ಸೆಸ್ ನಿಽ ಸಮಗ್ರ ತನಿಖೆಯಾಗಲಿ

 ಕಾರ್ಮಿಕರ ಕಲ್ಯಾಣ ಮಂಡಳಿಯ ಸೆಸ್ ನಿಽ ಬಳಕೆಯ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ಕೆಎಸ್‌ಬಿಎಒಸಿಡಬ್ಲ್ಯುಡಬ್ಲ್ಯುಯು ಕಾರ್ಯಕರ್ತರು ಚಿತ್ರದುರ್ಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಮಂಜುನಾಥ್, ವೈ.ಕುಮಾರ್, ಕೆ.ಗೌಸ್‌ಪೀರ್, ಎಂ.ಆರ್.ನರಸಿAಹಸ್ವಾಮಿ ಇತರರಿದ್ದರು.
ಕಾರ್ಮಿಕರ ಕಲ್ಯಾಣ ಮಂಡಳಿಯ ಸೆಸ್ ನಿಽ ಬಳಕೆಯ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ಕೆಎಸ್‌ಬಿಎಒಸಿಡಬ್ಲ್ಯುಡಬ್ಲ್ಯುಯು ಕಾರ್ಯಕರ್ತರು ಚಿತ್ರದುರ್ಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಮಂಜುನಾಥ್, ವೈ.ಕುಮಾರ್, ಕೆ.ಗೌಸ್‌ಪೀರ್, ಎಂ.ಆರ್.ನರಸಿAಹಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದುರುಪಯೋಗ ಆಗಿದ್ದಲ್ಲಿ ಹಣ ಹಿಂಪಡೆಯಲಿ
  • ಕೆಎಸ್‌ಬಿಎಒಸಿಡಬ್ಲ್ಯುಡಬ್ಲ್ಯುಯು ಕಾರ್ಯಕರ್ತರ ಪ್ರತಿಭಟನೆ
  • ಹಣಕಾಸು ವ್ಯವಹಾರ
ಚಿತ್ರದುರ್ಗ : ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಕಳೆದ ೩ ವರ್ಷದಲ್ಲಿ ಜಾರಿಗೊಂಡ ಎಲ್ಲ ಯೋಜನೆಗಳು, ಟೆಂಡರ್‌ ಗಳು, ೧,೪೫೦ ಕೋಟಿ ರೂ.ಗೂ ಅಽಕ ಸೆಸ್ ನಿಽ ಬಳಕೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಸಿಎಂ ನೇರ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ರಚಿಸಿ ೨೦೨೨-೨೦೨೫ರ ಅವಽಯಲ್ಲಿ ಮಂಡಳಿಯಿAದ ನಡೆದ ಎಲ್ಲ ಟೆಂಡರ್‌ಗಳೂ ತನಿಖೆಯಾಗಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ನಗರದಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಎಲ್ಲ ಟೆಂಡರ್ ದಾಖಲೆ, ಕಾರ್ಯಾದೇಶ, ಒಪ್ಪಂದ, ಅಳತೆ ಪುಸ್ತಕ, ಬಿಲ್‌ಗಳು, ಪಾವತಿ--Àಲಾನುಭವಿಗಳ ದಾಖಲೆ, ಬ್ಯಾಂಕ್-ಹಣಕಾಸು ವ್ಯವಹಾರಗಳ ಕುರಿತು ವಿಶೇಷ ಮತ್ತು -ೆÇÃರೆನ್ಸಿಕ್ ಲೆಕ್ಕ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದರು.
ಮಂಡಳಿಯ ಯೋಜನೆಗಳ ಆಡಳಿತಾತ್ಮಕ ಹಾಗೂ ರಾಜಕೀಯ ಮಟ್ಟದ ನಿರ್ಧಾರ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲ ಜವಾಬ್ದಾರಿ ಯುತ ಅಽಕಾರಿಗಳ ಪಾತ್ರವನ್ನೂ ತನಿಖೆಯ ವ್ಯಾಪ್ತಿಗೆ ಒಳಪಡಿಸಿ, ಕಾನೂನು ಉಲ್ಲಂöಸಿದಲ್ಲಿ ಸಂಬAಽತರ ವಿರುದ್ಧ ಕಾನೂನು ಹಾಗೂ ಇಲಾಖೆ ಮಟ್ಟದ ಕ್ರಮಕ್ಕೆ ಮುಂದಾಗುವAತೆ ಒತ್ತಾಯಿಸಿದರು.
ತನಿಖೆಯಲ್ಲಿ ಸಾರ್ವಜನಿಕ ನಿಽಯ ಅಕ್ರಮ ಹಣಕಾಸು ವ್ಯವಹಾರಗಳು ದೃಢಪಟ್ಟಲ್ಲಿ, ಸಂಬAಽತ ಮೊತ್ತವನ್ನು ಸರ್ಕಾರ ಹಿಂಪಡೆಯಲು ಹಾಗೂ ಹೊಣೆಗಾರರಿಂದ ವಸೂಲಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಜ್ಯಾದ್ಯಂತ ಮಂಡಳಿಯಿAದ ತೆರೆದಿರುವ ಅಂಬೇಡ್ಕರ್ ಸೇವಾ ಕೇಂದ್ರಗಳನ್ನು ಮುಚ್ಚಬೇಕು. ಐಟಿ-ಬಿಟಿ ಕಂಪನಿಗಳನ್ನು ಚಿತ್ರ ದುರ್ಗ ಜಿ¯್ಲÉಗೆ ಸ್ಥಳಾಂತರಿಸಲು ಆದೇಶಿಸಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ೩ ವರ್ಷಕ್ಕೊಮ್ಮೆ ನವೀಕರಿಸುವಂತೆ ನಿರ್ದೇಶಿಸಬೇಕು. ಪಿಂಚಣಿಯನ್ನು ಕನಿಷ್ಠ ೬ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಕೋರಿದರು.
ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ವೈ.ಕುಮಾರ್, ಪದಾಽಕಾರಿಗಳಾದ ಕೆ.ಗೌಸ್‌ಪೀರ್, ಎಂ.ಆರ್.ನರಸಿAಹ ಸ್ವಾ ಮಿ,ಎಂ.ಗೌಸ್‌ಖಾನ್, ಸೈಯದ್ ನಾದೀಆಲಿ, ಡಿ.ಈಶ್ವರಪ್ಪ, ರಾಜಪ್ಪ, ಎಂ.ತಿಮ್ಮಯ್ಯ, ಚಾಂದ್‌ಪೀರ್, ವೈ.ಬಸವರಾಜ್, ಮಹಂತಪ್ಪ, ಸಲೀಂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net