ಸೂಲೇನಹಳ್ಳಿಯಲ್ಲಿ ಚರಂಡಿ ನಿರ್ಮಾಣಕ್ಕೆ ಒತ್ತಾಯ

ಮೊಳಕಾಲ್ಮೂರು ತಾಲೂಕು ಸೂಲೇನಹಳ್ಳಿಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಸಮಾಜ ಪರಿವರ್ತನ ವೇದಿಕೆ, ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ತಾಪಂ ಇಒ ಎಚ್. ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಿದರು. ಪಿಎಸ್‌ಐ ಮಹೇಶ್ ಹೊಸಪೇಟೆ, ಪಿಡಿಒ ಕರಿಬಸಪ್ಪ, ನಂದೀಶ, ನಾಗರಾಜ, ಡಿ.ಎಂ. ಮಲಿಯಪ್ಪ, ಎಸ್. ಪರಮೇಶ ಇದ್ದರು.
ಮೊಳಕಾಲ್ಮೂರು ತಾಲೂಕು ಸೂಲೇನಹಳ್ಳಿಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಸಮಾಜ ಪರಿವರ್ತನ ವೇದಿಕೆ, ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ತಾಪಂ ಇಒ ಎಚ್. ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಿದರು. ಪಿಎಸ್‌ಐ ಮಹೇಶ್ ಹೊಸಪೇಟೆ, ಪಿಡಿಒ ಕರಿಬಸಪ್ಪ, ನಂದೀಶ, ನಾಗರಾಜ, ಡಿ.ಎಂ. ಮಲಿಯಪ್ಪ, ಎಸ್. ಪರಮೇಶ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜ ಪರಿವರ್ತನ ವೇದಿಕೆ, ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ
  • ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ
ಮೊಳಕಾಲ್ಮೂರು: ಸೂಲೇನಹಳ್ಳಿಯಲ್ಲಿ ಚರಂಡಿ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಕ್ರಮವಹಿಸಿಲ್ಲ ಎಂದು ಆರೋಪಿಸಿ ಸಮಾಜ ಪರಿವರ್ತನ ವೇದಿಕೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಮುಂದೆ ಶುಕ್ರವಾರ ಅನಿರ್ದಾಷ್ಟಾವದಿ ಪ್ರತಿಭಟನೆ ಆರಂಭಿಸಿದರು.
ಸಮಾಜ ಪರಿವರ್ತನ ವೇದಿಕೆ ಮುಖಂಡ ಎಸ್. ಪರಮೇಶ ಮಾತನಾಡಿ, ಗ್ರಾಮ ಅಸ್ತಿತ್ವಕ್ಕೆ ಬಂದಾಗಿನಿಂದ ಚರಂಡಿ ವ್ಯವಸ್ಥೆ ಕಂಡಿಲ್ಲ. ಮನೆಗಳ ತ್ಯಾಜ್ಯದ ನೀರು ಕಾಲನಿಗಳ ನಡು ರಸ್ತೆಯಲ್ಲೇ ನಿಂತು ದುರ್ವಾಸನೆ ಬೀರುತ್ತಿದೆ. ಕೊಳಚೆ ನೀರಿನಲ್ಲೇ ಓಡಾಡುವ ಪರಿಸ್ಥಿತಿ ಇದೆ. ಮಲೇರಿಯಾ , ಡೆಂಗಿ, ಸಾಂಕ್ರಾಮಿಕಗಳ ಭಯದಲ್ಲಿ ಗ್ರಾಮಸ್ಥರು ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮದಲ್ಲಿ ಚರಂಡಿ ನಿರ್ಮಿಸಬೇಕು ಎಂದು ಹಲವು ವರ್ಷಗಳಿಂದ ಬೇಡುತ್ತಿದ್ದರೂ ಗ್ರಾಪಂ ಆಡಳಿತ ಕ್ರಮವಹಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ಡಿ.ಎಂ. ಮಲಿಯಪ್ಪ ಮಾತನಾಡಿ, ಅಧಿಕಾರಿಗಳು ಸಾರ್ವಜನಿಕರ ಹಿತ ಕಾಪಾಡುತ್ತಿಲ್ಲ. ಇಡೀ ಊರಿನಲ್ಲಿ ಮಾಲಿನ್ಯದಿಂದ ಕೂಡಿದೆ. ಕಂಡು ಕಾಣದ ರೀತಿ ವರ್ತಿಸುತ್ತಿರುವುದು ಬೇಸರ ತರಿಸಿದೆ ಎಂದರು.
ಗ್ರಾಮಕ್ಕೆ ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಅನೇಕ ವರ್ಷಗಳಿಂದ ರಸ್ತೆ ತಡೆ, ಗ್ರಾಪಂ ಹಾಗೂ ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಆಯ್ದ ಕಡೆಗಳಲ್ಲಿ ಚರಂಡಿ ನಿರ್ಮಿಸಿದರೆ ಆರೋಗ್ಯಕರ ವಾತಾವರಣ ನಿರ್ಮಾಣವಾಗಲು ಸಾಧ್ಯ. ಅಧಿಕಾರಿಗಳು ಮೊಂಡುತನ ತೋರಿದರೆ ಉಗ್ರ ಹೋರಾಟಕ್ಕೆ ಸಿದ್ಧರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಂ. ರುದ್ರಯ್ಯ, ಮರಿಸ್ವಾಮಿ, ತಿಪ್ಪೇಸ್ವಾಮಿ, ಟಿ. ನಾಗೇಶ, ರುದ್ರಮುನಿ, ಕಾಮಯ್ಯ, ಮೂರ್ತಿ, ಬಾಬು, ಶಿವಮ್ಮ, ಕಂಪಾಲಯ್ಯ, ಯರ‌್ರಿಸ್ವಾಮಿ, ಚೌಡಪ್ಪ, ಮಾರಣ್ಣ, ನಾಗರಾಜ, ಮಲ್ಲಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net