ಎಸ್‌ಪಿ ಕಚೇರಿ ಆವರಣದಲ್ಲಿ ಕಮಾಂಡ್ ಸೆಂಟರ್

S P Ranjith Kumar Bandaru
S P Ranjith Kumar Bandaru
Published on

ಪ್ರಮುಖ ಮುಖ್ಯಾಂಶಗಳು

  • ಸಿಸಿ ಕ್ಯಾಮರಾ ದೃಶ್ಯಾವಳಿ ಮೇಲೆ ಪೊಲೀಸರ ನಿಗಾ
  • ಒಂದು ಕೋಟಿ ರೂ.ವೆಚ್ಚದಲ್ಲಿ ಹೊಸ ಕಟ್ಟಡ
  • ಪೊಲೀಸ್ ವಸತಿ ನಿಗಮದಿಂದ ನಿರ್ಮಾಣ
ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ನಗರದ ಎಸ್‌ಪಿ ಕಚೇರಿ ಆವರಣದಲ್ಲಿ ನೂತನವಾಗಿ ಕಮಾಂಡ್ ಸೆಂಟರ್ ನಿರ್ಮಾಣವಾಗಲಿದೆ. ಜಿಲ್ಲಾ ಖನಿಜ ನಿಽಯಿಂದ ಮಂ ಜೂರಾಗಿರುವ ಒಂದು ಕೋಟಿ ರೂ.ಅನುದಾನದಲ್ಲಿ ೬೦/೪೦ ವಿಸ್ತೀರ್ಣದಲ್ಲಿ ಜಿ ಪ್ಲಸ್ ಒನ್ ಮಾದರಿ ಕಟ್ಟಡದ ನೆಲ ಮಹಡಿಯಲ್ಲಿ ಕಮಾಂಡ್ ಸೆಂಟರ್, ಕಂಟ್ರೋಲ್ ರೂಂ.(ವೈರ್‌ಲೆಸ್ ವಿಭಾಗ)ಹಾಗೂ ಮೊದಲ ಮಹಡಿಯಲ್ಲಿ ಸಭಾಂಗಣ ಮತ್ತು ಕನಿಷ್ಠ ೬೦ ಪೊಲೀಸ್ ಅಽಕಾರಿ, ಸಿಬ್ಬಂದಿಗೆ ಸೈಬರ್ ಅಪರಾಧ ಪತ್ತೆ ತರಬೇತಿ ಕೇಂದ್ರ ಆರಂಭಿಸಲು ಪೊಲೀಸ್ ಇಲಾಖೆ ಯೋಜಿಸಿದೆ.
ಕಟ್ಟಡದ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದ್ದು, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ನಿಗಮದಿಂದ ಶೀಘ್ರ ಕಾಮಗಾರಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಈಚೆಗೆ ನಗರಕ್ಕೆ ಭೇಟಿ ನೀಡಿದ್ದ ನಿಗಮದ ಎಂಡಿ, ಡಿಜಿಪಿ ಜೆ. ಅರುಣ್ ಚಕ್ರವರ್ತಿ ಅವರು ಸ್ಥಳ ಪರಿಶೀಲಿಸಿದ್ದಾರೆ.
ಜಿಲ್ಲಾಽಕಾರಿ ಅಧ್ಯಕ್ಷತೆಯಲ್ಲಿ ಈಚೆಗೆ ಚಿತ್ರದುರ್ಗದಲ್ಲಿ ನಡೆದ ರಸ್ತೆ ಸುರಕ್ಷತಾ ಸಭೆಯಲ್ಲಿ ಚಿತ್ರದುರ್ಗ ಸಹಿತ ತಾಲೂಕು ಕೇಂದ್ರಗಳಲ್ಲಿ ಸಂಚಾರ ಅವ್ಯವಸ್ಥೆ ಕುರಿತಂತೆ ಗಂಭೀರ ಚರ್ಚೆಗಳಾಗಿವೆ. ಸದ್ಯ ಚಿತ್ರದುರ್ಗ ನಗರ ಸೇರಿ ತಾಲೂಕು ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳ ಸೂಕ್ತ ಕಣ್ಗಾವಲು ಕೂಡ ಇಲ್ಲವಾಗಿದೆ.
ಈ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಕಮಾಂಡ್ ಸೆಂಟರ್ ನಿರ್ಮಿಸಿ ಎಲ್ಲ ತಾಲೂಕು ಕೇಂದ್ರಗಳನ್ನೂ ೨೪/೭ ಮಾನಿಟರಿಂಗ್ ಮಾಡಲು ಇಲಾಖೆ ಮುಂದಾಗಿದೆ.
ಚಳ್ಳಕೆರೆ ನಗರದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ೬೫ ಲಕ್ಷ ರೂ. ಮಂಜೂರಾಗಿದೆ. ಚಿತ್ರದುರ್ಗದಲ್ಲಿ ಇದಕ್ಕಾಗಿ ೨ ಕೋಟಿ ರೂ. ಬೇಕೆಂದು ಅಂದಾಜಿಸಲಾಗಿದೆ.
ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಎಲ್ಲ ಫೂಟೇಜ್‌ಗಳನ್ನು ಜಿಲ್ಲಾ ಹಾಗೂ ಆಯಾ ತಾಲೂಕು ಕೇಂದ್ರಗಳ ಡಿವೈಎಸ್‌ಪಿ-ಸಿಪಿಐ ಕಚೇರಿಗಳಲ್ಲಿ ನೇರ ಪರಿಶೀಲನೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಹೆಲ್ಮೆಟ್ ಇಲ್ಲದೆ ದ್ವಿಚಕ್ರ ಮೋಟಾರು ವಾಹನಗಳನ್ನು ಓಡಿಸುವ, ಕಾರು ಮತ್ತಿತರ ಮೋಟಾರು ವಾಹನ ಚಾಲಕರು, ಪ್ರಯಾಣಿ ಕರು ಸೇರಿದಂತೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಆಟೋಮ್ಯಾಟಿಕ್ ಆಗಿ ದಂಡ ವಿಽಸಲು ಎಎನ್‌ಪಿಆರ್ ವ್ಯವಸ್ಥೆ ಯನ್ನೂ ಕಮಾಂಡ್ ಸೆಂಟರ್‌ನಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಸಂಚಾರ ನಿಯಮಗಳ ಉಲ್ಲಂಘನೆ ನಿಯಂತ್ರಣದ ಜತೆಗೆ ಅಪರಾಧಗಳ ತಡೆ, ಪತ್ತೆಗೂ ಅನುಕೂಲವಾಗಲಿದೆ.
ಶಂಕಾಸ್ಪದ ವ್ಯಕ್ತಿ-ವಾಹನಗಳ ಮೇಲೆ ಹದ್ದಿನ ಕಣ್ಣಿಡಲು ಅನುಕೂಲವಾಗಲಿದೆ. ಇನ್ನು ಕಮಾಂಡ್ ಸೆಂಟರ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುಸಜ್ಜಿತ ಸಭಾಂಗಣದ ಜತೆಗೆ ಸಿಎಸ್‌ಆರ್ ನಿಽ ನೆರವಿನೊಂದಿಗೆ ಸೈಬರ್ ಅಪರಾಧ ಪತ್ತೆ ತರಬೇತಿಗೆ ವ್ಯವಸ್ಥೆ ಕಲ್ಪಿಸಲು ಇಲಾಖೆ ಪ್ಲ್ಯಾನ್ ಮಾಡಿದೆ.
ಈ ಕಟ್ಟಡದೊಂದಿಗೆ ಹಿರಿಯೂರಲ್ಲಿ ಜಿ ಪ್ಲಸ್ ೨ ಮಾದರಿ ೧೨ ಪೊಲೀಸ್ ಸಿಬ್ಬಂದಿ ವಸತಿ ಗೃಹಗಳು, ಡಿಆರ್‌ಆರ್ ಅಽಕಾರಿಗಳ ಆರು ವಸತಿ ಗೃಹಗಳ ನಿರ್ಮಾಣಕ್ಕೆ ನಿಗಮ ಮುಂದಾಗಿದೆ. ಹೊಳಲ್ಕೆರೆ ತಾಲೂಕು ಚಿತ್ರಹಳ್ಳಿ ಗೇಟ್‌ನಲ್ಲಿ ಈಗಾಗಲೇ ಜಿ ಪ್ಲಸ್ ೨ ಮಾದರಿಯ ಸುಜ್ಜಿತ ವಸತಿ ಗೃಹಗಳನ್ನು ಇಲಾಖೆಗೆ ನಿಗಮ ಹಸ್ತಾಂತರಿಸಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net