ಉತ್ತಮ ಮಾರುಕಟ್ಟೆ ಅವಕಾಶಕ್ಕೆ ಬ್ರ‍್ಯಾಂಡ್ ಚಿತ್ರದುರ್ಗ ಸಮಾವೇಶ
ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಬ್ರ‍್ಯಾಂಡ್ ಚಿತ್ರದುರ್ಗ ಸಮಾವೇಶವನ್ನು ಎಂಎಲ್‌ಸಿ ಕೆ.ಎಸ್.ನವೀನ್ ಉದ್ಘಾಟಿಸಿದರು. ಟಿ.ಎಸ್. ಶಿವಪ್ರಸಾದ್, ಜಿ.ಎಸ್. ಅನಿತ್‌ಕುಮಾರ್, ಡಾ. ಸಿದ್ದಾರ್ಥ್ ಗುಂಡಾರ್ಫಿ, ರಾಘವೇಂದ್ರ, ಡಾ. ಮಂಜುನಾಥ್ ಇತರರು ಇದ್ದರು.
ವಿ.ಡಿ.ಸಾವರ್ಕರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ
ಚಿತ್ರದುರ್ಗ: ರಸ್ತೆ, ರೈಲ್ವೆ ಸಂಪರ್ಕ ಉತ್ತಮವಾಗಿರುವ ಚಿತ್ರದುರ್ಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಎಲ್ಲ ಅನುಕೂಲಗಳಿವೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
ಹಿಂದೂ ಎಕನಾಮಿಕ್ -ೆÇÃರಂ ಚಿತ್ರದುರ್ಗ ಚಾಪ್ಟರ್, ವಿ.ಡಿ.ಸಾವರ್ಕರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಾಗೂ ಬನಶಂಕರಿ ವಾಣಿಜ್ಯ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಮಹರ್ಷಿ ವಾಲ್ಮಿಕಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಬ್ರ‍್ಯಾಂಡ್ ಚಿತ್ರದುರ್ಗ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲಗಳಿರುವುದರಿಂದ ಚಿತ್ರದುರ್ಗವನ್ನು ಲಾಜಿಸ್ಟಿಕ್ ಹಬ್ ಮಾಡುವಂತೆ ರಾಜ್ಯ, ಕೇಂ ದ್ರ ಸರ್ಕಾರಗಳಿಗೆ ಕೋರಿಕೆ ಸಲ್ಲಿಸಲಾಗಿದೆ. ಹಿಂದೂಗಳು ಸಂಘಟಿತರಾಗಿ ವ್ಯಾಪಾರ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲಿ. ಇಲ್ಲಿಯ ಉತ್ಪನ್ನಗಳನ್ನು ಹೊರಗೆ ಪರಿಚಯಿಸಲು/ಕಳಿಸುವ ಅನುಕೂಲಕ್ಕಾಗಿ ಹಾಗೂ ಉತ್ತಮ ಮಾರುಕಟ್ಟೆ ಅವಕಾಶವನ್ನು ಸ್ಥಳೀಯರಿಗೆ ಒದಗಿಸುವ ಉದ್ದೇಶ ಈ ಸಮಾವೇಶದ್ದಾಗಿದೆ ಎಂದರು.
ರಾಜ್ಯದ ಮಧ್ಯಭಾಗದಲ್ಲಿರುವ ಚಿತ್ರದುರ್ಗದಲ್ಲಿ ಹಾದು ಹೋಗಿರುವ ವಿವಿಧ ರಾಷ್ಟಿçÃಯ ಹೆದ್ದಾರಿಗಳು ನೆರೆ ರಾಜ್ಯಗಳನ್ನು ಸಂಪ ರ್ಕಿಸುತ್ತಿವೆ. ಹಿಂದೂ ಉದ್ಯಮಿಗಳು ಮತ್ತು ಆರ್ಥಿಕ ನಾಯಕತ್ವ ಒಗ್ಗೂಡಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಎ ಕನಾಮಿಕ್ -ÉÇÃರಂ ಪ್ರತಿ ಜಿಲ್ಲೆಯಲ್ಲೂ ಹಿಂದೂಗಳಿಗೆ ಅನುಕೂಲಕರ ಆರ್ಥಿಕ ವಾತಾವರಣ ನಿರ್ಮಿಸುವ ಉದ್ದೇಶದಿಂದ `ಬ್ರ‍್ಯಾಂಡ್'ಸಮಾವೇಶಗಳ ಸರಣಿ ಆಯೋಜಿಸುತ್ತಿದೆ. ಜಿಲ್ಲೆಯ ಹಲವು ಉದ್ದಿಮೆದಾರರು ಈಗಾಗಲೇ ಬ್ರ‍್ಯಾಂಡ್ ಆಗಿದ್ದಾರೆ ಎಂದರು.
ಹಿAದೂ ಎಕನಾಮಿಕ್ -ÉÇÃರಂ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಟಿ.ಆರ್. ಶಿವಪ್ರಸಾದ್ ಮಾತನಾಡಿ, ಬೀದರ್‌ನಿಂದ ಹಿಡಿದು ಮೈಸೂರುವರೆಗೂ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಬ್ರ‍್ಯಾಂಡ್ ಹೆಸರಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಚಿತ್ರದುರ್ಗವನ್ನು ಲಾಜಿಸ್ಟಿಕ್ ಹಬ್ ಮಾಡುವುದು, ನಾನಾ ಕ್ಷೇತ್ರಗಳ ಅಭಿವೃದ್ಧಿಯೊಂದಿಗೆ ಹಿಂದೂ ಸಮಾಜವನ್ನು ಆರ್ಥಿಕವಾಗಿ ಒಗ್ಗೂಡಿಸಿ, ಉದ್ಯಮಿಗಳ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲೆಯ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿರುವ ೧೦ ಹಿರಿಯ ಉದ್ಯಮಿಗಳಿಗೆ ಹಾಗೂ ಉದ್ಯೋಗ ಸÊಷ್ಟಿಯಲ್ಲಿ ಯುವಜನರಿಗೆ ಸೂರ್ತಿಯಾಗಿರುವ ೧೦ ಯುವ ಉದ್ಯಮಿಗಳನ್ನು ಗೌರವಿಸಲಾಯಿತು.
ಜಿಎಂ ಗ್ರೂಪ್ ನಿರ್ದೇಶಕ ಜಿ.ಎಸ್. ಅನಿತ್‌ಕುಮಾರ್, ಜಿಎಚ್‌ಆರ್ ಗ್ರೂಫ್ ಸಿಇಒ ಡಾ. ಸಿದ್ದಾರ್ಥ್ ಗುಂಡಾರ್ಫಿ, ರಾಘವೇಂದ್ರ, ಡಾ. ಮಂಜುನಾಥ್, ವಾಸುದೇವ, ನಾಗೇಂದ್ರ, ಡಿ.ಕೆ. ದೊಣಸ್ವಾಮಿ, ಟಿಸಿಪಿ ಗೀತಾ, ನಂದಿನಾಗರಾಜ್, ಆಶೋಕ್ ಇತರರು ಇದ್ದರು.