ಚಿತ್ರದುರ್ಗದಲ್ಲಿ ಬುಧವಾರ ಜಿಲ್ಲಾ ಸ್ವೀಪ್ ಸಮಿತಿ ಸಭೆಯಲ್ಲಿ ರಾಜ್ಯ ಸ್ವೀಪ್ ಸಮಿತಿ ನೋಡಲ್ ಅಽಕಾರಿ ಪಿ.ಎಸ್. ವಸ್ತçದ್, ಬಿ.ಟಿ. ಕುಮಾರಸ್ವಾಮಿ, ಡಾ. ರಂಗಸ್ವಾಮಿ, ಎಸಿ ವೆಂಕಟೇಶ್‌ನಾಯ್ಕ್, ಎಂ.ಆರ್. ಮಂಜುನಾಥ್, ಬೀಬಿ ಫಾತಿಮಾ, ಬಿ.ಎಂ. ಗೋವಿಂದರಾಜ್ ಇತರರು ಇದ್ದರು.
ರಾಜ್ಯ ಸ್ವೀಪ್ ಸಮಿತಿ ನೋಡಲ್ ಅಽಕಾರಿ ಪಿ.ಎಸ್. ವಸ್ತದ್ ಸಲಹೆ
ಜಿಪಂನಲ್ಲಿ ಅಽಕಾರಿಗಳ ಸಭೆ
ಎಸ್‌ಐಆರ್
ಚಿತ್ರದುರ್ಗ: ಮತದಾರರ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಕಾರ್ಯ ಶೀಘ್ರದಲ್ಲೇ ಆರಂಭವಾಗುವುದರಿAದ ಈ ಕುರಿತು ಮತದಾರರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ರಾಜ್ಯ ಸ್ವೀಪ್ ಸಮಿತಿ ನೋಡಲ್ ಅಽಕಾರಿ ಪಿ.ಎಸ್. ವಸ್ತದ್ ಹೇಳಿದರು.
ಜಿಪಂನಲ್ಲಿ ಬುಧವಾರ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರನ್ನೊಳಗೊಂಡ ಅಽಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜುಗಳಲ್ಲಿ ಮತದಾರರ ಸಾಕ್ಷರತಾ ಸಂಘ(ಇಎಲ್‌ಸಿ), ಮತಗಟ್ಟೆಗಳ ವ್ಯಾಪ್ತಿಯಲ್ಲಿ ಚುನಾವಣÁ ಜಾಗೃತಿ ಸಂಘ (ವಿಎಸಿ) ಹಾಗೂ ಎಲ್ಲ ಕಚೇರಿಗಳಲ್ಲಿ ಮತದಾರರ ಜಾಗೃತಿ ವೇದಿಕೆ(ವಿಎಎ-ï)ಗಳನ್ನು ಜಾಗೃತಗೊಳಿಸಬೇಕು. ಆ ಮೂಲಕ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಮತದಾರರ ಸಾಕ್ಷರತಾ ಸಂಘಗಳ ಮಾಹಿತಿಯನ್ನು ಇಎಲ್‌ಸಿ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿ, ಈ ಸಂಘಗಳ ಕಾರ್ಯಚಟುವಟಿಕೆಗಳಗಳನ್ನು ಅಪ್‌ಲೋಡ್ ಮಾಡಬೇಕು ಎಂದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಎಸಿ ವೆಂಕಟೇಶ್‌ನಾಯ್ಕ್, ತಹಸೀಲ್ದಾರ್ ಬಿ.ಎಂ. ಗೋವಿಂದರಾಜ್, ಡಿಡಿಪಿಐ ಎಂ.ಆರ್. ಮಂಜುನಾಥ್, ಚುನಾವಣಾ ತಹಸೀಲ್ದಾರ್ ಬೀಬಿ -Áತಿಮಾ, ಶಿರಸ್ತೇದಾರ್ ಮಲ್ಲಿಕಾರ್ಜುನ ನಾಯಕ ಇತರರು ಇದ್ದರು.