ಎಸ್‌ಐಆರ್ ಕಾರ್ಯಕ್ಕೆ ಸಹಕಾರ ನೀಡಿ

ಚಿತ್ರದುರ್ಗದಲ್ಲಿ ಭಾನುವಾರ ಎಸ್‌ಐಆರ್ ಕುರಿತು ಬಿಜೆಪಿ ನಗರ-ಗ್ರಾಮಾಂತರ ಮಂಡಲದಿAದ ನಡೆದ ಪಕ್ಷದ ಬಿಎಲ್‌ಒಗಳ ವಿಶೇಷ ಸಭೆಯಲ್ಲಿ ಭಾರತಾಂಬೆ ಭಾವಚಿತ್ರಕ್ಕೆ ಜಿ.ಎಚ್. ತಿಪ್ಪಾರೆಡ್ಡಿ ಪುಷ್ಪನಮನ ಸಲ್ಲಿಸಿದರು. ಡಾ. ಸಿz್ದÁರ್ಥ್ ಗುಂಡಾರ್ಪಿ, ವೆಂಕಟೇಶ್‌ಯಾದವ್, ಸುರೇಶ್ ಸಿz್ದÁಪುರ, ನಾಗರಾಜ್ ಬೇದ್ರೆ, ನವೀನ್ ಚಾಲುಕ್ಯ, ಲೋಕೇಶ್, ನಾಗರಾಜ್ ಇತರರಿದ್ದರು.
ಚಿತ್ರದುರ್ಗದಲ್ಲಿ ಭಾನುವಾರ ಎಸ್‌ಐಆರ್ ಕುರಿತು ಬಿಜೆಪಿ ನಗರ-ಗ್ರಾಮಾಂತರ ಮಂಡಲದಿAದ ನಡೆದ ಪಕ್ಷದ ಬಿಎಲ್‌ಒಗಳ ವಿಶೇಷ ಸಭೆಯಲ್ಲಿ ಭಾರತಾಂಬೆ ಭಾವಚಿತ್ರಕ್ಕೆ ಜಿ.ಎಚ್. ತಿಪ್ಪಾರೆಡ್ಡಿ ಪುಷ್ಪನಮನ ಸಲ್ಲಿಸಿದರು. ಡಾ. ಸಿz್ದÁರ್ಥ್ ಗುಂಡಾರ್ಪಿ, ವೆಂಕಟೇಶ್‌ಯಾದವ್, ಸುರೇಶ್ ಸಿz್ದÁಪುರ, ನಾಗರಾಜ್ ಬೇದ್ರೆ, ನವೀನ್ ಚಾಲುಕ್ಯ, ಲೋಕೇಶ್, ನಾಗರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಯುತ ಮತದಾರರ ಪಟ್ಟಿ ಸಿದ್ಧಪಡಿಸಲು ಸಹಕಾರಿ
  • ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿಕೆ
  • ಚುನಾವಣಾ ಆಯೋಗ
ಚಿತ್ರದುರ್ಗ: ಸಂವಿಧಾನಾತ್ಮಕವಾಗಿ ಚುನಾವಣಾ ಆಯೋಗ ಮಾಡುತ್ತಿರುವ ಎಸ್‌ಐಆರ್‌ಗೆ ಮತದಾರರು ಸಹಕಾರ ನೀಡಿ ಯ ಶಸ್ವಿಗೊಳಿಸಬೇಕು. ಇದಕ್ಕೆ ಪೂರಕವಾಗಿ ಪಕ್ಷದ ಬಿಎಲï‌ಎಗಳು ಕಾರ್ಯನಿರ್ವಹಿಸಬೇಕು ಎಂದು ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸಲಹೆ ನೀಡಿದರು.

ಬಿಜೆಪಿ ಚಿತ್ರದುರ್ಗ ನಗರ, ಗ್ರಾಮಾಂತರ ಮಂಡಲದಿAದ ಜಗಳೂರು ಮಹಾಲಿಂಗಪ್ಪ ಟವರ್ಸ್ನಲ್ಲಿ ಭಾನುವಾರ ಆಯೋಜಿಸಿದ್ದ ಚಿ ತ್ರದುರ್ಗ ವಿಧಾನಸಭಾ ಕ್ಷೇತ್ರದ ಮಹಾ ಶಕ್ತಿಕೇಂದ್ರದ ಪ್ರಮುಖರ, ಬಿಎಲ್‌ಎ ೨ಗಳ ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿ ದರು.
ಕಾಂಗ್ರೆಸ್ಸಿಗರು ಎಸ್‌ಐಆರ್ ವಿರೋಽಸುತ್ತಿದ್ದಾರೆ. ಈ ಹಿಂದೆಯೂ ಇವಿಎಂ ಯಂತ್ರಗಳ ಕುರಿತೂ ಅಪಸ್ವರ ಎತ್ತಿದ್ದರು. ಆದರೆ, ಸಂವಿಧಾನ ಬದ್ಧವಾಗಿ ಅರ್ಹರನ್ನು ಗುರುತಿಸಲು ಈಗಾಗಲೇ ದೇಶದ ಅನೇಕ ರಾಜ್ಯಗಳಲ್ಲಿ ಎಸ್‌ಐಆರ್ ನಡೆದಿದೆ. ಅನರ್ಹ ಲಕ್ಷಾಂತರ ಮಂದಿಯ ಮತದಾನ ರದ್ದುಪಡಿಸಲಾಗಿದೆ.
ಇದೀಗ ರಾಜ್ಯದಲ್ಲಿ ಆರಂಭವಾಗಿದೆ. ನಮ್ಮ ಪಕ್ಷದ ಬಿಎಲ್‌ಒಗಳು ತಮ್ಮ ಮನೆಯ ಸುತ್ತಮುತ್ತ ಪರಿಶೀಲನೆ ವೇಳೆ ಆಯೋಗದ ಅಽಕಾರಿಗಳಿಗೆ ಸಹಾಯ ಮಾಡುವಂತೆ ಕಿವಿಮಾತು ಹೇಳಿದರು.
ಮುಂಬರುವ ಚುನಾವಣೆ ಗೆಲುವಿಗೆ ಬಿಜೆಪಿ ಮಾಡುತ್ತಿರುವ ಕುತಂತ್ರವೆAದು ಕಾಂಗ್ರೆಸ್ಸಿಗರು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಜನತೆಗೆ ಇದರ ಉಪಯೋಗದ ಮಹತ್ವ, ಸತ್ಯಾಂಶ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ತಿಳಿಸಿದರು.
ಎಂಎಲ್‌ಸಿ ಕೆ.ಎಸ್. ನವೀನ್ ಮಾತನಾಡಿ, ಎಸ್‌ಐಆರ್ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಮಾಡುವ ಕಾರ್ಯವಲ್ಲ. ಅದು ಚುನಾವಣಾ ಆಯೋಗದ ಕರ್ತವ್ಯ. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಆಯೋಗವೇ ನಿರ್ವಹಣೆ ಮಾಡಲಿದೆ. ಆದ್ದರಿಂದ ಅರ್ಹರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಜಾಗ್ರತೆವಹಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಜಿ¯್ಲÁ ಉಪಾಧ್ಯಕ್ಷ ಡಾ. ಸಿz್ದÁರ್ಥ್ ಗುಂಡಾರ್ಪಿ, ಪದಾಽಕಾರಿಗಳಾದ ವೆಂಕಟೇಶ್‌ಯಾದವ್, ಸುರೇಶ್ ಸಿz್ದÁಪುರ, ನಾಗರಾಜ್ ಬೇದ್ರೆ, ನವೀನ್ ಚಾಲುಕ್ಯ, ಲೋಕೇಶ್, ನಾಗರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net