ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾಂ, ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದು ರ್ಗ,ವಿಜಯಪುರ, ಬಾಗಲಕೋಟೆ, ಕೂಡ್ಲಿಗಿ, ಹೊಸಪೇಟೆ, ಕಲಬುರುಗಿ, ಬೀದರ್, ಯಾದಗಿರಿ, ಕೊಪ್ಪಳ ಮತಿತರ ಕಡೆಗಳಿಂದ ಹೊರಡಲಿರುವ ಬೈಕ್ ರ‍್ಯಾಲಿಗೆ ಬೀದರ್‌ನ ಬಸವ ಕಲ್ಯಾಣದಲ್ಲಿ ಫೆ.೧೯ರಂದು ಚಾಲನೆ ಸಿಗಲಿದೆ. ರ‍್ಯಾಲಿ ೨೩ರಂದು ಬೆಂಗ ಳೂರಿನ ಸ್ವಾತಂತ್ರ‍್ಯ ಉದ್ಯಾನ ತಲುಪಲಿದೆ. ಅಂದು ಒಂದು ಸಾವಿರ ಬೈಕ್‌ಗಳು ಬೆಂಗಳೂರು ಸೇರಲಿವೆ ಎಂದು ತಿಳಿಸಿದರು.