ಗಡಿ ಗ್ರಾಮಗಳ ವಿದ್ಯಾರ್ಥಿಗಳಿಗೆ ವರದಾನ: ತಾಲೂಕಿನ ಗಡಿಭಾಗದ ಸಂತೆಗುಡ್ಡ, ಬಾಂಡ್ರಾವಿ, ಹನುಮಗುಡ್ಡ, ಹನುವಾಪುರ, ಚಿಕ್ಕೋಬನಹಳ್ಳಿ ಸೇರಿದಂತೆ ಗುಡ್ಡಗಾಡು ಪ್ರದೇಶಗಳ ಹಲವು ಗ್ರಾಮಗಳಿಗೆ ಇಂದಿಗೂ ಸರಿಯಾದ ಬಸ್ ಸೌಲಭ್ಯವಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಶಾಲೆ- ಕಾಲೇಜುಗಳಿಗೆ ತೆರಳಲು ಪರದಾಡುವಂತಾಗಿದೆ. ಆಟೋ ಅಥವಾ ಬೈಕ್ ಇಲ್ಲದಿದ್ದರೆ ಶಾಲೆ ತಪ್ಪಿಸುವ ಪರಿಸ್ಥಿತಿ ಇತ್ತು. ಈಗ ತಾಲೂಕು ಕೇಂದ್ರದಿಂದ ಎಲ್ಲ ಹಳ್ಳಿಗಳಿಗೂ ಬಸ್ ಸೌಲಭ್ಯ ಕಲ್ಪಿಸುವ ಜತೆಗೆ ಬೆಂಗಳೂರು, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ ಮೊದಲಾದ ನಗರಗಳಿಗೆ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.