ಸದ್ಯದಲ್ಲೇ ರಾಜ್ಯಪಾಲರಿಗೆ ಬಿಜೆಪಿ ಬರ ಅಧ್ಯಯನ ವರದಿ

ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಕೃಷಿ ಅಽಕಾರಿಗಳೊಂದಿಗೆ ಚರ್ಚಿಸಲು ಚಿತ್ರದುರ್ಗದ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ಬಿಜೆಪಿ ರೈತ ಮೋರ್ಚಾ ಪ್ರಮುಖರು ಭೇಟಿ ನೀಡಿದರು. ಡಾ. ನವೀನ್‌ಕುಮಾರ್, ಮಲ್ಲಿಕಾರ್ಜನ್, ರಾಜೇಶ್ ಆರ್.ಬುರುಡೆಕಟ್ಟೆ, ಡಾ. ಮಂಜುನಾಥ್, ವೆಂಕಟೇಶ್‌ಯಾದವ್ ಇತರರು ಇದ್ದರು.
ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಕೃಷಿ ಅಽಕಾರಿಗಳೊಂದಿಗೆ ಚರ್ಚಿಸಲು ಚಿತ್ರದುರ್ಗದ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ಬಿಜೆಪಿ ರೈತ ಮೋರ್ಚಾ ಪ್ರಮುಖರು ಭೇಟಿ ನೀಡಿದರು. ಡಾ. ನವೀನ್‌ಕುಮಾರ್, ಮಲ್ಲಿಕಾರ್ಜನ್, ರಾಜೇಶ್ ಆರ್.ಬುರುಡೆಕಟ್ಟೆ, ಡಾ. ಮಂಜುನಾಥ್, ವೆಂಕಟೇಶ್‌ಯಾದವ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಕ್ಷದ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೇಳಿಕೆ
  • ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೂ ಸಿದ್ಧ
  • ತೋಟಗಾರಿಕೆ ಹಾಗೂ ನೀರಾವರಿ ಬೆಳೆಗಳಿಗೆ ನೀಡುವ ಪರಿಹಾರ ಹೆಚ್ಚಿಸಬೇಕು
ಚಿತ್ರದುರ್ಗ: ರಾಜ್ಯದಲ್ಲಿ ಬರದ ಭೀತಿ ಆವರಿಸಿದ್ದರೂ ರೈತರ ಕಾಳಜಿ ಮರೆತು ರಿಯಲ್‌ಎಸ್ಟೇಟ್‌ನಲ್ಲಿ ಮುಳುಗಿರುವ ರಾಜ್ಯ ಕಾಂ ಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಹೋರಾಟ ನಡೆಸಲಿದೆ ಎಂದು ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನವೀನ್‌ಕುಮಾರ್ ಹೇಳಿದರು.
ಹಿರಿಯೂರು,ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಪ್ರವಾಸ ನಡೆಸಿ ಮಳೆ ಪರಿಸ್ಥಿತಿ ಅಧ್ಯಯನ, ರೈತರೊಂದಿಗೆ ಸ ಮಾಲೋಚನೆ ಹಾಗೂ ನಗರದಲ್ಲಿ ಕೃಷಿ ಅಽಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಬರದ ಭೀತಿ ಎದುರಾಗಿದೆ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರೂ ರಾಜ್ಯ ಸರ್ಕಾರ ಬರ ಘೋಷಣೆಗೆ ಮೀನ ಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ರೈತ ಮೋರ್ಚಾದಿಂದ ರಾಜ್ಯದಲ್ಲಿ ಪ್ರವಾಸ ನಡೆಸಿ ಬರ ಪರಿಸ್ಥಿತಿ ಅಧ್ಯಯನ ನಡೆಸಲಾಗುತ್ತಿದೆ. ಮುಂದಿನ ೨ ವಾರಗಳಲ್ಲಿ ರಾಜ್ಯ ಪಾಲರಿಗೆ ವರದಿ ಸಲ್ಲಿಸಲಾಗುವುದು. ಮುಂದಿನ ಹೋರಾಟದ ರೂಪುರೇಷೆಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಬಿತ್ತನೆ ಕುಂಟಿತವಾಗಿದೆ. ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಇನ್ನೂ ಟೇಕ್ ಆ-ï ಆಗಿಲ್ಲ, ಕೃಷಿ ಸಚಿ ವರಿಲ್ಲದೆ ರೈತರ ಕಷ್ಟಗಳನ್ನು ಆಲಿಸುವವರು ಇಲ್ಲದಂತಾಗಿದೆ. ಕಠಿಣ ಪರಿಸ್ಥಿತಿಯ ಈ ಸಂದರ್ಭದಲ್ಲಿ ಶೀಘ್ರ ರಾಜ್ಯದ ರೈತರ ಖಾ ತೆಗಳಿಗೆ ತಲಾ ೨೫ ಸಾವಿರ ರೂ. ಜಮೆ ಮಾಡಬೇಕು.
ಕೃಷಿ ಸಾಲ ಮನ್ನಾದೊಂದಿಗೆ ಎನ್‌ಡಿಆರ್‌ಎ-ï ಮಾರ್ಗಸೂಚಿಗಳನ್ವಯ ತೋಟಗಾರಿಕೆ ಹಾಗೂ ನೀರಾವರಿ ಬೆಳೆಗಳಿಗೆ ನೀಡುವ ಪರಿಹಾರ ಹೆಚ್ಚಿಸಬೇಕು ಎಂದರು.
ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರದ ಬೇಜವಾಬ್ದಾರಿತನ ಮುಂದುವರಿದರೆ ಈ ಸಂಖ್ಯೆ ಹೆಚ್ಚಾಗಲಿದೆ ಎಂದು ನವೀನ್‌ಕುಮಾರ್ ಆತಂಕ ವ್ಯಕ್ತಪಡಿಸಿದರು.
ಮಲ್ಲಿಕಾರ್ಜನ್, ರಾಜೇಶ್ ಆರ್. ಬುರುಡೆಕಟ್ಟೆ, ಡಾ. ಮಂಜುನಾಥ್, ವೆಂಕಟೇಶ್‌ಯಾದವ್, ಗೂಳಿಹಟ್ಟಿ ಜಗದೀಶ್,ಮನುಕುಮಾ ರ್, ಈಶ್ವರ್, ರವಿಕಿರಣ ಪಾಟೀಲ್, ಮನೋಹರ್, ನಾಗರಾಜ್, ಲೋಕೇಶ್, ಗೋವಿಂದರಾಜು, ನಾಗರಾಜ್‌ಬೇದ್ರೆ ಹಾಗೂ ೩ ತಾಲೂಕುಗಳ ಪಕ್ಷದ ಪ್ರಮುಖರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net