ಮಳೆಗೆ ಸಜ್ಜಾಗದ ನಗರಸಭೆ ಆಡಳಿತ

ಮ್ಯಾನ್‌ಹೋಲ್‌
ಮ್ಯಾನ್‌ಹೋಲ್‌
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆಯಲ್ಲೇ ಹರಿಯುವ ಚರಂಡಿ, ಯುಜಿಡಿ ಕೊಳಚೆ
  • ಮಳೆಗಾಲದಲ್ಲಿ ಸಂಚಾರ ದುಸ್ತರ
  • ನಗರಸಭೆ ಸಾಮಾನ್ಯ ಸಭೆ
ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ
ಒಂದು ಹದ ಮಳೆ ಸುರಿದರೂ ಸಾಕು ನಗರದ ಕೆಲ ಮುಖ್ಯ ರಸ್ತೆಗಳಲ್ಲಿ ಸಂಚರಿಸಲು ಸವಾರರು, ಪಾದಚಾರಿಗಳು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗುವುದು ನಗರದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಆದರೂ ಮಳೆಗಾಲ ಎದುರಿಸಲು ನಗರಸಭೆ ಆಡಳಿತ ವರ್ಗ ಸಜ್ಜಾಗುತ್ತಿಲ್ಲವೆಂಬ ಆರೋಪ ಕೇಳಿಬರುತ್ತಲೇ ಇದೆ.
ಮಳೆಗಾಲದಲ್ಲಿ ಆಗಿಂದಾಗ್ಗೆ ಮದಕರಿನಾಯಕ ವೃತ್ತದಿಂದ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್, ಒನಕೆ ಓಬವ್ವ ವೃತ್ತ, ಜೋಗಿ ಮಟ್ಟಿ ರಸ್ತೆ, ಹೊಳಲ್ಕೆರೆ ರೋಡ್, ಮೆದೇಹಳ್ಳಿ ರಸ್ತೆ, ಜೆಸಿಆರ್, ವಿಪಿ ಬಡಾವಣೆ ಹೀಗೆ ವಿವಿಧೆಡೆ ಒಳಚಂರಡಿ ಮ್ಯಾನ್‌ಹೋಲ್‌ ಗಳಿಂದ ಹೊರಗೆ ಬರುವ ಕೊಳಚೆ ನೀರು ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರ ಮೇಲೆ ಸಿಡಿಯುತ್ತದೆ ಎಂದು ಸಾರ್ವಜ ನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಒಂದೆಡೆ ಮ್ಯಾನ್‌ಹೋಲ್ ಸರಿಪಡಿಸಿದರೆ, ಮತ್ತೊಂದೆಡೆ ತೊಂದರೆ ಸೃಷ್ಟಿಯಾಗಲಿದೆ. ಇದಕ್ಕೆ ಮುಖ್ಯ ಕಾರಣ ಯುಜಿಡಿ ಸಮಸ್ಯೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿಗಳನ್ನು ವೈಜ್ಞಾನಿಕ, ಸಮರ್ಪಕವಾಗಿ ಕೈಗೊಂಡಿಲ್ಲವೆಂದು ಈಗಾಗಲೇ ದಶಕಗಳಿಂದ ನಗರಸಭೆ ಸಾಮಾನ್ಯ ಸಭೆಗಳಲ್ಲೇ ಸಾಕಷ್ಟು ಚರ್ಚೆಗಳಾಗಿವೆ. ಜಿಲ್ಲಾಡಳಿತ, ಸರ್ಕಾರಕ್ಕೂ ಸಾಕಷ್ಟು ದೂರುಗಳು, ಮನವಿಗಳು ಸಲ್ಲಿಕೆಯಾಗಿದ್ದರೂ ಈವರೆಗೂ ಪರಿಹಾರ ದೊರೆತಿಲ್ಲ.
ವಿದ್ಯಾರ್ಥಿಗಳಿಗೂ ತೊಂದರೆ: ತರಾಸು ರಂಗಮಂದಿರ, ನಗರ ಪೊಲೀಸ್ ಠಾಣೆ ಸುತ್ತಮುತ್ತ, ಶಾಲಾ-ಕಾಲೇಜುಗಳಿವೆ. ಸ್ಕೌಟ್ಸ್ ಮತ್ತು ಗೈq್ಸï, ಗ್ರಂಥಾಲಯ ಕಚೇರಿ ಇದ್ದು, ಮಳೆ ಸಂದರ್ಭದಲ್ಲಿ ಬಿ.ಡಿ. ರಸ್ತೆಯಲ್ಲಿ ಮಳೆ ನೀರಿನೊಟ್ಟಿಗೆ ದುರ್ವಾಸನೆ ಭರಿತ ಕೊಳಚೆ ನೀರು ಕ್ಷಣಾರ್ಧದಲ್ಲೇ ಜಮಾವಣೆಯಾಗಿ ಸಂಚಾರಕ್ಕೆ ತೊಡಕಾಗಿ ವಿದ್ಯಾರ್ಥಿಗಳಿಗೆ ಓಟಾಟಕ್ಕೆ ತೊಂದರೆಯಾಗಲಿದೆ.
ಮುಖ್ಯ ಮಾರ್ಗಗಳಲ್ಲಿ ಬಸ್, ಕಾರುಗಳು ವೇಗವಾಗಿ ಚಲಿಸುವಾಗ ಚರಂಡಿ ನೀರು ಪಾದಚಾರಿ, ದ್ವಿಚಕ್ರ ವಾಹನ ಸವಾರರ ಮೇಲೆ ಸಿಡಿಯುತ್ತಿದೆ. ಜನನಿಬಿಡ ಪ್ರದೇಶವಾದ ನಗರದ ಮುಖ್ಯ ರಸ್ತೆಗಳಲ್ಲಿ ಸಮಸ್ಯೆ ಸೃಷ್ಟಿಯಾಗುತ್ತದೆ.
ಯುಜಿಡಿ ನೀರು ರಸ್ತೆ ಮೇಲೆ ಹರಿಯುವುದರಿಂದ ಗ್ರಾಹಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ವ್ಯಾಪಾರಸ್ಥರೂ ತೊಂದರೆ ಅನುಭವಿಸುವಂತಾಗಿದೆ. ಅಽಕಾರಿಗಳು ಎಚ್ಚೆತ್ತುಕೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸಾಂಕ್ರಾಮಿಕ ರೋಗದ ಭೀತಿ
ನಗರದ ಮಧ್ಯಭಾಗದ¯್ಲೆÃ, ಅದರಲ್ಲೂ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಹೋಟೆಲ್, ಮತ್ತಿತರೆ ಸ್ಥಳಗಳ ಮುಂದೆ ಗಲೀಜು ನಿಲ್ಲುತ್ತಿರುವುದರಿಂದ ಸೊಳ್ಳೆ, ನೊಣಗಳ ಕಾಟ ವಿಪರೀತವಾಗಿದೆ. ಅಲ್ಲದೆ, ಸಾಂಕ್ರಾಮಿಕದ ಭೀತಿಯೂ ಎದುರಾಗಿದೆ.
ಚರಂಡಿಗೆ ತ್ಯಾಜ್ಯದ ರಾಶಿ
ನಗರಸಭೆಯ ಕಸ ಸಂಗ್ರಹಿಸುವ ವಾಹನ ೩೫ ವಾರ್ಡ್ಗಳಲ್ಲೂ ಸಂಚರಿಸುತ್ತಿದೆ. ಶೇ. ೭೫ರಷ್ಟು ಮಂದಿ ವಾಹನಕ್ಕೆ ಕಸ ಹಾಕಿದರೆ, ಶೇ. ೨೫ರಷ್ಟು ಮಂದಿ ರಸ್ತೆ ಬದಿ, ಚರಂಡಿಗಳಿಗೆ ಎಸೆಯುತ್ತಿದ್ದಾರೆ. ಇದರಿಂದ ಚರಂಡಿಗಳಲ್ಲಿ ಬಹುಬೇಗ ತ್ಯಾಜ್ಯ ತುಂಬಿಕೊಳ್ಳುತ್ತದೆ. ಂಡು ಮಳೆಗಾಲದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ.
"

ಕೊಳಚೆ ನೀರು ಹರಿಯುವ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದು ಕಷ್ಟವಾಗಿದೆ. ಸಂಬಂಽಸಿದ ಅಽಕಾರಿಗಳು ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕಿದೆ.

— ಎಲ್. ಮಂಜುನಾಥ್, ಚಿತ್ರದುರ್ಗ ನಗರ ನಿವಾಸಿ

"

ನಗರದ ಆರ್‌ಟಿಒ ಕಚೇರಿಯಿಂದ ಉಮಾಪತಿ ಕಲ್ಯಾಣ ಮಂಟಪ ಮಾರ್ಗದ ಮ್ಯಾನ್‌ಹೋಲ್‌ಗಳು ವಾರಕ್ಕೆ ಮೂರು ಬಾರಿ ಬ್ಲಾಕ್ ಆಗಿ ತೊಂದರೆಯಾಗುತ್ತಿದೆ. ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾಗಿ ಬರುತ್ತದೆ.

— ಗಂಗಾಧರ್, ಸ್ಥಳೀಯ ನಿವಾಸಿ
"

ಈ ಹಿಂದೆ ಕಳಪೆ ಕಾಮಗಾರಿ ನಡೆಸಿರುವುದೇ ಇಂತಹ ದುಸ್ಥಿತಿಗೆ ಕಾರಣ. ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ವೈಜ್ಞಾನಿಕವಾಗಿ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

— ಸಂತೋಷ್, ನಗರದ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net