ಇತಿಹಾಸ ಅರಿಯಲು ಸಂಶೋಧನೆಗೆ ಮುಂದಾಗಿ

ಚಿತ್ರದುರ್ಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟಿçÃಯ ವಸ್ತು ಸಂಗ್ರಹಾಲಯ ದಿನಾಚರಣೆಯಲ್ಲಿ ಡಾ.ಎಸ್.ರೇವಣಸಿದ್ದಪ್ಪ ಮಾತನಾಡಿದರು. ಜಿ.ಪ್ರಲ್ಹಾದ್, ಡಾ.ಬಿ.ಸುರೇಶ್, ಪ್ರೊ.ಬಿ.ಇ.ಜಗನ್ನಾಥ, ಡಿ.ಗೋಪಾಲಸ್ವಾಮಿ ನಾಯಕ ಇದ್ದರು.
ಚಿತ್ರದುರ್ಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟಿçÃಯ ವಸ್ತು ಸಂಗ್ರಹಾಲಯ ದಿನಾಚರಣೆಯಲ್ಲಿ ಡಾ.ಎಸ್.ರೇವಣಸಿದ್ದಪ್ಪ ಮಾತನಾಡಿದರು. ಜಿ.ಪ್ರಲ್ಹಾದ್, ಡಾ.ಬಿ.ಸುರೇಶ್, ಪ್ರೊ.ಬಿ.ಇ.ಜಗನ್ನಾಥ, ಡಿ.ಗೋಪಾಲಸ್ವಾಮಿ ನಾಯಕ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ ಡಾ.ಬಿ.ಸುರೇಶ್ ಸಲಹೆ
  • ಅಂತಾರಾಷ್ಟಿçÃಯ ವಸ್ತು ಸಂಗ್ರಹಾಲಯ ದಿನ ಆಚರಣೆ
  • ಕಾಲೇಜು ಶಿಕ್ಷಣ ಇಲಾಖೆ
ಚಿತ್ರದುರ್ಗ: ಪಠ್ಯದ ಮೂಲಕ ಇತಿಹಾಸ ತಿಳಿಯುವುದು ಒಂದೆಡೆಯಾದರೆ, ಸಂಶೋಧನೆ ಮೂಲಕ ಅರಿತಾಗ ನೈಪುಣ್ಯ ಹೆಚ್ಚಲಿ ದೆ ಎಂದು ಪ್ರಾಧ್ಯಾಪಕ ಡಾ.ಬಿ.ಸುರೇಶ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರಂಗಯ್ಯನಬಾಗಿಲು ಸಮೀಪದ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಸೋಮವಾರ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಕಲಾ (ಸ್ವಾಯತ್ತ) ಕಾಲೇಜಿನಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟಿçÃಯ ವಸ್ತು ಸಂಗ್ರಹಾಲಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಇತಿಹಾಸದ ಕುರುಹುಗಳನ್ನು ತಿಳಿಯುವುದು ಈ ದಿನಾಚರಣೆಯ ಪ್ರಮುಖ ಉದ್ದೇಶ. ಹೀಗಾಗಿ ೧೯೭೭ರಿಂದ ಆಚರಿಸುತ್ತ ಬರ ಲಾಗಿದೆ. ಬ್ರಿಟಿಷರ ಕಾಲದಲ್ಲಿ ಇತಿಹಾಸದ ಅಧ್ಯಯನ ಆರಂಭಗೊAಡಿತು. ಅಂದಿನಿAದ ಶಾಸನ, ಸ್ಮಾರಕ, ವೀರಗಲ್ಲುಗಳನ್ನು ಸಂಗ್ರಹಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಿ ಎಂದರು.
ಸಹ ಪ್ರಾಧ್ಯಾಪಕ ಡಾ.ಎಸ್.ರೇವಣಸಿದ್ದಪ್ಪ ಮಾತನಾಡಿ, ವಿಶ್ವದ ೧೫೮ ದೇಶಗಳ ೩೭ ವಸ್ತು ಸಂಗ್ರಹಾಲಯಗಳಲ್ಲಿ ಅಂತಾ ರಾಷ್ಟಿçÃಯ ವಸ್ತು ಸಂಗ್ರಹಾಲಯ ದಿನ ಆಚರಿಸಲಾಗುತ್ತಿದೆ. ಪೂರ್ವಜರ e್ಞÁನ, ವಿe್ಞÁನ, ಸಾಂಸ್ಕೃತಿಕ ಪರಂಪರೆಯನ್ನು ಜೀವಂತ ಸ್ಮಾರಕಗಳನ್ನಾಗಿ ಇಟ್ಟುಕೊಂಡಿರುವ ಕೇಂದ್ರಗಳೇ ವಸ್ತು ಸಂಗ್ರಹಾಲಯಗಳು ಎಂದು ತಿಳಿಸಿದರು.
ಯುನೆಸ್ಕೋ ಅಡಿಯಲ್ಲಿ ೧೯೪೬ರಲ್ಲಿ ಐಸಿಒಎಂ, ಎನ್‌ಜಿಒ ಆರಂಭವಾಯಿತು. ವಸ್ತು ಸಂಗ್ರಹಾಲಯಗಳು ಚರಿತ್ರಕಾರನ ಅವಿಭಾಜ್ಯ ಅಂಗ. ಇವು ಶಿಕ್ಷಣ ಮತ್ತು ಸಂಶೋಧನೆಗೆ ಅನುಕೂಲವಾಗಲಿದೆ. ಪ್ರಾಥಮಿಕ ಆಕಾರಗಳನ್ನು ಒದಗಿಸಿಕೊಡುತ್ತವೆ ಎಂದು ಹೇಳಿದರು.
ಲಕ್ಕುಂಡಿಯನ್ನು ಬಯಲು ಸಂಗ್ರಹಾಲಯವನ್ನಾಗಿ ಮಾಡಲು ಹೊರಟಿರುವುದು ಹೆಮ್ಮೆಯ ಸಂಗತಿ. ಪ್ರಾಚೀನ ಅವಶೇಷಗಳು ಎಲ್ಲಿಯಾದರೂ ಕಂಡು ಬಂದಲ್ಲಿ ನಿರ್ಲಕ್ಷಿಸದೆ ವಸ್ತು ಸಂಗ್ರಹಾಲಯಕ್ಕೆ ತಂದು ಕೊಡುವುದು ಎಲ್ಲರ ಜವಾಬ್ದಾರಿ ಎಂದು ಸಲಹೆ ನೀಡಿದರು.
ರೀಲ್ಸï ಕ್ರೇಜ್‌ಗಾಗಿ ಮೂರ್ತಿಗಳನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ. ಇತಿಹಾಸದ ಪ್ರe್ಞೆ ಜನರಲ್ಲಿ ಇಲ್ಲದಂತಾಗಿದೆ. ಈ ಕುರಿತು ಜಾಗೃತಿ ಮೂಡಿಸುವ ಮೂಲಕ ಪ್ರಾಚ್ಯವಸ್ತು, ದೇವಾಲಯಗಳು ಪೂರ್ವಜರ ಬದುಕಿನ ಸಾಂಸ್ಕೃತಿಕ ಬೇರುಗಳು ಎಂಬು ದನ್ನು ಮನವರಿಕೆ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ, ಚಿತ್ರದುರ್ಗದ ಮುರುಘಾಮಠ, ಬೆಂಗಳೂರು, ಧರ್ಮಸ್ಥಳ,ಬಾದಾಮಿ ಐಹೊಳೆ ಪಟ್ಟದ ಕಲ್ಲಿನಲ್ಲಿ ವಸ್ತು ಸಂಗ್ರಹಾಲಯಗಳಿವೆ. ಬಾಂಬೆ, ಲಂಡನ್‌ನಲ್ಲಿ ದೊಡ್ಡ ಮ್ಯೂಸಿಯಂ ಇದೆ. ಭಾರತದಲ್ಲಿ ಇಲ್ಲದಂಥ ವಸ್ತು ಸಂಗ್ರಹಾಲಯಗಳನ್ನು ಅಲ್ಲಿ ಕಾಣಬಹುದು. ಸುತ್ತಮುತ್ತ ಎಲ್ಲಿಯಾದರೂ ಸ್ಮಾ ರಕ, ಶಾಸನ, ವಿಗ್ರಹಗಳು ಕಂಡು ಬಂದಲ್ಲಿ ವಸ್ತು ಸಂಗ್ರಹಾಲಯಕ್ಕೆ ತಂದು ಕೊಡುವ ಮೂಲಕ ರಕ್ಷಿಸಿ ಎಂದು ಮನವಿ ಮಾಡಿ ದರು.
ಸಹ ಪ್ರಾಧ್ಯಾಪಕ ಪ್ರೊ.ಬಿ.ಇ.ಜಗನ್ನಾಥ ಮಾತನಾಡಿ, ಪ್ರಾಚೀನ ಕಾಲದ ಅವಶೇಷಗಳನ್ನು ಸಂಗ್ರಹಿಸಬೇಕೆAಬ ಕಲ್ಪನೆ ಹುಟ್ಟಿ ದ್ದು,ಈಜಿ¥್ಟï‌ನಲ್ಲಿ, ಭಾರತದಲ್ಲಿ ೩೩ ಸ್ಥಳಗಳು ವಿಶ್ವ ಪಾರಂಪರಿಕ ಪಟ್ಟಿಯಲ್ಲಿವೆ. ೧೯೦೪ರಲ್ಲಿ ಪ್ರಾಚ್ಯ ವಸ್ತು ಸಂಗ್ರ ಹಾಲಯ ಆ ರಂಭಗೊAಡಿತು. ಎಷ್ಟೋ ಶಾಸನಗಳು ಸಂರಕ್ಷಣೆಯಿಲ್ಲದೆ ಶಿಥಿಲಾವಸ್ಥೆಯಲ್ಲಿವೆ. ಹಿರಿಯರು ಬಿಟ್ಟು ಹೋಗಿರುವ ಪಳಯುಳಿಕೆ ಗಳನ್ನು ಸಂರಕ್ಷಿಸಬೇಕಿದೆ ಎಂದು ಸಲಹೆ ನೀಡಿದರು. ಸರ್ಕಾರಿ ವಸ್ತು ಸಂಗ್ರಹಾಲಯದ ಸಹಾಯಕ ನಿರ್ದೇಶಕ ಜಿ. ಪ್ರಲ್ಹಾದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net