

ಪ್ರಮುಖ ಮುಖ್ಯಾಂಶಗಳು
ಬೋಗಸ್ ಓಟುಗಳಿಂದ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ಆಗಲಿದೆ. ಕೆಎಂಇಆರ್‌ಸಿ ಅನುದಾನ ೧೪೪೦ ಕೋಟಿ ರೂ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಬಂದಿದೆ. ಚಿತ್ರದುರ್ಗ, ಹಿರಿಯೂರು ಕುಡಿಯುವ ನೀರು ಯೋಜನೆಗೆ ೫೯೩ ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ರಸ್ತೆ ಅಭಿವೃದ್ಧಿ, ಚೆಕ್‌ಡ್ಯಾಂಗಳ ನಿರ್ಮಾಣವಾಗಿವೆ. ಜಿಪಂ, ತಾಪಂ, ಗ್ರಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣÉಯಲ್ಲಿ ಪಕ್ಷದ ಕಾರ್ಯಕರ್ತರು ಧೈರ್ಯದಿಂದ ಮತ ಕೇಳಬೇಕು.
ನರೇಗಾದ ಕೆಲ ನಿಯಮಗಳನ್ನು ಬದಲಿಸಿ ವಿಬಿಜಿ ರಾಮ್ ಜಿ ಯೋಜನೆ ಜಾರಿಯಾಗಿದೆ. ನರೇಗಾದಲ್ಲಿದ್ದ ಲೋಪಗಳನ್ನು ಗಮನಿಸಿ ಕೇಂದ್ರ ಈ ಬದಲಾವಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟತನದಿಂದ ಬಲಾಢ್ಯರ ಕೈಗೆ ಹಣ ಹೋಗುವುದು ನಿಲ್ಲಿ ಸಿದ್ದಾರೆ. ಇದರಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಬಿಜಿ ರಾಮ್ ಜಿ ಯೋಜನೆ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ. ಗ್ರಾಪಂ ಮಟ್ಟದಲ್ಲೂ ಪಾದಯಾತ್ರೆ ನಡೆಸಿ ಕಾಂಗ್ರೆಸ್ ನಯವಂಚನೆ ಜನರಿಗೆ ತಿಳಿಸಬೇಕಿದೆ.