ಚಿತ್ರದುರ್ಗ: ಒಳ ಮೀಸಲಾತಿಯಿಂದ ಬಲಗೈ ಸಮುದಾಯದಕ್ಕೆ ಆಗುವ ಅನ್ಯಾಯ ವಿರೋಽಸಿ, ಹಳೆಯ ಮೀಸಲಾತಿ ಮುಂದು ವರಿಸುವAತೆ ಆಗ್ರಹಿಸಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾವೇಶದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಛಲವಾದಿ ನಾರಾಯ ಣಸ್ವಾಮಿ ಅವರನ್ನು ಅವಮಾನಿಸಿರುವುದು ಖಂಡನೀಯ ಎಂದು ಛಲವಾದಿ ತಿಪ್ಪೇಸ್ವಾಮಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ, ಕಮ್ಯುನಿಸ್ಟ್ ಇನ್ನಿತರ ಪಕ್ಷಗಳ ಮು ಖಂಡರು, ಕಾರ್ಯಕರ್ತರು ಪಕ್ಷಾತೀತವಾಗಿ ಹೋರಾಟದಲ್ಲಿ ಭಾಗವಹಿಸಿದ್ದರು.
ಮಠಾಽÃಶರ ನೇತೃತ್ವದಲ್ಲಿ ನಡೆಯುತ್ತಿದ್ದ ಬೃಹತ್ ಪ್ರತಿಭಟನಾ ಸಮಾವೇಶದ ವೇಳೆ ವಿಧಾನಪರಿಷತ್ ವಿಪಕ್ಷ ನಾಯಕ ಛಲ ವಾದಿ ನಾರಾಯಣಸ್ವಾಮಿ ವೇದಿಕೆ ಏರಿ ಮಾತನಾಡುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿ, ವೇದಿಕೆಯಿಂದ ಕೆಳಗಿಳಿ ಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕ ಎಂಬ ಒಂದೇ ಕಾರಣಕ್ಕೆ ಅವಮಾನಿಸಿz್ದÁರೆ. ಇದು ಪಕ್ಷವೊಂದರ ಕಾರ್ಯಕ್ರಮವಲ್ಲ. ಇಡೀ ಬಲಗೈ ಸಮು ದಾಯದ ಹಿತ ಅಡಗಿದೆ. ಅದಕ್ಕಾಗಿ ರೂಪಿಸಿದ ಹೋರಾಟದಲ್ಲಿ ಇಂತಹ ತಾರತಮ್ಯ ಧೋರಣೆ ಕೈ ಕಾರ್ಯಕರ್ತರಿಂದ ನಿರೀಕ್ಷಿ ಸಿರಲಿಲ್ಲ ಎಂದರು.
ಎಸ್‌ಸಿಎಸ್‌ಪಿ -ಟಿಎಸ್‌ಪಿ ಅನುದಾನ ದುರ್ಬಳಕೆ ವಿಚಾರವನ್ನು ಛಲವಾದಿ ನಾರಾಯಣಸ್ವಾಮಿ ಸದನದಲ್ಲಿ ಪ್ರಬಲವಾಗಿ ಖಂಡಿಸಿ, ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಕೈ ಕಾರ್ಯಕರ್ತರ ಈ ವರ್ತನೆಗೆ ಕಾರಣವಿರಬಹುದು. ಆದರೆ, ದಲಿತ ಸಮುದಾಯದ ಪರ ಹೋರಾಟ ಮಾಡುವ ನಾಯಕರಿಗೆ ಮಾತನಾಡಲು ಅವಕಾಶ ನೀಡದಿರುವುದು ಅತ್ಯಂತ ನೋವಿನ ಸಂಗ ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೋಸ್ಟರ್ ಪದ್ಧತಿಯಿಂದ ಎಡಗೈ ಮತ್ತು ಬಲಗೈ ಎರಡೂ ಸಹೋದರ ಸಮುದಾಯಗಳಿಗೆ ಆಗುವ ಅನ್ಯಾಯವನ್ನು ಸಮಾಜ ಕ ಲ್ಯಾಣ ಸಚಿವರಾಗಿಯೂ ಎಚ್.ಸಿ. ಮಹದೇವಪ್ಪ ಹಿಂದುಳಿದವರ ಹಿತ ಕಾಯದಿರುವ ಕುರಿತು ಸಮಾವೇಶದಲ್ಲಿ ಲಕ್ಷಾಂತರ ಮಂ ದಿಯ ಗಮನ ಸೆಳೆಯಲಿz್ದÁರೆಂದು ಭಾಷಣಕ್ಕೆ ಅಡ್ಡಿ ಉಂಟು ಮಾಡಿz್ದÁರೆ.
ಎಸ್ಟಿ ಸಮುದಾಯಕ್ಕೆ ೧೪ ಸಾವಿರ ಕೋಟಿ ರೂ.ಅನ್ಯಾಯವಾಗಿದೆ ಎಂದು ಕೈ ನಾಯಕ ಉಗ್ರಪ್ಪ ಅವರೇ ಖಂಡಿಸಿz್ದÁರೆ. ಸಮಾಜದ ಪ್ರಶ್ನೆ ಎದುರಾದಾಗ ಬೆನ್ನೆಲುಬಾಗಿ ನಿಲ್ಲ ಬೇಕೇ ಹೊರತು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದರು.