ಚಿತ್ರದುರ್ಗ ತಾಲೂಕು ಇಂಗಳದಾಳ್‌ನಲ್ಲಿ ಮಂಗಳವಾರ ಏರ್ಪಡಿಸ್ದ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ತರಬೇತಿ ಕಾರ್ಯಾಗಾರವನ್ನು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ಕೆ. ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಡಾ.ಬಿ.ಎಂ.ಗುರುನಾಥ್, ಜಿ.ಪಿ.ಆನಂದಕುಮಾರ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎಸ್.ಕೆ. ಮಲ್ಲಿಕಾರ್ಜುನ್ ಅಭಿಪ್ರಾಯ
ವಿದ್ಯಾರ್ಥಿಗಳಿಗೆ ದೇಶ ಭಕ್ತಿಗೀತೆಗಳ ಗಾಯನ ತರಬೇತಿ
ರಂಗಸೌರಭ ಕಲಾ ಸಂಘ
ಚಿತ್ರದುರ್ಗ: ಜಾತಿ ಮತ ಪಂಥಗಳೆನ್ನದೆ ಭಾವೈಕ್ಯತೆಯ ಮಂತ್ರ ನಮ್ಮೆಲ್ಲರ ಘೋಷ ವಾಕ್ಯವಾಗಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾ ಜು ಪೂರೈಕೆ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ಕೆ. ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಚಿತ್ರದುರ್ಗ ತಾಲೂಕು ಇಂಗಳದಾಳ್ ಗ್ರಾಮದ ತಳ ವಾರ ಸಂಚಲಪ್ಪ ನಾಯಕರ ಪ್ರೌಢಶಾಲಾ ಆವರಣದಲ್ಲಿ ರಾಷ್ಟಿçÃಯ ಭಾವೈಕ್ಯತಾ ಕಾರ್ಯಾಗಾರದ ಅಂಗವಾಗಿ ಮಂಗಳವಾ ರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ನಾಡಗೀತೆ, ರೈತಗೀತೆ, ರಾಷ್ಟçಗೀತೆ ಮತ್ತು ವಂದೇ ಮಾತರಂ ಮತ್ತು ದೇಶ ಭಕ್ತಿಗೀತೆಗಳ ಗಾಯನ ತರ ಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದ ಪರಂಪರೆ ಮತ್ತು ಸಂಸ್ಕೃತಿ ಪರಿಚಯಿಸುವ ಮೂಲಕ ಮಕ್ಕಳಲ್ಲಿ ಸದೃಢ ಭಾರತದ ಪರಿಕಲ್ಪನೆಯನ್ನು ಉಳಿಸಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ಮಕ್ಕಳಿಗೆ ಭಾವೈಕ್ಯ ತೆ, ರಾಷ್ಟಿçÃಯತೆಯ ಅರ್ಥ ತಿಳಿಸಿ ಕೋಮುವಾದವನ್ನು ತೊಡೆದು ಹಾಕುವಲ್ಲಿ ರಂಗಸೌರಭ ಕಲಾ ಸಂಘ ನಡೆಸು ತ್ತಿರುವ ಕಾರ್ಯಾಗಾರ ಮಹತ್ವದ್ದಾಗಿದೆ ಎಂದರು.
ಮುಖ್ಯ ಶಿಕ್ಷಕ ಜಿ.ಪಿ. ಆನಂದ ಕುಮಾರ್ ಮಾತನಾಡಿದರು. ಸಹಶಿಕ್ಷಕರಾದ ಎಂ. ರಂಗನಾಥ್, ಎಚ್. ಧನಂಜಯಪ್ಪ, ಎಸ್. ಮಂಜುನಾಥ್, ಚಿನ್ಮಯ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಎಂ.ಬಿ. ಮುರುಳಿ, ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಉಪಸ್ಥಿತರಿದ್ದರು.
ರಂಗನಿರ್ದೇಶಕ ಕೆ.ಪಿ.ಎಂ. ಗಣೆÃಶಯ್ಯ ತರಬೇತಿ ನೀಡಿದರು. ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿ ಬಡ್ತಿ ಪಡೆದಿರುವ ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಆರ್. ರುದ್ರಸ್ವಾಮಿ ಸ್ವಾಗತಿಸಿ, ಜಿ.ವಿ.ತೇಜಸ್ವಿ ನಿರೂಪಿಸಿದರು. ತನುಶ್ರೀ, ವಿದ್ಯಾರ್ಥಿಗಳಾದ ಅಪರ್ಣಾ ಮತ್ತು ಆಶ್ರಿತಾ ಪ್ರಾರ್ಥಿಸಿದರು.