ಬ್ರಾಂಡ್ ಚಿತ್ರದುರ್ಗ ಸಮಾವೇಶ ಜೂ. ೧೩ಕ್ಕೆ

ನಗರದಲ್ಲಿ ಜೂ. ೧೩ರಂದು ಹಮ್ಮಿಕೊಂಡಿರುವ ಬ್ರಾಂಡ್ ಚಿತ್ರದುರ್ಗ ಸಮಾವೇಶದ ಲೋಗೋವನ್ನು ಟಿ.ಆರ್.ಶಿವಪ್ರಸಾದ್ ಬಿಡುಗಡೆಗೊಳಿಸಿದರು. ರಾಘವೇಂದ್ರ, ವೈ.ಆರ್. ನಾಗೇಂದ್ರ, ಡಿ.ಕೆ. ದೋಣಸ್ವಾಮಿ, ಟಿ.ಎಲ್. ಅಶೋಕ್ ಇತರರಿದ್ದರು.
ನಗರದಲ್ಲಿ ಜೂ. ೧೩ರಂದು ಹಮ್ಮಿಕೊಂಡಿರುವ ಬ್ರಾಂಡ್ ಚಿತ್ರದುರ್ಗ ಸಮಾವೇಶದ ಲೋಗೋವನ್ನು ಟಿ.ಆರ್.ಶಿವಪ್ರಸಾದ್ ಬಿಡುಗಡೆಗೊಳಿಸಿದರು. ರಾಘವೇಂದ್ರ, ವೈ.ಆರ್. ನಾಗೇಂದ್ರ, ಡಿ.ಕೆ. ದೋಣಸ್ವಾಮಿ, ಟಿ.ಎಲ್. ಅಶೋಕ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೈಗಾರಿಕಾ ಹಬ್
  • ಲಾಜಿಸ್ಟಿಕ್-
  • ಮೊಳಕಾಲ್ಮೂರು ರೇಷ್ಮೆ ಸೀರೆ
ಚಿತ್ರದುರ್ಗ: ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜೂ. ೧೩ ರಂದು ಬ್ರಾಂಡ್ ಚಿತ್ರದುರ್ಗ ಸಮಾವೇಶ ಹಮ್ಮಿಕೊಂಡಿ ರುವುದಾಗಿ ಹಿಂದೂ ಎಕನಾಮಿಕ್ -ೆÇÃರಂ (ಎಚ್‌ಇಎ-ï) ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಟಿ.ಆರ್. ಶಿವಪ್ರಸಾದ್ ತಿಳಿಸಿದರು.
ಬೀದರ್‌ನಿಂದ ಮೈಸೂರುವರೆಗೂ ಪ್ರತಿ ಜಿಲ್ಲೆಯಲ್ಲೂ ಅನುಕೂಲಕರ ಆರ್ಥಿಕ ವಾತಾವರಣದೊಂದಿಗೆ ನಾಯಕತ್ವ ಬೆಳೆಸುವ ಉದ್ದೇಶದೊಂದಿಗೆ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಮಂಗಳವಾರ ಕಾರ್ಯಕ್ರಮದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದರು.
ಅಂದು ಬೆಳಗ್ಗೆ ೮ರಿಂದ ಸಂಜೆ ೬ರವರೆಗೂ ನಡೆಯುವ ಸಮಾವೇಶದಲ್ಲಿ ೨೫೦ ರಿಂದ ೩೦೦ ಮಂದಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಡಬ್ಲ್ಯುಎಚ್‌ಇಎ-ï ಮತ್ತು ಎಚ್‌ಇಎ-ï‌ನ ಸಂಸ್ಥಾಪಕ ಸ್ವಾಮಿ ವಿಜ್ಞಾನಂದ್‌ಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ರಾಜ್ಯದ ಆಯಾ ಜಿ¯್ಲÉಯ ಹೆಸರಿನೊಂದಿಗೆ ಬ್ರಾಂಡ್ ಸೃಷ್ಟಿಸಿ, ಅಲ್ಲಿನ ಪ್ರಮುಖ ಉತ್ಪನ್ನಗಳನ್ನು ರಾಜ್ಯ, ರಾಷ್ಟಿçÃಯ, ಅಂತಾ ರಾಷ್ಟಿçÃಯ ಮಟ್ಟದಲ್ಲಿ ಪರಿಚಯಿಸುವ ಗುರಿಯನ್ನೂ ಹೊಂದಲಾಗಿದೆ.
ಚಿತ್ರದುರ್ಗವನ್ನು ಲಾಜಿಸ್ಟಿಕ್-ಕೈಗಾರಿಕಾ ಹಬ್, ಪ್ರವಾಸೋದ್ಯಮ ಅಭಿವೃದ್ಧಿ, ಮೊಳಕಾಲ್ಮೂರು ರೇಷ್ಮೆ ಸೀರೆಗೆ ರಾಷ್ಟçಮಟ್ಟ ದ ಲ್ಲಿ ಬೇಡಿಕೆ, ಕೃಷಿ ಮತ್ತು ಅದರ ಆಧಾರಿತ ಉದ್ಯಮಗಳ ಪ್ರಗತಿ,ರ-ÀÅ್ತ ಸಾಮರ್ಥಾ್ಯಭಿವೃದ್ಧಿ,ಸಣ್ಣ ಮತ್ತು ಮಧ್ಯಮ ಹಾಗೂ ಮಹಿಳಾ ಉದ್ಯಮಿಗಳ ಬೆಳವಣಿಗೆ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.
ರಾಘವೇಂದ್ರ ಮಾತನಾಡಿದರು. ಸಂಘಟಕರಾದ ವೈ.ಆರ್. ನಾಗೇಂದ್ರ, ಡಿ.ಕೆ. ದೋಣಸ್ವಾಮಿ, ಟಿ.ಎಲ್. ಅಶೋಕ್ ಇತರ ರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net