ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ವೀರೇಂದ್ರಪಪ್ಪಿ, ಕುಮಾರಸ್ವಾಮಿ, ತಾಜ್‌ಪೀರ್, ಶಿವಣ್ಣ, ಕಾಂತರಾಜ್, ವಸಂತ್‌ಕುಮಾರ್, ಬಿ.ಪಿ. ತಿಪ್ಪೇಸ್ವಾಮಿ, ನಿರಂಜನಮೂರ್ತಿ ಇತರರು ಇದ್ದರು.
ಚಿತ್ರದುರ್ಗ: ಭಗವಾನ್ ಬುದ್ಧರು ವಿಶ್ವ ಶಾಂತಿಗೆ ಸಾರಿದ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಹೇಳಿದರು.
ಜಿ¯್ಲÁಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ನಗರದ ಒನಕೆ ಓಬವ್ವ ಜಿ¯್ಲÁ ಕ್ರೀಡಾಂಗಣ ಮುಂಭಾಗದ ಬುದ್ಧ ಪ್ರತಿಮೆ ಬಳಿ ಶುಕ್ರವಾರ ಆಯೋಜಿಸಿದ್ದ ಬುದ್ಧ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ರೋಹಿಣಿ ನದಿ ನೀರಿನ ಹಂಚಿಕೆಗಾಗಿ ಎರಡು ಸಾಮ್ರಾಜ್ಯಗಳ ನಡುವೆ ಯುದ್ಧ ನಡೆದಾಗ, ಆ ಹಿಂಸೆ ತಡೆಯಲು ಬುದ್ಧ ತಮ್ಮ ಸಿಂಹಾಸನ ಮತ್ತು ರಾಜ್ಯವನ್ನೇ ತ್ಯಜಿಸಿದರು. ನಾವೀಗ ಯುದ್ಧ ಮತ್ತು ಸಂಘರ್ಷಗಳ ನಡುವೆ ಬದುಕುತ್ತಿದ್ದೇವೆ. ಸಮಾನತೆಯ ಕುರಿತು ಮಾತನಾಡುತ್ತೇವೆ. ಪ್ರತಿಯೊಂದಕ್ಕೂ ಉತ್ತರ ಬುದ್ಧನ ಜ್ಞಾನ ಮಾರ್ಗದಲ್ಲಿದೆ ಎಂದು ಹೇಳಿದರು.
ಬುದ್ಧನ ತತ್ವ ಮತ್ತು ಸಂದೇಶಗಳ ಪ್ರಚಾರಕ್ಕೆ ಪೂರಕವಾಗುವಂತೆ ಒಂದು ಸುಸಜ್ಜಿತ ಮಂದಿರ ಅಥವಾ ಸಮುದಾಯ ಭವನ ನಿರ್ಮಿಸುವುದಾಗಿ ಭರವಸೆ ನೀಡಿದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಆಸೆ ಕಾರಣದಿಂದ ಮಾನವರಲ್ಲಿ ಶಾಂತಿ ಇಲ್ಲದಂತಾಗಿದೆ.
ಎಷ್ಟೇ ಶ್ರೀಮಂತರಾದರೂ ಮಾನಸಿಕವಾಗಿ ಬಡವರಾಗುತ್ತಿದ್ದೇವೆ. ನಂಬಿಕೆ ಇಲ್ಲದ ಸ್ಥಿತಿ ಅವರವರಲ್ಲೇ ನಿರ್ಮಾಣವಾಗುತ್ತಿದೆ. ಕೊನೆಗೆ ಎಲ್ಲವನ್ನೂ ಕಳೆದುಕೊಂಡರೂ ಅಚ್ಚರಿ ಇಲ್ಲ. ಹೀಗಾಗಿ ಜಗತ್ತಿಗೆ ಬುದ್ಧನ ಶಾಂತಿ ಮತ್ತು ಅಹಿಂಸೆಯ ತತ್ವಾದರ್ಶ ಅತ್ಯ ಗತ್ಯ ಎಂದು ಸಲಹೆ ನೀಡಿದರು. ಬುದ್ಧನ ಮಾರ್ಗ ಅಂಬೇಡ್ಕರ್, ಮಹಾತ್ಮ ಗಾಂಽÃಜಿ ಒಳಗೊಂಡು ಮಹಾನ್ ಚೇತನ ರಿಗೂ ಪ್ರೇರಣೆಯಾಗಿತ್ತು ಎಂದು ಸ್ಮರಿಸಿದರು.
ವಕೀಲ ವಿಶ್ವನಾಥ್ ಕೆ. ವದ್ದಿಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್, ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಗ್ಯಾರಂಟಿ ಯೋಜನೆಗಳ ಪ್ರಾಽಕಾರದ ಜಿ¯್ಲÁಧ್ಯಕ್ಷ ಆರ್. ಶಿವಣ್ಣ, ಎಸಿ ಡಾ.ಕೆ.ಜೆ. ಕಾಂತರಾಜ್, ತಹಸೀಲ್ದಾರ್ ಗೋವಿಂದರಾಜು,
ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ರಾಮ ಮಾರಿಹಾಳ, ಡಿಡಿಪಿಐ ಮಂಜುನಾಥ್, ಹಿಂದುಳಿದ ವರ್ಗಗಳ ಕಲ್ಯಾಣಾಽಕಾರಿ ಪುಷ್ಪಲತಾ ಭಾವಿಮಠ, ವಲಯ ಅರಣ್ಯ ಸಂರಕ್ಷಣಾಽಕಾರಿ ವಸಂತಕುಮಾರ್, ಬಿ.ಪಿ. ತಿಪ್ಪೇಸ್ವಾಮಿ, ನಿರಂಜನಮೂರ್ತಿ ಇತರರು ಇದ್ದರು.
ಭಾವಚಿತ್ರ ಮೆರವಣಿಗೆ ಅದ್ದೂರಿ
ನಗರದ ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಬುದ್ಧನ ಭಾವಚಿತ್ರ ಮೆರವಣಿಗೆಗೆ ಬಿ.ಟಿ. ಕುಮಾರಸ್ವಾಮಿ ಚಾಲನೆ ನೀಡಿದರು. ಮದಕರಿನಾಯಕ ವೃತ್ತ, ಜಿ¯್ಲÁಸ್ಪತ್ರೆ ಸರ್ಕಲï ಮಾರ್ಗವಾಗಿ ಸಂಚರಿಸಿ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣ ತಲುಪಿತು.