ರೋಗಿಗಳ ಜತೆ ಕನ್ನಡದಲ್ಲೇ ಸಂವಹನ

 ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಈಚೆಗೆ ಕನ್ನಡ ಅಭಿವೃದ್ಧಿ ಪ್ರಾಽಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಕನ್ನಡ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಡಾ. ಸಂತೋಷ ಹಾನಗಲ್ಲ, ಡಾ.ಬಿ.ವೈ.ಯುವರಾಜ್, ಡಾ.ಎ.ಬಿ. ರಾಮಚಂದ್ರಪ್ಪ, ಬಿ.ಎಂ.ಗುರುನಾಥ್ ಇತರರು ಇದ್ದರು.
ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಈಚೆಗೆ ಕನ್ನಡ ಅಭಿವೃದ್ಧಿ ಪ್ರಾಽಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಕನ್ನಡ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಡಾ. ಸಂತೋಷ ಹಾನಗಲ್ಲ, ಡಾ.ಬಿ.ವೈ.ಯುವರಾಜ್, ಡಾ.ಎ.ಬಿ. ರಾಮಚಂದ್ರಪ್ಪ, ಬಿ.ಎಂ.ಗುರುನಾಥ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯರಿಗೆ ಡಾ. ಪುರುಷೋತ್ತಮ ಬಿಳಿಮನೆ ಸಲಹೆ
  • ವೈದ್ಯ ಕಾಲೇಜಿನಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆ
  • ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ
ಚಿತ್ರದುರ್ಗ: ವೈದ್ಯರು ರೋಗಿಗಳೊಂದಿಗೆ ಕನ್ನಡದಲ್ಲೇ ಸಂವಹನ ನಡೆಸಿದರೆ ಚಿಕಿತ್ಸೆ ಹೆಚ್ಚು ಪರಿಣÁಮಕಾರಿಯಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಈಚೆಗೆ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ವೈದ್ಯಕೀಯ ಸೇವೆ ಕೇವಲ ಆರ್ಥಿಕ ಲಾಭಕ್ಕಾಗಿರದೆ ಸಾರ್ವಜನಿಕ ಸೇವೆಯಾಗಬೇಕು. ಸ್ಥಳೀಯ ಭಾಷೆ ಅರಿವಿನೊಂದಿಗೆ ಜಾಗತಿಕ ವೈದ್ಯಕೀಯ ಜ್ಞಾನ ಬಳಸಿಕೊಂಡಾಗ ರೋಗ ಗುಣಪಡಿಸುವುದು ಸುಲಭವಾಗುತ್ತದೆ ಎಂದರು.
ಪ್ರಾಽಕಾರದ ಕರ‍್ಯದರ್ಶಿ ಡಾ. ಸಂತೋಷ ಹಾನಗಲ್ಲ ಅವರು ಮಾತನಾಡಿ, ಕಾಲೇಜಿನ ನಾಮ-Àಲಕಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಸಂಸ್ಥೆಯ ಲಾಂಛನ ಕನ್ನಡ ಲಿಪಿಯಲ್ಲಿರಬೇಕೆಂದರು.
ಸAಸ್ಥೆ ನಿರ್ದೇಶಕ ಡಾ.ಬಿ.ವೈ. ಯುವರಾಜ್, ಆಡಳಿತಾತ್ಮಕ ಪತ್ರ ವ್ಯವಹಾರಗಳು ಸಂಪೂರ್ಣ ಕನ್ನಡದಲ್ಲೇ ನಡೆಯುತ್ತಿವೆ. ನಮ್ಮ ವಿದ್ಯಾರ್ಥಿಗಳ ಸಾಧನೆ ರಾಜ್ಯಕ್ಕೆ ೭ನೇ ಸ್ಥಾನದಲ್ಲಿದೆ. ೨೦೨೬-೨೭ನೇ ಸಾಲಿನಿಂದ ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸುವ ಯೋಜನೆ ಯಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಬೋಧಕರು ಕನ್ನಡದಲ್ಲಿ ವೈದ್ಯಕೀಯ ಲೇಖನ ಹಾಗೂ ಸಂಶೋಧನಾ ಬರಹಗಳಿಗೆ ಉತ್ತೇ ಜಿಸಲಾಗುವುದು. ಕಾಲೇಜಿನಲ್ಲಿ ಕನ್ನಡ ಸಂಘ ರಚಿಸಲಾಗಿದೆ ಎಂದರು.
ಪ್ರಾಽಕಾರದ ಸದಸ್ಯ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿದರು. ಸಾಹಿತಿ ಪ್ರೊ.ಸಿ. ಶಿವಲಿಂಗಪ್ಪ, ಅಕಾಡೆಮಿಕ್ ರಿಜಿಸ್ಟಾçರ್ ಡಾ.ಎನ್. ಚಂದ್ರಿಕಾ, ಡಾ.ಜಿ.ಎಚ್. ಮೇಘಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net