ಪ್ರೇಕ್ಷಣೀಯ ಸ್ಥಳ ಒತ್ತುವರಿ ತೆರವುಗೊಳಿಸಿ

ಚಿತ್ರದುರ್ಗದ ಕೋಟೆ, ಸ್ಮಾರಕಗಳು, ಐತಿಹಾಸಿಕ ಸ್ಥಳಗಳ ಒತ್ತುವರಿ ತೆರವಿಗೆ ಒತ್ತಾಯಿಸಿ ಗುರುವಾರ ಕರುನಾಡ ವಿಜಯಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದ ಕೋಟೆ, ಸ್ಮಾರಕಗಳು, ಐತಿಹಾಸಿಕ ಸ್ಥಳಗಳ ಒತ್ತುವರಿ ತೆರವಿಗೆ ಒತ್ತಾಯಿಸಿ ಗುರುವಾರ ಕರುನಾಡ ವಿಜಯಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕರುನಾಡ ವಿಜಯಸೇನೆ ಕಾರ್ಯಕರ್ತರ ಒತ್ತಾಯ
  • ಜಿಲ್ಲಾಽಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ
  • ಪ್ರೇಕ್ಷಣೀಯ ಸ್ಥಳಗಳ ವ್ಯಾಪ್ತಿ
ಚಿತ್ರದುರ್ಗ: ನಗರದ ಐತಿಹಾಸಿಕ ಕೋಟೆ, ಜಿಲ್ಲೆಯ ಸ್ಮಾರಕಗಳ ವ್ಯಾಪ್ತಿಯಲ್ಲಿ ಆಗಿರುವ ಒತ್ತುವರಿ ತೆರವಿಗೆ ಆಗ್ರಹಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರೇಕ್ಷಣೀಯ ಸ್ಥಳಗಳ ವ್ಯಾಪ್ತಿಯಲ್ಲಿ ಒತ್ತುವರಿ ತೆರವಿಗೆ ಕ್ರಮವಹಿಸಲು ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ನಗರದ ಧರ್ಮಶಾಲೆ ರಸ್ತೆ ಸಮೀಪದ ಬತೇರಿ, ಸಿಹಿನೀರು ಹೊಂಡ, ಬುರುಜನಹಟ್ಟಿ ಸುತ್ತಮುತ್ತಲಿನ ಸ್ಥಳಗಳಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ನಗರದ ಹಲವೆಡೆ ಭಾಗಶಃ ಒತ್ತುವರಿಯಾಗಿದೆ. ಕೂಡಲೇ ತೆರವಿಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಕೋಟೆಯಲ್ಲಿ ಮರ-ಗಿಡಗಳು ಬೆಳೆದಿದ್ದು, ರಕ್ಷಣೆ ಇಲ್ಲದಂತಾಗಿದೆ. ಈ ಹಿಂದೆ ಜೀಜಾಹರಿಸಿಂಗ್ ಚಿತ್ರದುರ್ಗದ ಎಸ್ಪಿಯಾಗಿz್ದÁಗ ಕೋಟೆಗೆ ಗನ್‌ಮ್ಯಾನ್‌ಗಳನ್ನು ನೇಮಿಸಿದ್ದರು. ಪ್ರವಾಸಿಗರು ನಿರ್ಭಯವಾಗಿ ಕೋಟೆ ವೀಕ್ಷಿಸಲು ಪುನಃ ಗನ್‌ಮ್ಯಾನ್‌ಗಳನ್ನು ನೇಮಿಸಬೇಕು ಎಂದು ವಿಜಯಸೇನೆ ಜಿ¯್ಲÁಧ್ಯಕ್ಷ ಕೆ.ಟಿ. ಶಿವಕುಮಾರ್ ಕೋರಿದರು.
ವಿಜಯಸೇನೆ ಮಹಿಳಾ ಘಟಕದ ಜಿ¯್ಲÁಧ್ಯಕ್ಷೆ ವೀಣಾ ಗೌರಣ್ಣ, ಪದಾಽಕಾರಿಗಳಾದ ಗೋಪಿನಾಥ್, ಜಗದೀಶ್, ಅಣ್ಣಪ್ಪ, ರತ್ನಮ್ಮ, ವಿಜಯಬಾಬು, ಅವಿನಾಶ್, ಕೆ.ಎನ್. ಮಧುಸೂದನ್, ಅಖಿಲೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net