ಜಿಲ್ಲೆಯಲ್ಲಿ ಪ್ರಸ್ತುತ ೭,೯೯೩ ಆಟೋರಿಕ್ಷಾಗಳಿಗೆ ಅಽಕೃತ ಪರವಾನಗಿ ನೀಡಲಾಗಿದೆ. ಆದರೆ, ನೋಂದಾಯಿತ ಆಟೋರಿಕ್ಷಾಗಳ ಸಂಖ್ಯೆ ೧೦,೨೨೩ ಇವೆ. ೨,೨೩೦ ಆಟೋರಿಕ್ಷಾಗಳು ಪರವಾನಗಿ ಇಲ್ಲದೆ ಸಂಚರಿಸುತ್ತಿವೆ. ಇವುಗಳ ವಿರುದ್ಧ ತಕ್ಷಣ ಜಂಟಿ ಕಾರ್ಯಾಚರಣÉ ನಡೆಸಲಾಗುವುದು ಎಂದು ಆರ್‌ಟಿಒ ಭರತ್ ಎಂ. ಕಾಳಿಸಿಂಗೆ ಹೇಳಿದರು. ಹೊಳಲ್ಕೆರೆ ರಸ್ತೆಯ ಕೃಷ್ಣ ಸರ್ಕಲ್, ಮುರುಘಾ ಮಠದ ಬಳಿ ಹಳೆಯ ಪಿ.ಬಿ. ರಸ್ತೆಯಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸಬೇಕು. ಕೃಷ್ಣ ಸರ್ಕಲ್‌ನ್ನು ವೈಜ್ಞಾನಿಕವಾಗಿ ಮರು ನಿರ್ಮಾಣ ಮಾಡುವಂತೆ ಡಿಸಿ ಸೂಚಿಸಿದರು.