ಚಿತ್ರದುರ್ಗದಲ್ಲಿ ಭಾನುವಾರ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ ಸೃಜನಶೀಲತೆ ಮತ್ತು ಪ್ರಭುತ್ವ ಕುರಿತ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿಯನ್ನು ಪ್ರೊ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು. ಡಾ.ಜೆ. ಕರಿಯಪ್ಪ ಮಾಳಿಗೆ, ಜೆ.ಯಾದವರೆಡ್ಡಿ, ಅರುಣ್ ಜೋಳದ ಕೂಡ್ಲಿಗಿ, ನವೀನ್ ಮಂಡಗz್ದÉ, ಚಂದ್ರಶೇಖರ ತಾಳ್ಯ, ಆರ್.ಜಿ. ಹಳ್ಳಿ ನಾಗರಾಜ್, ಎಚ್.ಜಿ. ವಿಜಯಕುಮಾರ್, ಮೀರಸಾಬಿಹಳ್ಳಿ ಶಿವಲಿಂಗಪ್ಪ ಇತರರು ಇದ್ದರು.
ಚಿತ್ರದುರ್ಗ: ಸೃಜನಶೀಲತೆ ಎಂದಿಗೂ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭುತ್ವಗಳ ಅಡಿಯಾಳಾಗಬಾರದು. ಬ ದಲಿಗೆ ಪ್ರಭುತ್ವಕ್ಕೆ ಕನ್ನಡಿ ಹಿಡಿಯುವ, ಸವಾಲೊಡ್ಡುವ ಶಕ್ತಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹಿರಿಯ ಬಂಡಾಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.
ಪತ್ರಿಕಾ ಭವನದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಜಿ¯್ಲÁ ಘಟಕ ಹೊಸ ತಲೆ ಮಾರು ಅಭಿಯಾನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸೃಜನಶೀಲತೆ ಮತ್ತು ಪ್ರಭುತ್ವ ಕುರಿತ ವಿಚಾರ ಸಂಕಿರಣ ಹಾ ಗೂ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಸಂಘಟನೆಯ ಹಲವು ಐತಿಹಾಸಿಕ ನಿರ್ಧಾರ, ಮೊದಲ ಹೆಜ್ಜೆಗೆ ಚಿತ್ರದುರ್ಗ ಸಾಕ್ಷಿಯಾಗಿದೆ. ಈ ಹಿಂದೆ ಇಲ್ಲಿ ನಡೆದ ಜನಸಂಸ್ಕೃತಿ ಸಮಾವೇಶ, ಭಾರತೀಯ ಸಾಹಿತ್ಯದಲ್ಲಿ ಬಂಡಾಯ ಪ್ರe್ಞೆಯಂತಹ ರಾಷ್ಟಿçÃಯ ವಿಚಾರ ಸಂಕಿರಣಗಳು ನಮ್ಮ ಒಗ್ಗಟ್ಟಿಗೆ ಮೈ ಲಿಗಲ್ಲುಗಳಾಗಿವೆ ಎಂದು ಹೇಳಿದರು.
ದೇಶದ ತಳಸಮುದಾಯಗಳು ಮತ್ತು ಮಹಿಳೆಯರು ಬರೆಯಲು ಆರಂಭಿಸಿದ್ದೇ ಅತ್ಯಂತ ದೊಡ್ಡ ಬಂಡಾಯವಾಗಿದೆ. ಅಕ್ಷರ ಮತ್ತು ಬರವಣಿಗೆ ಎನ್ನುವುದು ಕೇವಲ ಶಿಷ್ಟ ವರ್ಗದ ಸೊತ್ತಲ್ಲ. ಜನಪದರೂ ಮೌಖಿಕ ಅಕ್ಷರಸ್ಥರಾಗಿದ್ದರು ಎಂದರು.
ಪ್ರಭುತ್ವ ಮತ್ತು ಸಮೂಹ ಸನ್ನಿಗಳು ಇಂದು ಮನುಷ್ಯನ ಪಂಚೇAದ್ರಿಯಗಳನ್ನು ಮಲಿನಗೊಳಿಸುತ್ತಿವೆ. ನಮ್ಮ ಕಣ್ಣು, ಕಿವಿಗಳು ಕಲುಷಿತಗೊಂಡು, ನಾಲಿಗೆಗಳು ಉದ್ದವಾಗಿವೆ. ಈ ನಾಗರ ನಾಲಿಗೆಗಳ ಮತ್ಸರದ ಸಂಸ್ಕೃತಿಯಿAದ ನಾವೆಲ್ಲರೂ ಹೊರ ಬರಬೇಕಿದೆ ಎಂದು ಪ್ರತಿಪಾದಿಸಿದರು.
ದುಷ್ಟ ಸರ್ಕಾರಗಳಿz್ದÁಗ ಸೃಜನಶೀಲತೆ ಮೌನವಾಗಿರದೆ, ಸಮೀಪ ಮತ್ತು ದೂರದ ಸಂಬAಧಗಳನ್ನು ಏಕಕಾಲಕ್ಕೆ ಕಾಯ್ದು ಕೊಳ್ಳುತ್ತಲೇ ಪ್ರಭುತ್ವದ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲಬೇಕು. ಇತಿಹಾಸದುದ್ದಕ್ಕೂ ಕನ್ನಡ ಸಾಹಿತ್ಯ ಈ ಕೆಲಸವನ್ನು ಯಶಸ್ವಿ ಯಾಗಿ ಮಾಡಿಕೊಂಡು ಬಂದಿದೆ ಎಂದು ಅಭಿಪ್ರಾಯಪಟ್ಟರು.
ಸಂಘಟನೆ ಜಿ¯್ಲÁ ಸಂಚಾಲಕ ಡಾ.ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಇಂದಿನ ಸಂಕೀರ್ಣ ಹಾಗೂ ದುರಿತ ಕಾಲಘಟ್ಟದಲ್ಲಿ ಕಳೆದುಹೋಗುತ್ತಿರುವ ಮನುಷ್ಯ ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಮರಳಿ ಹುಡುಕಿ, ಪರಸ್ಪರ ಸಂಬAಧಗಳನ್ನು ಗಟ್ಟಿಗೊಳಿಸಲು ಬಂಡಾಯ ಸಾಹಿತ್ಯದ ಸೈದ್ಧಾಂತಿಕ ಬದ್ಧತೆ ಅಗತ್ಯವಾಗಿದೆ ಎಂದು ಆಶಿಸಿದರು.
ಇಂದಿನ ಯುವಶಕ್ತಿ ರಾಜಕೀಯ ಪಕ್ಷಗಳ ಮೆರವಣಿಗೆಗಳಲ್ಲಿ, ವಿವಿಧ ಸಂಘಟನೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಾವೇಕೆ ಅಲ್ಲಿ ಭಾಗವಹಿಸಿದ್ದೇವೆ ಎಂಬ ಅರಿವಿಲ್ಲದೆ ಅಸ್ಪಷ್ಟತೆಯ ಸುಳಿಯಲ್ಲಿ ಸಿಲುಕಿದೆ. ಸೈದ್ಧಾಂತಿಕ ಪ್ರe್ಞÉ ಮತ್ತು ಬದ್ಧತೆ ಇಲ್ಲದಿz್ದÁಗ ಹಾದಿ ತಪ್ಪುವುದು ಸಾಮಾನ್ಯ.
ಹೀಗಾಗಿ ಯುವ ಮನಸ್ಸುಗಳಿಗೆ ಬದುಕಿನ ದೃಷ್ಟಿಕೋನ ಬದಲಿಸುವ ಓದು ಮತ್ತು ಸಂವಾದಗಳು ಇಂದಿನ ತುರ್ತು ಅಗತ್ಯ ಗಳಾಗಿವೆ ಎಂದು ಕಿವಿಮಾತು ಹೇಳಿದರು. ಚಿಂತಕ ಜೆ. ಯಾದವರೆಡ್ಡಿ, ಪ್ರಾಧ್ಯಾಪಕರಾದ ಅರುಣ್ ಜೋಳದ ಕೂಡ್ಲಿಗಿ, ನವೀನ್ ಮಂಡಗz್ದÉ ಇತರರು ಇದ್ದರು.
"
ಪ್ರಭುತ್ವದ ಜೊತೆಗಿದ್ದೂ ಪ್ರಭುತ್ವ ಮೀರಿ ಬೆಳೆಯುವುದು ಹೇಗೆ ಎಂಬುದನ್ನು ತೋರಿಸಿದ ಬಸವಣ್ಣ, ತಮ್ಮ ಕೃತಿಯ ಮೂಲಕ ಸೃಜನಶೀಲತೆಯ ಶಕ್ತಿ ತೋರಿದ ಪಂಪ ನಮಗೆ ಸದಾ ಮಾದರಿಯಾಗಿz್ದÁರೆ.