`ಭದ್ರಾ', ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಸಿಎಂ, ಡಿಸಿಎಂಗೆ ಮನವಿ

 ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಚಿತ್ರದುರ್ಗ ತಾಲೂಕಿನ ಗೋನೂರು ಆಕ್ವಡೆಕ್ ಕಾಮಗಾರಿಯನ್ನು ಸಚಿವ ಡಿ.ಸುಧಾಕರ್ ಭಾನುವಾರ ಪರಿಶೀಲನೆ ನಡೆಸಿದರು. ಶಾಸಕರಾದ ಎನ್.ವೈ. ಗೋಪಾಲಕÊಷ್ಣ, ಡಾ.ಎಂ. ಚಂದ್ರಪ್ಪ, ಟಿ. ರಘುಮೂರ್ತಿ ಇತರರು ಇದ್ದರು.
ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಚಿತ್ರದುರ್ಗ ತಾಲೂಕಿನ ಗೋನೂರು ಆಕ್ವಡೆಕ್ ಕಾಮಗಾರಿಯನ್ನು ಸಚಿವ ಡಿ.ಸುಧಾಕರ್ ಭಾನುವಾರ ಪರಿಶೀಲನೆ ನಡೆಸಿದರು. ಶಾಸಕರಾದ ಎನ್.ವೈ. ಗೋಪಾಲಕÊಷ್ಣ, ಡಾ.ಎಂ. ಚಂದ್ರಪ್ಪ, ಟಿ. ರಘುಮೂರ್ತಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಿ.ಸುಧಾಕರ್ ಹೇಳಿಕೆ
  • ಫೆಬ್ರವರಿ ಅಂತ್ಯಕ್ಕೆ ಟ್ರಯಲ್ ರನ್
  • ೯೦ ಕೆರೆಗಳಿಗೆ ಶೇ.೫೦ ನೀರು
ಚಿತ್ರದುರ್ಗ: ನಮ್ಮ ಈ ಸರ್ಕಾರದ ಅವಽಯೊಳಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸಂಪೂರ್ಣಗೊಳಿಸುವ ಗುರಿ ಇದ್ದು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕಾಯ್ದಿರಿಸುವಂತೆ ಒತ್ತಾಯಿಸಿ ಜ.೫ ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾ ರ್ ಅವರನ್ನು ಪಕ್ಷಾತೀತವಾಗಿ ಭೇಟಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲೆಯ ಶಾಸಕರು, ಅಽಕಾರಿಗಳೊಂದಿಗೆ ಚಿಕ್ಕಸಿದ್ದವ್ವನಹಳ್ಳಿ ಕಾಲುವೆ, ಗೋನೂರು ಅಕ್ವಡೆಕ್ಟ್ ಕಾಮಗಾರಿಗಳನ್ನು ಭಾನುವಾರ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯೋಜನೆ ತ್ವರಿತವಾಗಿ ಪೂರ್ಣಗೊಳಿಸುವ ಕುರಿತು ಅವರಿಗೆ ಮನವರಿಕೆ ಮಾಡಲಾಗುವುದು.
ಪ್ರಸ್ತುತ ಮಾರ್ಚ್ ಅಂತ್ಯದೊಳಗೆ ಚಿತ್ರದುರ್ಗ ಶಾಖಾ ಕಾಲುವೆ ಕಾಮಗರಿಗೆ ಅಗತ್ಯವಿರುವ ೩೦೦ ಕೋಟಿ ರೂ. ಬಿಡುಗಡೆ ಗೂಳಿಸಲು ಸಿಎಂಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಚಿತ್ರದುರ್ಗ ಶಾಖಾ ಕಾಲುವೆಗಿದ್ದ ಅಡೆತಡೆಗಳು ನಿವಾರಣೆಯಾಗಿವೆ.
ಅಜ್ಜಂಪುರ ಸಮೀಪದ ವೈ ಜಕ್ಷಂನ್‌ನಿAದ ಚಿತ್ರದುರ್ಗ ತಾ ಲೂಕು ಗೋನೂರು ಅಕ್ವಡೆಕ್ಟ್ವರೆಗಿನ ೧೧೪ ಕಿ.ಮೀ. ಕಾಲುವೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದೇ -Éಬ್ರವರಿ ಅಂತ್ಯಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದು ಹೇಳಿದರು.
ಅಜ್ಜಂಪುರದ ಅಬ್ಬಿನಹೊಳಲು ವೈ ಜಂಕ್ಷನ್ ಕಾಮಗಾರಿ ೪ ವರ್ಷಗಳಿಂದ ಕೆಲ ಅಡೆತಡೆಗಳಿಂದಾಗಿ ಬಾಕಿ ಉಳಿದಿತ್ತು. ಕಳೆದ ಮಾರ್ಚ್ನಲ್ಲಿ ಡಿಸಿಎಂ ನೇತÊತ್ವದಲ್ಲಿ ಜಿಲ್ಲೆ ಶಾಸಕರು ಅಬ್ಬಿನಹೊಳಲಿಗೆ ತೆರಳಿ ರೈತರ ಮನ ಒಲಿಸಲಾಯಿತು. ಇದರಿಂದ ಕಾಮಗಾರಿ ಪೂರ್ಣಗೊಂಡಿದೆ. ಹಿರಿಯೂರು ತಾಲೂಕಿನಲ್ಲಿದ್ದ ಸಮಸ್ಯೆಯನ್ನೂ ಪರಿಹರಿಸಲಾಗಿದೆ ಎಂದರು.
ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವಾಗ ಕಡೂರಿನ ೨೨, ಹೊಸದುರ್ಗದ ೩೨, ಹೊಳಲ್ಕೆ ರೆಯ ೩೦, ಹಿರಿಯೂರಿನ ೩ ಹಾಗೂ ಚಿತ್ರದುರ್ಗದ ೩ ಸೇರಿ ೯೦ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.೫೦ ರಷ್ಟು ನೀರು ತುಂಬಿಸಲಾಗು ವುದು.
ಇದರಿಂದ ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ಮತ್ತು ಚಳ್ಳಕೆರೆ ತಾಲೂಕಿನ ೭೩,೯೪೬ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಸೂಕ್ಷ÷್ಮ ನೀರಾವರಿ ಸೌಲಭ್ಯ ದೊರಕಲಿದೆ. ಗೋನೂರು ಬಳಿಯ ೧.೯೪ ಕಿ.ಮೀ.ಉದ್ದದ ಅಕ್ವಾಡೆಕ್ಟ್ ಕಾಮಗಾರಿ ಆಗಸ್ಟ್ ಅಂತ್ಯಕ್ಕೆ ಪೂರ್ಣಗೊಳಿಸಿ ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡ ತಾಲೂಕಿನ ಕೆರೆಗಳಿಗೆ ನೀರು ಹರಿಸ ಲಾಗುವುದು. ಅಂದಾಜು ೧೨೦ ಅಡಿ ಎತ್ತರವಿರುವ ಗೋನೂರು ಅಕ್ವಡೆಕ್ಟ್ ರಾಜ್ಯದಲ್ಲಿಯೇ ಅತ್ಯಂತ ಎತ್ತರದ್ದಾಗಿದೆ ಎಂದು ಸಚಿವರು ತಿಳಿಸಿದರು.
ಹನಿ ನೀರಾವರಿ, ಕೆರೆ ತುಂಬುವ ಕಾಮಗಾರಿ
೨೬೦೦ ಕೋಟಿ ರೂ. ವೆಚ್ಚದ ಹೊಳಲ್ಕೆರೆ, ಚಿತ್ರದುರ್ಗ, ಹಿರಿಯೂರು ಹಾಗೂ ಚಳ್ಳಕೆರೆ ತಾಲೂಕಿನಲ್ಲಿ ಹನಿ ನೀರಾವರಿ ಹಾಗೂ ಕೆರೆ ತುಂಬುವ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಇದರಿಂದ ೭೩,೯೪೬ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ೨೦೨೨-೨೩ರಲ್ಲಿ ಘೋಷಿಸಿದ್ದ ೫೩೦೦ ಕೋಟಿ ರೂ.ಅನುದಾನ ಬಿಡುಗಡೆಗೆ ಕೇಂದ್ರವನ್ನು ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಜನಸಂಖ್ಯೆ ಹೆಚ್ಚಿದೆ. ಕೇಂದ್ರದ ನೆರವಿನಿಂದ ಇವರೆಲ್ಲರಿಗೂ ಒಳಿತಾಗ ಲಿದೆ. ಈ ಕುರಿತಂತೆ ಕೇಂದ್ರ ಸಚಿವ ವಿ. ಸೋಮಣ್ಣ, ಸಂಸದ ಗೋವಿಂದ ಎಂ. ಕಾರಜೋಳ ಅವರು ಕೂಡ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ತಾರತಮ್ಯ ನೀತಿ ಅನುಸರಿಸದೆ ಕೇಂದ್ರ ಅನುದಾನ ಬಿಡುಗಡೆ ಮಾಡಬೇಕು ಎಂದರು.
ಯೋಜನೆಗೆ ರಾಜ್ಯಸರ್ಕಾರ ೨೦೨೪-೨೫ನೇ ಸಾಲಿನ ಆಯವ್ಯಯದಲ್ಲಿ ೧೨೫೦ ಕೋಟಿ ರೂ.ಅನುದಾನ ಹಂಚಿಕೆ ಮಾಡಿತ್ತು. ಇದ ರಲ್ಲಿ ಕೇಂದ್ರದ ಅನುದಾನವವನ್ನೂ ನಿರೀಕ್ಷಿಸಲಾಗಿತ್ತು. ಆದರೆ, ಕೇಂದ್ರದಿAದ ಅನುದಾನ ಬಾರದೆ ರಾಜ್ಯ ಸರ್ಕಾರವೇ ರೂ.೧,೪೪೩ ಕೋಟಿ ರೂ. ಬಿಡುಗಡೆ ಮಾಡಿತ್ತು.
೨೦೨೫-೨೬ನೇ ಸಾಲಿನಲ್ಲಿ ಹಂಚಿಕೆಯಾಗಿದ್ದ ೧೪೪೦.೨೯ ಕೋಟಿ ರೂ. ಅನುದಾನದಲ್ಲಿ ೫೨೦ ಕೋಟಿ ರೂ. ಬಿಡುಗಡೆಯಾ ಗಿದೆ. ಇನ್ನೂ ೩ ತಿಂಗಳ ಒಳಗೆ ಬಾಕಿ ಹಣ ಬಿಡುಗಡೆಯಾಗಲಿದೆ. ಈ ಯೋಜನೆಗೆ ನವೆಂಬರ್ ೨೦೨೫ರ ಅಂತ್ಯದವರೆಗೆ ೧೧, ೨೯೦ ಕೋಟಿ ರೂ. ಖರ್ಚಾಗಿದೆ. ಇನ್ನೂ ೧೦ ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.
ಶಾಸಕರಾದ ಎನ್.ವೈ. ಗೋಪಾಲಕÊಷ್ಣ, ಡಾ.ಎಂ. ಚಂದ್ರಪ್ಪ, ಟಿ. ರಘುಮೂರ್ತಿ, ಡಿಸಿ ಟಿ. ವೆಂಕಟೇಶ್, ಎಡಿಸಿ ಬಿ.ಟಿ. ಕು ಮಾರಸ್ವಾಮಿ, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ, ಸಿಇಎ-ï ಎಚ್. ಲಮಾಣಿ, ಎಸ್‌ಇ ಕೆ.ಟಿ. ಹರೀಶ್, ಇಇ ಚಂದ್ರಪ್ಪ ಬಾರಿಕರ, ಜಿಲ್ಲಾ ನೀರಾವರಿ ಹೋರಾಟ ಅನುಷ್ಠಾನ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರೈತ ಪ್ರಮುಖರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net