ಮರು ಪರೀಕ್ಷೆಯ ಅನ್ಯಾಯ ಸರಿಪಡಿಸಿ

 ಹಿರಿಯೂರು ತಾಲೂಕಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಜೂ. ೧ರಂದು ನಡೆದ ಕೆಸಿಇಟಿ ಕೃಷಿ ಪ್ರಾಯೋಗಿಕ ಪರೀಕ್ಷೆ ಸ್ಥಗಿತಗೊಳಿಸಿ, ಮೊದಲು ನಡೆದ ಪರೀಕ್ಷೆ ಅಂಕಗಳನ್ನೇ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು, ಪಾಲಕರು, ವಿದ್ಯಾರ್ಥಿಗಳು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಹಿರಿಯೂರು ತಾಲೂಕಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಜೂ. ೧ರಂದು ನಡೆದ ಕೆಸಿಇಟಿ ಕೃಷಿ ಪ್ರಾಯೋಗಿಕ ಪರೀಕ್ಷೆ ಸ್ಥಗಿತಗೊಳಿಸಿ, ಮೊದಲು ನಡೆದ ಪರೀಕ್ಷೆ ಅಂಕಗಳನ್ನೇ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು, ಪಾಲಕರು, ವಿದ್ಯಾರ್ಥಿಗಳು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನೂರಾರು ವಿದ್ಯಾರ್ಥಿಗಳು, ಪಾಲಕರಿಂದ ಪ್ರತಿಭಟನೆ
  • ಬಿಗಿ ಪೊಲೀಸ್ ಭದ್ರತೆ
  • ಕೃಷಿ ವಿಜ್ಞಾನ ಪ್ರಾ ಯೋಗಿಕ ಪರೀಕ್ಷೆ
ಚಿತ್ರದುರ್ಗ: ಹಿರಿಯೂರು ತಾಲೂಕಿನ ಬಬ್ಬೂರು ತೋಟಗಾರಿಕೆ ಕಾಲೇಜಿನಲ್ಲಿ ಮೇ ೧೦ರಂದು ನಡೆದ ಕೃಷಿ ವಿಜ್ಞಾನ ಪ್ರಾ ಯೋಗಿಕ ಪರೀಕ್ಷೆಯ ಅಂಕಪಟ್ಟಿಯನ್ನೇ ಮುಂದುವರಿಸುವAತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯ ಕರ್ತರು, ನೂರಾರು ವಿದ್ಯಾರ್ಥಿಗಳು, ಪಾಲಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಜೂ. ೧ರಂದು ನಡೆದ ಮರು ಪರೀಕ್ಷೆಯಿಂದಾಗಿ ರೈತರ ಮಕ್ಕಳಿಗೆ ತುಂಬಾ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಲೇಜಿನ ಡೀನ್ ವಿರುದ್ಧ ಽ ಕ್ಕಾರ ಕೂಗಿದರು. ಇದಕ್ಕೂ ಮೊದಲು ನಡೆದ ಪರೀಕ್ಷೆಯ ಅಂಕವನ್ನೇ ಪರಿಗಣಿಸುವಂತೆ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (ಶಿವಮೊಗ್ಗ) ಅಽಕಾರಿಗಳು ಇಲ್ಲಿಗೆ ಭೇಟಿ ನೀಡಿ, ಕಾಲೇಜಿನ ಡೀನ್- ಪರೀಕ್ಷಾ ಸಿಬ್ಬಂದಿಯಿAದ ಮಾಹಿತಿ ಪಡೆದು, ಸಿಸಿ ಟಿವಿ ಪರಿಶೀಲನೆ ನಡೆಸಿದ್ದರು. ನಂತರ ಡೀನ್ ಯಾವುದೇ ಅಕ್ರಮ ನಡೆದಿಲ್ಲವೆಂದು ಹೇಳಿಕೆ ನೀಡಿದ್ದರು. ಹೀಗಿದ್ದರೂ ಮರು ಪರೀಕ್ಷೆ ನಡೆಸಿದ್ದೇಕೆ ಎಂದು ಪ್ರಶ್ನಿಸಿದರು.
ಮೊದಲ ಬಾರಿ ನಡೆದ ಪರೀಕ್ಷೆಯಲ್ಲಿ ಯಾವುದೇ ರೀತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ಆದರೂ ಮರು ಪರೀಕ್ಷೆ ದಿನದಂದು ಈ ಹಿಂದೆ ಸರಳವಾಗಿ ಪ್ರಶ್ನೆ ಕೇಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕೆ ನಡೆಸಿರುವುದಾಗಿ ಡೀನ್ ತಿಳಿಸಿದ್ದಾರೆ. ಅಂದು ಔಟ್ ಆ-ï ಸಿಲಬಸ್, ಕಠಿಣ ಪ್ರಶ್ನೆ ಕೇಳಲಾಗಿದೆ. ಇದು ಯಾವ ನ್ಯಾಯ ಎಂದು ಕಿಡಿಕಾರಿದರು.
ವಿದ್ಯಾರ್ಥಿಗಳನ್ನು ಉದ್ದೇಶ ಪೂರ್ವಕವಾಗಿ ಅನುತ್ತೀರ್ಣಗೊಳಿಸಲು ಕಠಿಣ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದಂತೆ ಮೇಲ್ನೋಟಕ್ಕೆ ಕಾಣು ತ್ತಿದೆ ಎಂಬುದಾಗಿ ಮರು ಪರೀಕ್ಷೆ ವೇಳೆ ಬಹುತೇಕ ವಿದ್ಯಾರ್ಥಿಗಳು ದೂರಿದ್ದಾರೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರ ಭವಿಷ್ಯದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ಆದ್ದರಿಂದ ಮೊದಲು ನಡೆದ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನೇ ಪರಿಗಣಿಸುವಂತೆ ಜಿಲ್ಲಾಡಳಿತ ವನ್ನು ಕೋರಿದರು.
ಇತ್ತೀಚೆಗೆ ಪರೀಕ್ಷಾ ಕೇಂದ್ರದ ಬಳಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಹಾಗೂ ನೂರಾರು ಮಂದಿ ಜಮಾಯಿಸುವ ಮಾಹಿತಿ ಮೇರೆಗೆ ಜಿಲ್ಲಾಽಕಾರಿ ಕಚೇರಿ ಪ್ರವೇಶಿಸದಂತೆ ಓಬವ್ವ ವೃತ್ತದಲ್ಲೇ ಬ್ಯಾರಿಕೇಡ್‌ಗಳ ಸಮೇತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.
ರೈತಸಂಘದ ಮುಖಂಡರಾದ ತಿಪ್ಪೇಸ್ವಾಮಿ, ಕೆ.ಪಿ. ಭೂತಯ್ಯ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕೆ.ಎಂ. ಕಾಂತರಾಜು, ಕೆ.ಸಿ. ಹೊರಕೇರಪ್ಪ, ಹನುಮಂತರೆಡ್ಡಿ, ಚೇತನ್ ಯಳನಾಡು, ಬಿ.ಒ. ಶಿವಕುಮಾರ್, ರ‍್ಲಹಳ್ಳಿ ರವಿಕುಮಾರ್, ಬಿ. ಚಂದ್ರಪ್ಪ, ಸಿ. ವೆಂಕಟೇಶ್ ಬೆಳಗಟ್ಟ, ಜಿ. ನಾಗರಾಜು ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net