ಮಕ್ಕಳನ್ನು ಅನಾಥರನ್ನಾಗಿ ಮಾಡದಿರಿ

ಚಿತ್ರದುರ್ಗ ದತ್ತು ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನ್ಮೋತ್ಸವದಲ್ಲಿ ಹೆಣ್ಣು ಮಕ್ಕಳಿಬ್ಬರಿಗೆ ನಾಮಕರಣ ಮಾಡಲಾಯಿತು. ಹಿರಿಯ ಸಿವಿಲ್ ನ್ಯಾಯಾಽÃಶ ಎಂ.ವಿಜಯ್, ಕೆ.ಎಚ್.ವಿಜಯಕುಮಾರ್, ಕೆ.ಪ್ರೇಮಮೂರ್ತಿ, ಡಾ.ಜಿ.ಪಿ.ರೇಣುಪ್ರಸಾದ್, ಅನಿಲ್ ಕುಮಾರ್ ಇದ್ದರು.
ಚಿತ್ರದುರ್ಗ ದತ್ತು ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನ್ಮೋತ್ಸವದಲ್ಲಿ ಹೆಣ್ಣು ಮಕ್ಕಳಿಬ್ಬರಿಗೆ ನಾಮಕರಣ ಮಾಡಲಾಯಿತು. ಹಿರಿಯ ಸಿವಿಲ್ ನ್ಯಾಯಾಽÃಶ ಎಂ.ವಿಜಯ್, ಕೆ.ಎಚ್.ವಿಜಯಕುಮಾರ್, ಕೆ.ಪ್ರೇಮಮೂರ್ತಿ, ಡಾ.ಜಿ.ಪಿ.ರೇಣುಪ್ರಸಾದ್, ಅನಿಲ್ ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • - ಹಿರಿಯ ಸಿವಿಲ್ ನ್ಯಾಯಾಽÃಶ ವಿಜಯ್ ಸಲಹೆ
  • ದತ್ತು ಕೇಂದ್ರದಲ್ಲಿ ಜನ್ಮೋತ್ಸವ, ನಾಮಕರಣ
  • ಜಿಲ್ಲಾ ಮಕ್ಕಳ ರಕ್ಷಣಾ ಘಟಕ
ಚಿತ್ರದುರ್ಗ: ಪಾಲಕರು, ಸಂಬAಽಕರು ಮಕ್ಕಳನ್ನು ಅನಾಥರನ್ನಾಗಿ ಬೇರ್ಪಡಿಸದಿರಿ ಎಂದು ಹಿರಿಯ ಸಿವಿಲ್ ನ್ಯಾಯಾಽÃಶ ಎಂ.ವಿಜಯ್ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಬಾಲಮಂದಿರದ ದತ್ತು ಕೇಂದ್ರದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ವಿವಿಧ ಇಲಾಖೆಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶುಕ್ರವಾರ ಅಂತಾರಾಷ್ಟಿçÃಯ ದತ್ತು ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಜನ್ಮೋತ್ಸವದಲ್ಲಿ ಹೆಣ್ಣು ಮಕ್ಕಳಿಬ್ಬರಿಗೆ ನಿಸರ್ಗ ಮತ್ತು ನೇಸರ ಎಂದು ನಾಮಕರಣ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಯಾವ ಮಕ್ಕಳು ಕೂಡ ಅನಾಥರಲ್ಲ. ಪಾಲಕರು, ಸಂಬAಽಕರು ತಮ್ಮ ಮಕ್ಕಳನ್ನು ಅನಾಥರನ್ನಾಗಿ ಮಾಡುವುದು ಮಾನವ ಧರ್ಮಕ್ಕೆ ವಿರುದ್ಧವಾಗಿದೆ. ಸರ್ಕಾರ ಅನಾಥ ಮಕ್ಕಳನ್ನು ಸಂರಕ್ಷಿಸಿ ಮೂಲ ಸೌಕರ್ಯಗಳನ್ನು ನೀಡಿ ಸಲಹುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಮತೆಯ ತೊಟ್ಟಿಲು ಯೋಜನೆಯಡಿ ಅನಾಥ ಮಕ್ಕಳನ್ನು ಸಾಕಿ ಬೆಳೆಸಲಾಗುತ್ತದೆ ಎಂದರು.
ಎಲ್ಲಿಯಾದರೂ ಅನಾಥ ಮಕ್ಕಳು ಕಂಡುಬAದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಅನಾಥ ಮಕ್ಕಳನ್ನು ಒಪ್ಪಿಸಿ ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ಕ್ಕೆ ಕರೆ ಮಾಡುವಂತೆ ನ್ಯಾಯಾಽÃಶರು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್.ವಿಜಯಕುಮಾರ್ ಮಾತನಾಡಿ, ಅನಾಥ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಸಂತಸವಿದೆ. ಸರ್ಕಾರದ ನೀತಿ, ನಿರ್ದೇಶನದಂತೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಮಕ್ಕಳನ್ನು ಉಪಚರಿಸಬೇಕೆಂದು ದತ್ತು ಕೇಂದ್ರದ ಸಿಬ್ಬಂದಿಗೆ ಸೂಚಿಸಿದರು.
ಜಿಲ್ಲಾ ಮಕ್ಕಳ ಘಟಕದ ರಕ್ಷಣಾಽಕಾರಿ ಕೆ.ಪ್ರೇಮಮೂರ್ತಿ ಮಾತನಾಡಿ, ಮಕ್ಕಳ ರಕ್ಷಣೆಯಲ್ಲಿ ಎಲ್ಲ ನಾಗರಿಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ವಕೀಲ ಅನಿಲ್ ಕುಮಾರ್, ಇಲಾಖೆ ಅಽಕಾರಿಗಳಾದ ಮಂಜುನಾಥ್, ಗಂಗಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net