ಚಿತ್ರದುರ್ಗದಲ್ಲಿ ಗುರುವಾರ ಏರ್ಪಡಿಸಿದ್ದ ತಂಬಾಕು ನಿಯಂತ್ರಣ ಕೋಶದ ತ್ರೆÊಮಾಸಿಕ ಸಮನ್ವಯ ಸಮಿತಿ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಎಡಿಸಿ ಬಿ.ಟಿ.ಕುಮಾರಸ್ವಾಮಿ, ಬಿ.ಎಂ.ಪ್ರಭುದೇವ್, ಡಾ.ಎಂ.ರAಗಸ್ವಾಮಿ, ರೇಷ್ಮಾ ಹಾನಗಲ್, ಡಾ.ರೇಖಾ, ಡಾ.ಸಿ.ಒ.ಸುಧಾ, ಡಾ.ಎನ್.ಕಾಶಿ, ಡಾ.ಚಂದ್ರಶೇಖರ್ ಕಂಬಾಳಿಮಠ್, ಡಾ.ಡಿ.ಎಂ.ಅಭಿನವ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾರ್ಯಾಚರಣೆ ಸಂಖ್ಯೆ ಕುಸಿತಕ್ಕೆ ಎಡಿಸಿ ಗರಂ
ಟಿಎಚ್‌ಒಗಳಿಗೆ ಶೋಕಾಸ್ ನೋಟಿಸ್‌ಗೆ ಸೂಚನೆ
ತಂಬಾಕು ಸೇವನೆ ದುಷ್ಪರಿಣಾಮ
ಚಿತ್ರದುರ್ಗ : ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಹೆಚ್ಚು ಅರಿವು ಮೂಡಿಸುವ ಮೂಲಕ ತಂಬಾಕುಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಕ್ರಮವಹಿಸುವಂತೆ ಅಪರ ಜಿಲ್ಲಾಽಕಾರಿ ಬಿ.ಟಿ. ಕುಮಾರಸ್ವಾಮಿ ಅಽಕಾರಿಗಳಿಗೆ ಸೂಚಿಸಿದರು.
ಜಿಲ್ಲಾಽಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೆÊಮಾಸಿಕ ಸಮನ್ವಯ ಸಮಿತಿ ಪ್ರಗತಿ ಪರಿ ಶೀಲನಾ ಸಭೆಯಲ್ಲಿ ಮಾತನಾಡಿ, ಯುವಜನರು ತಂಬಾಕಿನ ದುಶ್ಚಟಗಳಿಗೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿ. ತಂಬಾ ಕಿನ ದುಷ್ಪರಿಣಾಮಗಳ ಕುರಿತು ಆರೋಗ್ಯ ಇಲಾಖೆ ಸಮುದಾಯದಲ್ಲಿ ಜಾಗÊತಿ ಮೂಡಿಸಬೇಕು ಎಂದರು.
ತAಬಾಕುಮುಕ್ತ ಗ್ರಾಮ ಘೋಷಣೆಗೆ ಸಹಕರಿಸಿದ ಆಯಾ ಗ್ರಾಪಂ ಪಿಡಿಒಗಳನ್ನು, ಮೇ ೩೧ರಂದು ಆಚರಿಸುವ ವಿಶ್ವ ತಂಬಾಕು ರಹಿತ ದಿನದ ಕಾರ್ಯಕ್ರಮದ ವೇಳೆ ಗೌರವಿಸಬೇಕು. ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಕಳೆದ ೪ ತಿಂಗಳಿ ನ ಲ್ಲಿ ಪ್ರತಿ ತಾಲೂಕಿನಲ್ಲಿ ತಲಾ ೨೦ ಕಾರ್ಯಾಚರಣೆ ಗುರಿ ಇತ್ತು. ಜಿಲ್ಲೆಯಲ್ಲಿ ೧೨೦ ಮಾತ್ರ ಆಗಿವೆ. ಕಡಿಮೆ ಪ್ರಗತಿ ಸಾಽಸಿದ ತಾಲೂಕು ಆರೋಗ್ಯಾಽಕಾರಿಗಳಿಗೆ ಶೋಕಾಸ್ ನೀಡುವಂತೆ ಕುಮಾರಸ್ವಾಮಿ ತಾಕೀತು ಮಾಡಿದರು.
ಶಾಲಾ, ಕಾಲೇಜುಗಳ ಆವರಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ತಡೆಯಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಶಾಲಾ, ಕಾಲೇಜು ಹಂತದಲ್ಲಿಯೇ ಮಕ್ಕಳು ತಂಬಾಕು ವ್ಯಸನಕ್ಕೆ ತುತ್ತಾಗುತ್ತಿರುವುದು ಅವರ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದರು.
ಶಾಲಾ- ಕಾಲೇಜುಗಳ ಸುತ್ತಮುತ್ತ ತಂಬಾಕು ಮಾರಾಟವಾಗದಂತೆ ನಿಗಾ ವಹಿಸಬೇಕು. ಅಬಕಾರಿ ಇಲಾಖೆ ಅಽಕಾರಿಗಳು ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ತಂಬಾಕು ಬಳಕೆ ಮತ್ತು ಧೂಮಪಾನ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಿ ನಿಯಮ ಉಲ್ಲಂಘಿಸುವ ಮಳಿಗೆಗಳ ಪರವಾನಗಿ ರದ್ದುಪಡಿಸಲು ಸೂಚಿಸಿದರು.
೪೬ ತಂಬಾಕು ಮುಕ್ತ ಶಾಲಾ- ಕಾಲೇಜು
ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ ಮಾತನಾಡಿ, ಕಳೆದ ಮೂರು ತಿಂಗಳ ಅವಽಯಲ್ಲಿ ಜಿಲ್ಲೆ ಯ ೬೪ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ೪೬ ತಂಬಾಕು ಮುಕ್ತ ಶಾಲಾ/ಕಾಲೇಜುಗಳನ್ನು ಘೋಷಿಸ ಲಾಗಿದೆ.
೩೨ ತಂಬಾಕು ದಾಳಿಗಳನ್ನು ನಡೆಸಲಾಗಿದೆ. ತಂಬಾಕು ವ್ಯಸನ ಮುಕ್ತ ಕೇಂದ್ರಗಳಲ್ಲಿ ೪೭೧೫ ಜನರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ೨೪೬ ಜನರು ಚಿಕಿತ್ಸೆ ಪಡೆದಿದ್ದು, ೨೪ ಮಂದಿ ತಂಬಾಕು ತ್ಯಜಿಸಿದ್ದಾರೆ. ೪ ತಂಬಾಕು ಮುಕ್ತ ಹಳ್ಳಿ ಹಾಗೂ ೪ ತಂಬಾಕು ಮುಕ್ತ ದೇವಸ್ಥಾನಗಳನ್ನು ಘೋಷಿಸಲಾಗಿದೆ ಎಂದರು.
ಜಿಪA ಉಪ ಕಾರ್ಯದರ್ಶಿ ಡಾ.ಎಂ.ರAಗಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ತಂಬಾಕು ನಿಯಂತ್ರಣಾಽಕಾರಿ ಡಾ.ರೇಖಾ, ಆರೋಗ್ಯ ಇಲಾಖೆ ಕಾರ್ಯಕ್ರಮ ಅನುಷ್ಠಾನಾಽಕಾರಿಗಳಾದ ಡಾ.ಸಿ.ಒ.ಸುಧಾ, ಡಾ. ಎನ್.ಕಾಶಿ, ಡಾ.ಚಂದ್ರಶೇಖರ್ ಕಂಬಾಳಿಮಠ್, ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ.ಡಿ.ಎಂ.ಅಭಿನವ್ ಇದ್ದರು.