ಗ್ರಾಪಂಗಳ ವ್ಯಾಪ್ತಿಯ ವಾಣಿಜ್ಯ ಕಂದಾಯ ಹೆಚ್ಚಳಕ್ಕೆ ಚಿಂತನೆ

ಗ್ರಾಪA ಕಚೇರಿ ಸಾಂದರ್ಭೀಕ ಚಿತ್ರ
ಗ್ರಾಪA ಕಚೇರಿ ಸಾಂದರ್ಭೀಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ ರಾಜಸ್ವ ವಸೂಲಿಯಲ್ಲಿ ಪ್ರಗತಿ
  • ಆನ್‌ಲೈನ್, ಕ್ಯೂಆರ್‌ಕೋಡ್‌ನಿಂದ ಸುಧಾರಣೆ
  • ಮಹಾ ನಗರಪಾಲಿಕೆ
ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಜಿಲ್ಲೆಯ ೧೮೯ ಗ್ರಾಪಂಗಳ ಕಂದಾಯ ವಸೂಲಿಯಲ್ಲಿ(೨೦೨೫-೨೦೨೬ನೇ ಆರ್ಥಿಕ ಸಾಲು)ಗಣನೀಯ ಪ್ರಗತಿಯಾಗಿದೆ. ನಗ ದು ಜತೆಗೆ ಆನ್‌ಲೈನ್,ಕ್ಯೂಆರ್‌ಕೋಡ್ ವ್ಯವಸ್ಥೆಗೂ ಅವಕಾಶವಿರುವುದು ಕಂದಾಯ ಪಾವತಿ ಪ್ರಮಾಣ ಉತ್ತಮಗೊಳ್ಳಲು ಕಾರ ಣವಾಗಿದೆ. ವಾಣಿಜ್ಯಕಟ್ಟಡ,ಸಂಸ್ಥೆಗಳಿಗೆ ಸಂಬAಽಸಿದAತೆ ನಿಯಮಾನುಸಾರ ಪ್ರಸಕ್ತ ಸಾಲಿನಿಂದ ಕಂದಾಯ ಹೆಚ್ಚಿಸುವ ಮೂ ಲಕ ಗ್ರಾಪಂಗಳ ಆದಾ ಯ ಹೆಚ್ಚಳಕ್ಕೂ ಚಿಂತನೆ ನಡೆದಿದೆ.
ಹೊಳಲ್ಕೆರೆ ಪುರಸಭೆ ವ್ಯಾಪ್ತಿಗೆ ಅರೇಹಳ್ಳಿ ಗ್ರಾಪಂ ಸೇರ್ಪಡೆಯಿಂದ ಜಿಲ್ಲೆಯ ಗ್ರಾಪಂಗಳ ಸಂಖ್ಯೆ ೧೮೯ರಿಂದ ೧೮೮ಕ್ಕೆ ಕುಸಿದಿ ದೆ. ಚಿತ್ರದುರ್ಗನಗರ ವ್ಯಾಪ್ತಿಯಲ್ಲಿರುವ ಆಯ್ದ ೮ ಗ್ರಾಪಂಗಳೊAದಿಗೆ ಚಿತ್ರದುರ್ಗ ನಗರಸಭೆಯನ್ನು ಮಹಾ ನಗರಪಾಲಿಕೆ ಯನ್ನಾಗಿ ಮೇಲ್ದರ್ಜೆ ಗೇರಿಸುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿದೆ. ಸರ್ಕಾರ ಒಪ್ಪಿದರೆ ೮ ಗ್ರಾಪಂಗಳು ಉದ್ದೇಶಿತ ಪಾಲಿಕೆಗೆ ಸೇರುವ ಸಾಧ್ಯತೆ ಇದೆ. ಇದರಿಂದಾಗಿ ಗ್ರಾಪಂಗಳ ಸಂಖ್ಯೆ ೧೮೦ಕ್ಕೆ ಕುಸಿಯಲಿದೆ.
ನಿಖರತೆ ತಪ್ಪುವುದು ಬೇಡ:
ಕುಡಿವ ನೀರು, ಮನೆ, ವಾಣಿಜ್ಯ ಕಟ್ಟಡ ಮೊದಲಾದ ಮೂಲಗಳಿಂದ ಸಂಗ್ರಹಿಸುವ ಕಂದಾಯವೇ ಗ್ರಾಪಂಗಳಿಗೆ ಮೂಲ ಆದಾ ಯ. ಆದರೆ,ಕಂದಾಯ ವಸೂಲಿಯಲ್ಲಿ ರಾಜ್ಯದಲ್ಲೇ ಉತ್ತಮ ಎಂಬ ರ‍್ಯಾಂಕಿAಗ್‌ಗಾಗಿ ಟ್ಯಾಕ್ಸ್ ಮೊತ್ತವನ್ನೇ ಕಡಿಮೆ ತೋರಿಸು ವಂಥ ಪ್ರಯತ್ನಗಳಾಗಿವೆ ಎಂಬ ಮಾತಿದೆ. ಬೇರೆಡೆ ಇರಬಹುದಾದ ಇಂಥ ವಿಚಾರಗಳು ನಮಗೆ ಬೇಡ. ನಮ್ಮಲ್ಲಿ ವಸೂಲಾಗ ಬೇಕಾಗಿರುವ ಕಂದಾಯ ಮೊತ್ತ ಹಾಗೂ ವಸೂಲಾದ ಮೊತ್ತದ ನಿಖರತೆ ಸರಿ ಇರಲಿ ಎಂದು ಜಿಪಂ ಸಿಇಒ ಡಾ.ಎಸ್.ಆಕಾಶ್ ಅಽಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಕುಡಿವ ನೀರು:ಜಿಲ್ಲೆಯಲ್ಲಿ ೨೦೧೫ರಿಂದ ಪ್ರಾರಂಭಿಸಿರುವ ೧೧ ಬಹು ಗ್ರಾಮ ಕುಡಿವ ನೀರು ಯೋಜನೆ(ಎಂವಿಎಸ್)ಪೈಕಿ ೨ ಪೂರ್ಣಗೊಂಡಿವೆ. ಮುಂದಿನ ಬೇಸಿಗೆ ಒಳಗೆ ಎಲ್ಲ ಎಂವಿಎಸ್‌ಗಳನ್ನು ಪೂರ್ಣಗೊಳಿಸುವ ಗುರಿ ಇದೆ. ವಿವಿ ಸಾಗರ ಜಲಾಶ ಯದಿಂದ ನೀರು ಪೂರೈಕೆ ಜಾಲ ಸುಧಾರಣೆಯಾದರೆ ಬೇಸಿಗೆ ಸಮಯದಲ್ಲಿ ನೀರಿನ ಅಭಾವ ನೀಗಲು ಆಗುವ ಕೋಟ್ಯಂತರ ರೂ.ಅನಗತ್ಯ ವೆಚ್ಚಕ್ಕೆ ಕಡಿ ವಾಣ ಹಾಕಬಹುದಾಗಿದೆ.
ಸಂಕಷ್ಟ ಸಮಯದಲ್ಲಿ ಸಾವಿರಾರು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವುದು,ನೂರಾರು ಖಾಸಗಿ ಕೊಳ ವೆ ಬಾವಿಗಳ ಬಾಡಿಗೆ,ಹೊಸ ಕೊಳವೆ ಬಾವಿ ಕೊರೆಸುವುದು ತಪ್ಪಲಿದೆ ಎನ್ನುತ್ತಾರೆ ಅಽಕಾರಿಗಳು.
ಗ್ರಾಮಫೋನ್:
ರಾಜ್ಯದಲ್ಲೇ ಪ್ರಥಮ ಎಂಬAತೆ ಜನರ ಅಹವಾಲು ಆಲಿಸಿ,ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂಥ `ಗ್ರಾಮ ಫೋನ್' ವ್ಯ ವಸ್ಥೆ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ. ಕುಡಿವ ನೀರು, ಸ್ವಚ್ಛತೆ ಮೊದಲಾದ ದೂರುಗಳಿಗೆ ಸಂಬAಽಸಿದAತೆ ಫೋನ್ ಮಾಡುವ ವರ ಮೊಬೈಲ್ ನಂ.ಗೆ ಸಂದೇಶ ರವಾನಿಸುವುದರೊಂದಿಗೆ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸುವ ಪ್ರಯತ್ನ ನಡೆಯುತ್ತಿದೆ. ಸಿಇಒ ಅವರ ಕಚೇರಿ ಮೊಬೈಲ್ ನಂ.ವ್ಯಾಟ್ಸ್ಆ್ಯಪ್ ಡಿಪಿಯಲ್ಲಿ ಗ್ರಾಮ್‌ಪೋನ್ ದೂರವಾಣಿ ಸಂಖ್ಯೆ ಇದೆ.
ಕಂದಾಯ ವಸೂಲಿ
ಜಿಲ್ಲೆಯ ಎಲ್ಲ ಗ್ರಾಪಂಗಳಿAದ ೨೦೨೨-೨೩ನೇ ಸಾಲಿನಲ್ಲಿ ಕರೆಂಟ್ ಡಿಮ್ಯಾಂಡ್ ೧೬.೩೦ ಕೋಟಿ ರೂ.ಪೈಕಿ ೫.೩೨ ಕೋಟಿ ರೂ.(ಶೇ.೩೨.೬೨)ವಸೂಲಾಗಿದೆ. ಅದೇ ರೀತಿ ೨೦೨೩-೨೪ನೇ ಸಾಲಿನಲ್ಲಿ ಡಿಮ್ಯಾಂಡ್ ೩೭.೩೯ ಕೋಟಿ ರೂ. ಪೈಕಿ ೧೩.೪೪ ಕೋಟಿ ರೂ.(ಶೇ.೩೫.೯೪.) ವಸೂಲಾದರೆ, ೨೦೨೪-೨೫ನೇ ಸಾಲಿನ ಡಿಮ್ಯಾಂಡ್ ೩೫.೯೮ ಕೋಟಿ ರೂ.(ಶೇ.೭೫.೩೮) ಸಂಗ್ರಹವಾಗಿದೆ. ೨೦೨೫-೨೬ನೇ ಸಾಲಿನ ಜಿಲ್ಲೆಯ ಕರೆಂಟ್ ಡಿಮ್ಯಾಂಡ್ ೩೫.೦೫ ಕೋಟಿ ರೂ.ಪೈಕಿ ೩೦.೨೯ ಕೋಟಿ ರೂ.(ಶೇ.೮೬.೪೨)ವಸೂಲಾಗಿದೆ
ಕಳೆದ ಆರ್ಥಿಕ ಸಾಲಿನ ವಸೂಲಿ ವಿವರ
ತಾಲೂಕು-ಗ್ರಾಪಂಗಳ ಸಂಖ್ಯೆ- ಕರೆಂಟ್ ಡಿಮ್ಯಾಂಡ್-ವಸೂಲಿ(ಕೋ.ರೂ.ಗಳಲ್ಲಿ)-ಶೇಕಡ
ಹಿರಿಯೂರು ೩೩ ೫.೮೨ ೪.೪೮ ೭೭.೦೫%
ಚಳ್ಳಕೆರೆ ೪೦ ೬.೮೨ ೫.೭೨ ೮೩.೮೫%
ಮೊಳಕಾಲ್ಮೂರು ೧೬ ೨.೩೪ ೧.೯೭ ೮೩.೯೪%
ಹೊಳಲ್ಕೆರೆ ೨೯ ೪.೦೪ ೩.೪೫ ೮೫.೨೬%
ಹೊಸದುರ್ಗ ೩೩ ೫.೦೫ ೪.೬೧ ೯೧.೩೪%
ಚಿತ್ರದುರ್ಗ ೩೮ ೧೦.೯೪ ೧೦.೪೧ ೯೧.೭೦%
"

....ಕೋಟ್...ಜಿಲ್ಲೆಯಲ್ಲಿರುವ ವಿಂಡ್‌ಮಿಲ್‌ಗಳಿAದಲೂ ಕಂದಾಯ ವಸೂಲಿ ಮಾಡಲಾಗುತ್ತಿದೆ. ಕೃಷಿ ಚಟುವಟಿಕೆ ಭಾಗವೆಂಬ ಕಾರಣಕ್ಕೆ ಸೋ ಲಾರ್ ವಿದ್ಯುತ್ ಉತ್ಪಾದನ ಘಟಕಗಳಿಂದ ಕಡಿಮೆ ಪ್ರಮಾಣದಲ್ಲಿ ಕಂದಾಯ ಸಂಗ್ರಹವಾಗುತ್ತಿದೆ. ಸರ್ಕಾರದ ಹಂತದಲ್ಲಿ ಅಗತ್ಯ ಕ್ರಮ ವಾದರೆ ಇವುಗಳಿಂದ ಕಂದಾಯದ ಆದಾಯ ಹೆಚ್ಚಾಗಲಿದೆ. ಗ್ರಾಪಂಗಳ ವ್ಯಾಪ್ತಿಯಲ್ಲಿರುವ ವಾಣಿಜ್ಯ ಕಟ್ಟಡಗಳ ಕಂದಾಯವನ್ನು ಹೆಚ್ಚಿ ಸುವ ಚಿಂತನೆ ಇದೆ.

— ಡಾ.ಎಸ್.ಆಕಾಶ್, ಸಿಇಒ, ಜಿಪಂ, ಚಿತ್ರದುರ್ಗ

"

ಕ್ಯೂಆರ್ ಕೋಡ್, ಆನ್‌ಲೈನ್ ಮೂಲಕ ಕಂದಾಯ ಪಾವತಿಸಿಕೊಳ್ಳಲಾಗುತ್ತಿದೆ. ಚಿತ್ರದುರ್ಗ ತಾಲೂಕು ಮೆದೇಹಳ್ಳಿ ಗ್ರಾಪಂನಲ್ಲಿ ಕಳೆದ ಹಣಕಾಸು ಸಾಲಿನ ಕರೆಂಟ್ ಡಿಮ್ಯಾಂಡ್ ೧.೧೦ ಕೋಟಿ ರೂ.ಪೈಕಿ, ೯೮ ಲಕ್ಷ ರೂ. ಕಂದಾಯ ವಸೂಲಾಗಿದೆ.

— ಆರ್. ಪಾತಣ್ಣ, ಪಿಡಿಒ, ಮೆದೇಹಳ್ಳಿ ಗ್ರಾಪಂ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net