ಮೇ ೧ರಂದು ಬುದ್ಧ ಜಯಂತಿ ಅರ್ಥಪೂರ್ಣ ಆಚರಣೆ

ಚಿತ್ರದುರ್ಗದಲ್ಲಿ ಮೇ ೧ರಂದು ಆಚರಿಸಲಿರುವ ಬುದ್ಧ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಎಸಿ ಕೆ.ಜೆ. ಕಾಂತರಾಜ್, ಬಿ.ಎಂ. ಗುರುನಾಥ್, ರಾಜಣ್ಣ, ಬಿ.ಪಿ.ತಿಪ್ಪೇಸ್ವಾಮಿ, ದುರ್ಗೇಶಪ್ಪ, ಜಯಣ್ಣ, ಎಂ.ಡಿ. ರವಿ,ಬೆನಕನಹಳ್ಳಿ ಚಂದ್ರಣ್ಣ ಇತರರು ಇದ್ದರು.
ಚಿತ್ರದುರ್ಗದಲ್ಲಿ ಮೇ ೧ರಂದು ಆಚರಿಸಲಿರುವ ಬುದ್ಧ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಎಸಿ ಕೆ.ಜೆ. ಕಾಂತರಾಜ್, ಬಿ.ಎಂ. ಗುರುನಾಥ್, ರಾಜಣ್ಣ, ಬಿ.ಪಿ.ತಿಪ್ಪೇಸ್ವಾಮಿ, ದುರ್ಗೇಶಪ್ಪ, ಜಯಣ್ಣ, ಎಂ.ಡಿ. ರವಿ,ಬೆನಕನಹಳ್ಳಿ ಚಂದ್ರಣ್ಣ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪವಿಭಾಗಾಽಕಾರಿ ಡಾ.ಕೆ.ಜೆ. ಕಾಂತರಾಜ್ ಹೇಳಿಕೆ
  • ಡಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ
  • ಭಗವಾನ್ ಬುದ್ಧರ ಜನ್ಮದಿನ
ಚಿತ್ರದುರ್ಗ: ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆ ಸಂದೇಶ ಸಾರಿದ ಭಗವಾನ್ ಬುದ್ಧರ ಜನ್ಮದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಉಪವಿಭಾಗಾಽಕಾರಿ ಡಾ.ಕೆ.ಜೆ. ಕಾಂತರಾಜ್ ಹೇಳಿದರು.
ಡಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ೯ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಬುದ್ಧನ ಸಂದೇಶ ಗಳನ್ನು ಸಾರುವ ಸ್ತಬ್ಧ ಚಿತ್ರಗಳೊಂದಿಗೆ ಸಾಂಸ್ಕೃತಿಕ ಮೆರವಣಿಗೆ ಮಾಡಲಾಗುವುದು.
೧೧ಗಂಟೆಗೆ ನಗರದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದ ಮುಂದಿರುವ ಬುದ್ಧ ಪುತ್ಥಳಿ ಬಳಿ ವೇದಿಕೆ ಕಾರ್ಯಕ್ರಮ ಜರುಗಲಿದೆ. ಬುದ್ಧನ ಜೀವನ, ತತ್ವಗಳ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸುವ ಮೂಲಕ ಯುವ ಪೀಳಿಗೆಗೆ ಅರಿವು ಮೂಡಿಸಲಾಗುವುದು.
ಪ್ರಖರ ಬೇಸಿಗೆ ಕಾರಣಕ್ಕೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕುಡಿಯುವ ನೀರು, ಆಸನ ವ್ಯವಸ್ಥೆ ಹಾಗೂ ಮೂಲ ಸೌಕರ್ಯಗಳಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕೆಂದು ಕಾಂತರಾಜ್‌ಅಽಕಾರಿಗಳಿಗೆ ಸೂಚಿಸಿದರು.
ಬುದ್ಧನ ತತ್ವಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿದ್ದು, ಜಯಂತಿ ಆಚರಣೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಹೆಚ್ಚಬೇಕು. ಜಿಲ್ಲಾ ಮಟ್ಟದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್ ಕೋರಿದರು.
ಬುದ್ಧ ವಿಗ್ರಹ ದುರಸ್ಥಿಗೆ ಮನವಿ
ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದ ಮುಂದೆ ಬುದ್ಧನ ವಿಗ್ರಹದಲ್ಲಿ ಸಣ್ಣಪುಟ್ಟ ಬಿರುಕುಗಳು ಕಂಡುಬAದಿದೆ. ನಗರ ಸಭೆಯಿಂದ ಹೊಸದಾಗಿ ಬಣ್ಣ ಹಚ್ಚುವುದರೊಂದಿಗೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು.
ಮೆರವಣಿಗೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ಪಾಲ್ಗೊಳ್ಳಲು ನಿರ್ದೇಶನ ನೀಡುವಂತೆ ಮುಖಂಡರು ಮನವಿ ಮಾಡಿದರು. ದುರ್ಗೇ ಶಪ್ಪ,ಜೆ.ಜೆ.ಕುಮಾರ್,ಬಿ.ಪಿ.ತಿಪ್ಪೇಸ್ವಾಮಿ, ರಾಜಣ್ಣ,ಜಯಣ್ಣ ಎಂ. ಡಿ.ರವಿ,ಬಿ.ಆರ್. ಶಿವಕುಮಾರ್, ಶಿವಮೂರ್ತಿ, ಬೆನಕನಹಳ್ಳಿ ಚಂದ್ರಣ್ಣ, ನಾಗರಾಜ ಮತ್ತಿತರ ಮುಖಂಡರು, ಜಿಲ್ಲಾಮಟ್ಟದ ಅಽಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net