೭೬ ಎಕರೆ ವಿಶಾಲ ವಿಸ್ತೀರ್ಣದಲ್ಲಿ ಬಿಎಸ್‌ವೈ ಅಭಿಮಾನೋತ್ಸವ ಸಮಾವೇಶ

ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವ ಸಿದ್ಧತೆಗಳನ್ನು ಸಂಸದ ಗೋವಿಂದ ಎಂ.ಕಾರಜೋಳ ಗುರುವಾರ ವೀಕ್ಷಿಸಿದರು. ತಮ್ಮೇಶಗೌಡ,ಕೆ.ಟಿ.ಕುಮಾರಸ್ವಾಮಿ, ಎ.ಮುರಳಿ,ರಾಜಣ್ಣ,ಮೀಸೆ ಮಹಾಲಿಂಗಪ್ಪ ಇತರರು ಇದ್ದರು.
ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವ ಸಿದ್ಧತೆಗಳನ್ನು ಸಂಸದ ಗೋವಿಂದ ಎಂ.ಕಾರಜೋಳ ಗುರುವಾರ ವೀಕ್ಷಿಸಿದರು. ತಮ್ಮೇಶಗೌಡ,ಕೆ.ಟಿ.ಕುಮಾರಸ್ವಾಮಿ, ಎ.ಮುರಳಿ,ರಾಜಣ್ಣ,ಮೀಸೆ ಮಹಾಲಿಂಗಪ್ಪ ಇತರರು ಇದ್ದರು.
Published on
ಚಿತ್ರದುರ್ಗ: ನಗರದಲ್ಲಿ ಮೇ ೯ರಂದು ಆಯೋಜಿಸಿರುವ ಬಿಎಸ್‌ವೈ ಅಭಿಮಾನೋತ್ಸವಕ್ಕಾಗಿ ಶ್ರೀ ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠ ಸ ಮೀಪದ ಅಂದಾಜು ೭೬ ಎಕರೆ ಜಾಗದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣವಾಗಲಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಗುರುವಾರ ಕರ‍್ಯಕ್ರಮ ಸ್ಥಳಕ್ಕೆ ಭೇಟಿ ಪರಿಶೀಲಿಸಿದ ಅವರು, ರೈತರು,ಮಹಿಳೆಯರು, ದಲಿತರು,ಕಾರ್ಮಿಕರು,ಅಭಿಮಾನಿಗಳು ಹಿತೈಷಿಗಳು ಸೇರಿದಂತೆ ಸಮಾವೇಶದಲ್ಲಿ ರಾಜ್ಯದ ೨೯೦೦೦ ಹಳ್ಳಿಗಳಿಂದ ೮-೧೦ ಲಕ್ಷ ಜನರು ಭಾಗವಹಿಸಲಿದ್ದಾರೆ.
ಇದಕ್ಕಾಗಿ ಅಗತ್ಯ ಸಿದ್ಧತೆಗ ಳು ಭರದಿಂದ ಸಾಗಿವೆ. ಕುಡಿಯುವ ನೀರು,ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಜನರು ಸ್ವಯಂ ಪ್ರೇರಿತರಾಗಿ ಕೆಲಸ ಮಾಡುತ್ತಿದ್ದು,ಈ ಕರ‍್ಯಕ್ರಮ ಐತಿಹಾಸಿಕ ದಾಖಲೆಯಾಗಲಿದೆ.
ಯಡಿಯೂರಪ್ಪ ಎಂದರೆ ಹೋರಾಟಗಾರ ಎಂದೇ ಗುರುತಿಸಲಾಗಿದೆ. ಜನ ಸೇವೆಗಾಗಿಯೇ ತಮ್ಮ ಜೀವನ ವನ್ನೇ ಮುಡುಪಾಗಿ ಇ ಟ್ಟಿದ್ದಾರೆ. ಬಡವರ ಪರ ಕೆಲಸ ಮಾಡಿದ್ದಾರೆ. ಹಲವು ಸವಾಲುಗಳನ್ನು ಎದುರಿಸಿ ರಾಜ್ಯದಲ್ಲಿ ಪಕ್ಷ ಕಟ್ಟಿದ್ದಾರೆ. ಮೇ೮ರಂದು ಸಂಜೆ ಇತಿಹಾಸ ನಗರಿ ಚಿತ್ರದುರ್ಗ ನಗರದಲ್ಲಿ ನಡೆಯುವ ಯಡಿಯೂರಪ್ಪರ ಪುರ ಪ್ರವೇಶ ಕರ‍್ಯಕ್ರಮದಲ್ಲಿ ನಮ್ಮ ಕಲೆ, ಸಾಹಿತ್ಯ,ಸಂಸ್ಕೃತಿ ಆನಾವ ರಣಗೊಳ್ಳಲಿದೆ. ನಾಡಿಗೆ ಯಡಿಯೂರಪ್ಪ ನೀಡಿದ ಕೊಡುಗೆಗಳೆಡೆ ಎಲ್ಲ ವರ್ಗದವರಿಂದ ಮೆಚ್ಚುಗೆ ಇದೆ ಎಂದರು.
ಬಿಜೆಪಿ ರಾಜ್ಯಕರ‍್ಯದರ್ಶಿ ತಮ್ಮೇಶಗೌಡ,ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಎ.ಮುರಳಿ,ರಾಜಣ್ಣ,ಮೀಸೆ ಮಹಾಲಿಂಗಪ್ಪ, ವೆಂಕಟೇ ಶ್‌ಯಾದವ್,ಮೋಹನ್‌ಕುಮಾರ್,ನಾಗರಾಜ್‌ಬೇದ್ರೆ,ಸುರೇಶ್‌ಸಿದ್ದಾಪುರ,ಸಂಪತ್‌ಕುಮಾರ್,ದಗ್ಗೆ ಶಿವಪ್ರಕಾಶ್,ಚಳ್ಳಕೆರೆ ಮಂಜು,ಯ ಶವಂತ್,ಅರುಣï ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net