ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು development

ಚಿಕ್ಕೇನಹಳ್ಳಿಯಲ್ಲಿ ಸಿ.ಸಿ.ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಡಾ.ಎಂ. ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು. ಮೋಹನ್ ಗೌಡ್ರು, ಮಾದೇವಣ್ಣ, ಮುಶ್ರಫ್, ಷಣ್ಮುಖಪ್ಪ ಇತರರು ಇದ್ದರು. development
ಚಿಕ್ಕೇನಹಳ್ಳಿಯಲ್ಲಿ ಸಿ.ಸಿ.ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಡಾ.ಎಂ. ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು. ಮೋಹನ್ ಗೌಡ್ರು, ಮಾದೇವಣ್ಣ, ಮುಶ್ರಫ್, ಷಣ್ಮುಖಪ್ಪ ಇತರರು ಇದ್ದರು. development
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಎಂ.ಚಂದ್ರಪ್ಪ ಹೇಳಿಕೆ
  • ರಸ್ತೆ, ಚರಂಡಿ ನಿರ್ಮಾಣಕ್ಕೆ ಭೂಮಿಪೂಜೆ
ಸಿರಿಗೆರೆ: ಹೊಳಲ್ಕೆರೆ ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ 130 ಕೋಟಿ ರೂ. ಖರ್ಚು ಮಾಡಲಾಗುವುದು ಎಂದು ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು.development
ಸಿರಿಗೆರೆ ಸಮೀಪದ ಚಿಕ್ಕೇನಹಳ್ಳಿಯಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ಸಿ.ಸಿ.ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಹಿರಿಯೂರಿನ ವಿವಿ ಸಾಗರ ಜಲಾಶಯದಿಂದ ನೀರು ತಂದು ಪ್ರತಿ ಮನೆಗೂ ಪೂರೈಕೆ ಮಾಡಲಾಗುವುದು. ಈಗಾಗಲೇ ವಿವಿ ಸಾಗರದಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ. ಫಿಲ್ಟರ್‌ಗಾಗಿ 60 ಕೋಟಿ ರೂ. ಖರ್ಚು ಮಾಡಿದ್ದೇನೆ ಎಂದರು.
ಚುನಾವಣೆಯಲ್ಲಿ ಓಟು ಹಾಕಿಸಿಕೊಂಡವರಿಗೆ ಬದ್ಧತೆಯಿರಬೇಕು. ಜನರ ಪ್ರೀತಿ, ವಿಶ್ವಾಸ ಉಳಿಸಿಕೊಂಡು ಹೋಗುತ್ತಿದ್ದೇನೆ. ಜಲಜೀವನ್ ಮಿಷನ್ ಪೈಪ್‌ಲೈನ್ ಹಾಕಿದ ತಕ್ಷಣ ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ ಮಾಡಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಸರ್ಕಾರ ಯಾವುದೇ ಇರಲಿ. ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸುತ್ತೇನೆ. ರೈತರಿಗೆ ಅನುಕೂಲ ಮಾಡಿಕೊಡಲು ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುವುದು. ಅಜ್ಜಪ್ಪನಹಳ್ಳಿ ಬಳಿ 250 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಿಸುತ್ತಿದ್ದು, ಮುಕ್ಕಾಲು ಭಾಗ ಕೆಲಸ ಮುಗಿದಿದೆ ಎಂದರು.
ಯಾರು ಅನುಕೂಲ ಮಾಡಿದ್ದಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯಲ್ಲಿ ಮತ ಚಲಾಯಿಸಬೇಕು. ಮುಂದಿನ ದಿನಗಳಲ್ಲಿ ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ರಸ್ತೆಗಳ ಅಭಿವೃದ್ಧಿಗೆ ಇನ್ನೂ 10 ಕೋಟಿ ರೂ. ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.
ಸ್ಥಳೀಯರಿಂದ ಮನವಿ: ಮುಂಬರುವ ಚುನಾವಣೆ ವೇಳೆಗೆ. ಚಿಕ್ಕೇನಳ್ಳಿ. ಕೋಣನೂರು. ಬೊಮ್ಮನಾಗ್ತಿಹಳ್ಳಿ. ಗ್ರಾಮಗಳನ್ನು ಸಿರಿಗೆರೆ ಗ್ರಾಪಂಗೆ ಸೇರಿಸಲು ಸುತ್ತಮುತ್ತಲೂರಿನ ಗ್ರಾಮಸ್ಥರು ಶಾಸಕ ಎಂ. ಚಂದ್ರಪ್ಪನವರಲ್ಲಿ ಮನವಿ ಸಲ್ಲಿಸಿ ಬೇಡಿಕೆ ಇಟ್ಟರು. ಮೊದಲಿನಿಂದಲೂ ದೊಡ್ಡ ಹಾಲಘಟ್ಟದ ವ್ಯಾಪ್ತಿಗೆ ನಮ್ಮ ಹಳ್ಳಿಗಳನ್ನು ಸೇರಿಸಲಾಗಿದೆ. ಈ ಊರಿಗೆ ಹೋಗಿ ಬರಲು ಸಾರಿಗೆ ಸೌಕರ್ಯವಿಲ್ಲ. ಸರಿಯಾದ ರಸ್ತೆ ಇಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಸಮೀಪದ ಸಿರಿಗೆರೆಗೆ ಹೋಗಿ ಬರಲು ಎಲ್ಲ ವ್ಯವಸ್ಥೆ ಇದೆ. ಆದ್ದರಿಂದ ಸಿರಿಗೆರೆ ಗ್ರಾಪಂಗೆ ಹಳ್ಳಿಗಳನ್ನು ಸೇರಿಸಲು ಮನವಿ ಮಾಡಿದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಶಾಸಕರಾದ ಡಾ.ಎಂ. ಚಂದ್ರಪ್ಪ ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಮೋಹನ್ ಗೌಡ್ರು, ಮಾದೇವಣ್ಣ, ಮುಶ್ರಫ್, ಷಣ್ಮುಖಪ್ಪ, ತಿಪ್ಪೇಸ್ವಾಮಿ, ನಾಗರಾಜ್, ಪಂಚಾಕ್ಷರಿ, ಮಂಜಣ್ಣ, ಮಾಲತೇಶ್, ರಾಜಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net