ಉತ್ತರಾಖಂಡ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಿಸಿ ಅಸ್ಪÈಶ್ಯತೆ ಆಚರಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಛಲವಾದಿ ಸಮುದಾಯದವರು ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಬಸವನಾಗಿದೇವ ಸ್ವಾಮೀಜಿ, ಮಂಜುಳಮ್ಮ, ತಿಪ್ಪೇಸ್ವಾಮಿ, ಶಿವಕುಮಾರ್, ನಿರಂಜನ ಚೀಳಂಗಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಮಲೀಲಾ ಮೈದಾನ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಕೇಂದ್ರ ಗೃಹ ಸಚಿವ ಅಮಿತ್ ಶಾ
ಚಿತ್ರದುರ್ಗ: ಉತ್ತರಾಖಂಡ ರಾಜ್ಯದ ಹಲ್ದವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದ ಜಾಗವನ್ನು ಶ್ರೀರಾಮಸೇನೆ ಪದಾಽಕಾರಿಗಳು ಶುದ್ಧೀಕರಿಸಿರುವುದನ್ನು ಖಂಡಿಸಿ ಛಲವಾದಿ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು.
ದಲಿತ ಸಮುದಾಯದವರನ್ನು ಅವಮಾನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ರವಾನಿಸಿದರು.
ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಬಲಪಂಥೀಯ ಶ್ರೀರಾಮಸೇನೆ ಪದಾಽಕಾರಿಗಳು ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಗೋಮೂತ್ರ, ಸಗಣಿಯಿಂದ ಸ್ವಚ್ಛಗೊಳಿಸಿ ಇಂದಿಗೂ ಅಸ್ಪÈಶ್ಯತೆ ಪ್ರದರ್ಶಿಸಿರುವುದು ಅತ್ಯಂತ ಅಮಾನವೀಯ. ಮಾನವ ಸಂಬAಧ ಛಿದ್ರಗೊಳಿಸುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಛಲವಾದಿ ಸಮಾಜದ ಮುಖಂಡರಾದ ಮಂಜುಳಮ್ಮ, ವೈ. ತಿಪ್ಪೇಸ್ವಾಮಿ, ಎಚ್. ಶಿವಕುಮಾರ್, ನಿರಂಜನ ಚೀಳಂಗಿ, ಎಚ್. ಅಣ್ಣಪ್ಪಸ್ವಾಮಿ, ರಾಮಕೃಷ್ಣ, ಟಿ. ನರಸಿಂಹಮೂರ್ತಿ, ಎನ್. ಮ¯್ಲÉÃಶ್, ಕುಶ, ವೀಣಾ ಗೌರಣ್ಣ, ಸಹನಾ ಇತರರಿದ್ದರು.