ಹೆಣ್ಣು ಮಕ್ಕಳ ಸಂಖ್ಯೆ ಕುಸಿತಕ್ಕೆ ಕಳವಳ

 ಚಿತ್ರದುರ್ಗದಲ್ಲಿ ಶುಕ್ರವಾರ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಡಾ.ಎಸ್.ಸೌಮ್ಯಾ, ಕೆ.ಪಿ.ಮೀನಾಕ್ಷಿ, ಗಾಯತ್ರಿ ಶಿವರಾಂ, ಎಂ. ಉಮೇಶ್, ಡಾ.ಡಿ.ಎಂ. ಅಭಿನವ್, ಡಾ. ರೇಖಾ, ಡಾ. ದೇವರಾಜ್, ಡಾ.ಕೆ.ಜೆ. ಸತ್ಯನಾರಾಯಣ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಡಾ.ಎಸ್.ಸೌಮ್ಯಾ, ಕೆ.ಪಿ.ಮೀನಾಕ್ಷಿ, ಗಾಯತ್ರಿ ಶಿವರಾಂ, ಎಂ. ಉಮೇಶ್, ಡಾ.ಡಿ.ಎಂ. ಅಭಿನವ್, ಡಾ. ರೇಖಾ, ಡಾ. ದೇವರಾಜ್, ಡಾ.ಕೆ.ಜೆ. ಸತ್ಯನಾರಾಯಣ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅನಂತಪುರ ಜಿಲ್ಲೆ
  • ಗಡಿ ಭಾಗದ ಮೇಲೆ ನಿಗಾಕ್ಕೆ ಜಿಲ್ಲಾ ಸಲಹಾ ಸಮಿತಿ ಸಭೆ ನಿರ್ಧಾರ
  • ಭ್ರೂಣ ಲಿಂಗ ಪತ್ತೆ ತಡೆಗೆ ಕಟ್ಟುನಿಟ್ಟಿನ ಕ್ರಮ
ಚಿತ್ರದುರ್ಗ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಯಂತ್ರಿಸಿ ಲಿಂಗಾನುಪಾತ ಸುಧಾರಿಸಲು ಕಟ್ಟುನಿಟ್ಟಾಗಿ ಪಿಸಿಪಿಎನ್‌ಡಿಟಿ ಕಾಯ್ದೆ ಜಾರಿಗೊಳಿಸಲು ಜಿಲ್ಲಾ ಸಲಹಾ ಸಮಿತಿ ಸಭೆ ನಿರ್ಧರಿಸಿದೆ.
ಡಿಚ್‌ಒ ಕಚೇರಿಯಲ್ಲಿ ಶುಕ್ರವಾರ ಪಿಸಿಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಪರಿಶೀಲನಾ ಮತ್ತು ತಪಾಸಣಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಜಿಲ್ಲೆಯ ಲಿಂಗ ಅನುಪಾತದ ಏರಿಳಿತದ ಕುರಿತು ಚರ್ಚೆ ನಡೆಸಿದರು.
ಪಿಸಿಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ.ಎಸ್. ಸೌಮ್ಯಾ ಮಾತನಾಡಿ, ಜಿಲ್ಲೆಯ ಪರಶುರಾಂಪುರ, ಮೊಳಕಾಲ್ಮೂರು ಭಾಗದಿಂದ ಲಿಂಗ ಪತ್ತೆ ಪರೀಕ್ಷೆಗೆ ಗರ್ಭಿಣಿಯರು ಆಂಧ್ರದ ಅನಂತಪುರ ಜಿಲ್ಲೆ ಗಡಿ ಪ್ರದೇಶಗಳಲ್ಲಿರುವ ಅನಽಕೃತ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಂಡು ಬರುತ್ತಿರುವ ಮಾಹಿತಿ ಇದೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚಲು ವಿಶೇಷ ನಿಗಾ ಇಡಬೇಕೆಂದು ಅಽಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ವಿಶೇಷವಾಗಿ ಹೊಸದುರ್ಗ, ಹೊಳಲ್ಕೆರೆ ತಾಲೂಕುಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುತ್ತಿರುವುದಕ್ಕೆ ಕಳವಳ ವ್ಯಕ್ತ ಪಡಿಸಿದ ಸಮಿತಿ ಸದಸ್ಯೆ ಕೆ.ಪಿ. ಮೀನಾಕ್ಷಿ, ಗರ್ಭಾವಸ್ಥೆಯ ಆರಂಭದಿAದಲೇ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸ ಬೇಕು. ಆಶಾ ಕಾರ್ಯಕರ್ತೆಯರು ಗರ್ಭಿಣಿಯರ ನೋಂದಣಿ ಹಾಗೂ ಅವರ ಚಲನವಲನದ ಮೇಲೆ ನಿರಂತರ ನಿಗಾ ವಹಿಸ ಬೇಕು ಎಂದರು.
ಲಿಂಗ ಪತ್ತೆ ಹಚ್ಚುವ ಜಾಲದ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ಒಂದು ಲಕ್ಷ ರೂ.ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸದಸ್ಯೆ ಗಾಯತ್ರಿ ಶಿವರಾಂ ಅಭಿಪ್ರಾಯಪಟ್ಟರು.
ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿರುವ ಕುರಿತಂತೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಬೇಕೆಂದು ಸದಸ್ಯ ಎಂ. ಉಮೇಶ್ ಸಲಹೆ ನೀಡಿದರು.
ರಾಜ್ಯಮಟ್ಟದಲ್ಲಿ ಅಭಿವೃದ್ಧಿಪಡಿಸಿದ ವಿಶೇಷ ಸಾ-ï್ಟವೇರ್ ಮೂಲಕ ಕಳೆದ ೩ ವರ್ಷಗಳ ದತ್ತಾಂಶ ವಿಶ್ಲೇಷಿಸಲಾಗುತ್ತಿದೆ. ಈ ತಂತ್ರಜ್ಞಾನವು ಅಕ್ರಮ ಸ್ಕ್ತ್ಯಾನಿಂಗ್ ಸಾಧ್ಯತೆ ಇರುವ ರೆಡ್‌ಮಾರ್ಕ್ ಪ್ರದೇಶಗಳನ್ನು ಗುರುತಿಸಲಿದೆ. ಅಂತಹ ಕೇಂದ್ರಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ.ಡಿ.ಎಂ. ಅಭಿನವ್ ಹೇಳಿದರು.
ಜಿಲ್ಲಾ ಪಿಸಿಪಿಎನ್‌ಡಿಟಿ ಪರಿಶೀಲನಾ ಮತ್ತು ತಪಾಸಣಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಕುಟುಂಬ ಕಲ್ಯಾಣಾಽಕಾರಿ ಡಾ.ಟಿ.ಡಿ. ರೇಖಾ, ಸದಸ್ಯ ಡಾ.ಕೆ.ಜಿ. ಸತ್ಯನಾರಾಯಣ, ಮಕ್ಕಳ ತಜ್ಞ ಡಾ. ದೇವರಾಜ್, ಡಾ. ಸತ್ಯನಾರಾಯಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net