾಗರಾಜ್, ರೂಪಕುಮಾರಿ ಸೇರಿ ಸಂಘದ ಪದಾಽಕಾರಿಗಳು, ಸದಸ್ಯರು ಇದ್ದರು.