ಬಿಜೆಪಿಯಿಂದ ಭಾನುವಾರ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ವಿಧಾನಸಭಾ ಕ್ಷೇತ್ರದ ಮಾದಿಗ ಸಮುದಾಯದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಡಾ. ಸಿದ್ಧಾರ್ಥ್ ಗುಂಡಾರ್ಪಿ, ಜಿ.ಎಸ್. ಅನಿತ್‌ಕುಮಾರ್, ಸೌಭಾಗ್ಯಾ ಬಸವರಾಜನ್ ಉದ್ಘಾಟಿಸಿದರು. ಜಯಪ್ಪ, ನಾಗರಾಜ್, ಚೇತನ್, ಪ್ರಹ್ಲಾದ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಒಳ ಮೀಸಲಾತಿ ಜಾರಿಯಲ್ಲಿ ಮೀನಮೇಷ ಎಣಿಸಿದ್ದೇಕೆ ?
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ. ಸಿದ್ದಾರ್ಥ ಗುಂಡಾರ್ಪಿ ವಾಗ್ದಾಳಿ
ಕೇಂದ್ರ ಸರ್ಕಾರ
ಚಿತ್ರದುರ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರ ಮೀಸಲಾತಿ ಪ್ರಮಾಣ ಕಡಿತಗೊಳಿಸಿ, ಒಳಮೀಸಲಾತಿ ನೀಡುವ ಮೂಲಕ ಮಾದಿಗ ಸಮುದಾಯಕ್ಕೆ ದ್ರೋಹ ಎಸಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ. ಸಿದ್ದಾರ್ಥ ಗುಂಡಾರ್ಪಿ ಆರೋಪಿಸಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಮಾದಿಗ ಸಮುದಾಯದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಈ ಸಮುದಾಯಕ್ಕೆ ಒಳ ಮೀಸಲಾತಿ ನೀಡಿರುವುದಾಗಿ ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆ ಯುತ್ತಿ ದ್ದಾರೆ. ಆದರೆ, ಅನ್ಯಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅತಿ ಚಿಕ್ಕ ಸಮುದಾಯಕ್ಕೂ ಆದ್ಯತೆ ನೀಡುತ್ತದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಎಲ್ಲ ಸಮುದಾ ಯಗಳಿಗೂ ಸಮರ್ಪಕವಾಗಿ ಒಳ ಮೀಸಲಾತಿ ಹಂಚಿಕೆ ಮಾಡಿತ್ತು. ಗ್ಯಾರಂಟಿಗಳ ಆಮಿಷ ತೋರಿಸಿ ರಾಜ್ಯದಲ್ಲಿ ಅಽಕಾರ ಹಿಡಿದ ಕಾಂಗ್ರೆಸ್ ಒಳಮೀಸಲು ವಿಚಾರದಲ್ಲಿ ತಾರತಮ್ಯ ಮಾಡಿದೆ. ಹೀಗಾಗಿ ಸಮುದಾಯ ಎಚ್ಚರವಹಿಸಬೇಕೆಂದು ಹೇಳಿದರು.
ಬಿಜೆಪಿ ಮುಖಂಡ ಜಿ.ಎಸ್. ಅನಿತ್‌ಕುಮಾರ್ ಮಾತನಾಡಿ, ಬಿಜೆಪಿ ಮೇಲ್ವರ್ಗದವರ ಪಕ್ಷವೆಂಬ ಭಾವನೆ ಈ ಹಿಂದೆ ಇತ್ತು. ಆದ ರೆ,ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅದು ಸುಳ್ಳಾಗಿದೆ. ಹಿಂದುಳಿದವರು, ಶೋಷಿತ ಸಮುದಾಯದವರು ಬೆಳೆಯಲು ಪಕ್ಷದಲ್ಲಿ ಅವಕಾಶಗಳಿವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ತಳ ಸಮುದಾಯದ ಅನೇಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಹೀಗಾಗಿ ಮಾದಿಗ ಸಮಾಜದವರು ಬಿಜೆಪಿ ಬೆಂಬಲಿಸುವ ಮೂಲಕ ಪ್ರಗತಿ ಹೊಂದಬೇಕು. ಈ ದೃಷ್ಟಿಯಿಂದ ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿ ದರು.
ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಾ ಬಸವರಾಜನ್ ಮಾತನಾಡಿ, ಶೋಷಿತರು ಕಾಂಗ್ರೆಸ್ ನಂಬಿ ಕುಳಿತಿದ್ದಾರೆ. ಆದರೆ, ಈವರೆಗೂ ಅವರನ್ನು ಉದ್ದಾರ ಮಾಡಿಲ್ಲ. ಬಿಜೆಪಿ ಅಽಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆಂದು ಸುಳ್ಳು ಹೇಳುವ ಮೂಲಕ ಮತ ಬ್ಯಾಂಕ್ ಮಾಡಿಕೊಂಡಿದೆ. ಆದರೆ, ಅದನ್ನೇ ತಿರುಚಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಯಾವ ಪಕ್ಷ ಎಂದು ಪ್ರಶ್ನಿಸಿದರು.
ತಾಪಂ ಮಾಜಿ ಅಧ್ಯಕ್ಷ ಜಯಪ್ಪ ಮಾತನಾಡಿ, ಎಚ್.ಸಿ. ಮಹದೇವಪ್ಪ ಅವರ ಕೈಗೊಂಬೆಯAತೆ ವರ್ತಿಸಿದ ಸಿದ್ದರಾಮಯ್ಯ ಒಳಮೀಸಲಾತಿ ವಿಚಾರದಲ್ಲಿ ಮಾದಿಗ ಸಮಾಜಕ್ಕೆ ದ್ರೋಹ ಎಸಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗರಾಜ್, ನಿವೃತ್ತ ಪ್ರಾಧ್ಯಾಪಕ ನಾಗರಾಜ್, ಚೇತನ್, ಪ್ರಹ್ಲಾದ್ ಇತರರಿದ್ದರು.