ಒಳ ಮೀಸಲಾತಿ ಅನುಷ್ಠಾನಗೊಳಿಸುವ ರಾಜ್ಯಸರ್ಕಾರದ ನಿರ್ಣಯವನ್ನು ಸ್ವಾಗತಿಸಿ ಕಾಂಗ್ರೆಸ್ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಶ ನಿವಾರ ಪಕ್ಷದ ಕಚೇರಿ ಬಳಿ ಸಂಭ್ರಮಾಚರಣೆ ನಡೆಸಿದರು. ಎಂ.ಕೆ.ತಾಜ್‌ಪೀರ್, ಡಿ.ಎನ್.ಮೈಲಾರಪ್ಪ, ನರಸಿಂಹರಾಜು ಇತರರಿದ್ದರು.
ಚಿತ್ರದುರ್ಗ: ಒಳ ಮೀಸಲಾತಿ ಜಾರಿಗೊಳಿಸುವ ರಾಜ್ಯ ಸರ್ಕಾರದ ನಿರ್ಣಯವನ್ನು ಸ್ವಾಗತಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ನಗರದಲ್ಲಿ ಸಿಹಿ ವಿತರಿಸಿದರು. ಪಕ್ಷದ ಜಿಲ್ಲಾ ಕಾಂಗ್ರೆಸ್ ಬಳಿ ಸಂಭ್ರಮಿಸಿದ ಕಾರ್ಯಕರ್ತರು, ಪ್ರಮುಖರು ಒಳ ಮೀಸಲು ಜಾರಿಗೊಳಿಸಿದ ಸರ್ಕಾರದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ೨೦೨೨ರಲ್ಲಿ ಚಿತ್ರದುರ್ಗದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಎಸ್‌ಸಿ, ಎಸ್‌ಟಿ ಏಕತಾ ಸಮಾವೇಶದಲ್ಲಿ ಕಾಂಗ್ರೆಸ್ ಅಽಕಾರಕ್ಕೆ ಬಂದ ಬಳಿಕ ಒಳ ಮೀಸಲಾತಿ ಅನುಷ್ಠಾನಗೊಳಿಸುವುದಾಗಿ ಘೋಷಿಸಲಾಗಿತ್ತು ಎಂದರು.
ಅಂದಿನ ಸಮಾವೇಶದಲ್ಲಿ ಕೊಟ್ಟಿದ್ದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ, ಸಾಧಕ ಬಾಧಕಗಳನ್ನು ಅಳೆದು ತೂಗಿ, ಎಲ್ಲ ಸಮುದಾ ಯಗಳ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನಾತ್ಮಕವಾಗಿ ಎಸ್ಸಿ `ಎ' ಗುಂಪಿಗೆ ೫.೨೫, ಎಸ್ಸಿ `ಬಿ' ಗುಂಪಿಗೆ ೫.೨೫ ಹಾಗೂ ಎಸ್ಸಿ `ಸಿ' ಗುಂಪಿಗೆ ೪.೫ರಂತೆ ಅನುಷ್ಠಾನಗೊಳಿಸಿದೆ. ಈ ಐತಿಹಾಸಿಕ ನಿರ್ಣಯ ಸ್ವಾಗತಾರ್ಹ ಮತ್ತು ಇದು ಸಂವಿಧಾನಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದರು.
ಡಿಸಿಸಿ ಕಾರ್ಯದರ್ಶಿ ಡಿ.ಎನ್.ಸಂಪತ್‌ಕುಮಾರ್, ಮೈಲಾರಪ್ಪ, ಉಪಾಧ್ಯಕ್ಷ ರವಿಕುಮಾರ್, ಜಿಪಂ ಮಾಜಿ ಸದಸ್ಯ ನರಸಿಂಹ ರಾಜು, ಖಾಸಿಂ ಅಲಿ, ಕೋಟಿ, ತಿಪ್ಪೇಸ್ವಾಮಿ, ರಹಮಾನ್, ಪ್ರಸನ್ನ, ರಹಮಾನ್ ಇತರರಿದ್ದರು.