ನಗರಸಭೆ ಅಽಕಾರಿಗಳ ಕರ‍್ಯವೈಖರಿಗೆ ಡಿಸಿ ಗರಂ

 ಡಿಸಿ ಟಿ.ವೆಂಕಟೇಶ್ ಅವರು ಬುಧವಾರ ಚಿತ್ರದುರ್ಗ ನಗರಸಭೆಗೆ ಭೇಟಿ ನೀಡಿ ಪರಿಶೀಲಿಸಿದರು. ಎಸ್.ಲಕ್ಷಿ÷್ಮÃ ಇತರರು ಇದ್ದರು.
ಡಿಸಿ ಟಿ.ವೆಂಕಟೇಶ್ ಅವರು ಬುಧವಾರ ಚಿತ್ರದುರ್ಗ ನಗರಸಭೆಗೆ ಭೇಟಿ ನೀಡಿ ಪರಿಶೀಲಿಸಿದರು. ಎಸ್.ಲಕ್ಷಿ÷್ಮÃ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಽಕಾರಿ
  • ಇ-ಸ್ವತ್ತು ವಿತರಣೆ ವಿಳಂಬಕ್ಕೆ ಅಸಮಧಾನ
  • ಕಾಲಮಿತಿ
ಚಿತ್ರದುರ್ಗ: ಜಿಲ್ಲಾಽಕಾರಿ ಟಿ.ವೆಂಕಟೇಶ್ ಅವರು ಬುಧವಾರ ಚಿತ್ರದುರ್ಗ ನಗರಸಭೆ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ, ವಿವಿಧ ವಿಭಾಗಗಳ ಕಾ ರ‍್ಯ ವೈಖರಿ ಪರಿಶೀಲಿಸಿದರು.
ಇ-ಸ್ವತ್ತು ವಿತರಣೆ ಹಾಗೂ ಸಾರ್ವಜನಿಕ ಕೆಲಸಗಳ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪರಿಶೀಲನೆ ವೇಳೆ ಸಾರ್ವಜನಿಕರಿಂದ ಕೇಳಿಬಂದ ದೂರುಗಳನ್ನು ಆಲಿಸಿ, ಇ-ಸ್ವತ್ತು ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಕುರಿತು ಸಂಬAಽಸಿದ ಅಽಕಾರಿಗಳನ್ನು ಪ್ರಶ್ನಿಸಿದರು.
ತಿಂಗಳುಗಟ್ಟಲೆ ಇ-ಸ್ವತ್ತು ಅರ್ಜಿ ಬಾಕಿ ಇಟ್ಟುಕೊಳ್ಳುವುದು ಸರಿಯಲ್ಲ. ತಾಂತ್ರಿಕ ಕಾರಣಗಳನ್ನು ನೀಡಿ ಸಾರ್ವಜನಿಕರನ್ನು ಅಲೆದಾಡಿ ಸಬಾರದು. ಸಮಸ್ಯೆಗಳಿದ್ದರೆ ಕೂಡಲೇ ಗಮನಕ್ಕೆ ತಂದು ಬಗೆಹರಿಸಬೇಕು, ನಿಗದಿತ ಕಾಲಮಿತಿಯೊಳಗೆ ಅರ್ಜಿಗಳನ್ನು ಪರಿಶೀಲಿಸಿ ವಿತರಿಸಬೇಕೆಂದು ವೆಂಕಟೇಶ್ ನಿರ್ದೇಶಿಸಿದರು.
ಶಿಸ್ತು ಕ್ರಮದ ಎಚ್ಚರಿಕೆ
ಬಾಕಿ ಇರುವ ಕಡತಗಳನ್ನು ಕೂಡಲೇ ವಿಲೇಗೆ ಗಡುವು ನೀಡಿದರು. ಕಂಪ್ಯೂಟರ್ ಮತ್ತು ಆನ್‌ಲೈನ್ ಸೌಲಭ್ಯಗಳಿದ್ದರೂ ಕೆಲಸ ವೇಗ ವಾಗಿ ನಡೆಯುತ್ತಿಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಽಕಾರಿ ಟಿ.ವೆಂಕಟೇಶ್, ಕರ್ತವ್ಯಲೋಪ ಎಸಗುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು.
ಜನರಿಗೆ ಯಾವುದೇ ಅಡೆ, ತಡೆಯಿಲ್ಲದೆ ಸೇವೆ ಸಿಗುವಂತೆ ಪಾರದರ್ಶಕ ವ್ಯವಸ್ಥೆ ಜಾರಿಗೆ ತಾಕೀತು ಮಾಡಿದರು. ನಗರಸಭೆ ಪೌರಾ ಯುಕ್ತೆ ಎಸ್.ಲಕ್ಷಿ÷್ಮÃ, ನಗರಸಭೆ ಕರ‍್ಯಪಾಲಕ ಇಂಜಿನಿಯರ್ ರಾಜು, ಕಂದಾಯ ಅಽಕಾರಿ ಪ್ರಕಾಶ್, ಕಚೇರಿ ವ್ಯವಸ್ಥಾ ಪಕ ಟಿ.ಜಯಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net