ಕಾಂಗ್ರೆಸ್ ಮುಕ್ತ ಭಾರತಕ್ಕೆ ಬಿಹಾರ ಫಲಿತಾಂಶ ಮುನ್ನುಡಿ

ಹನುಮಂತೇಗೌಡ
ಹನುಮಂತೇಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ
  • BJP
  • ಚುನಾವಣಾ ಆಯೋಗ
ಚಿತ್ರದುರ್ಗ: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಮುಕ್ತ ಭಾರತಕ್ಕೆ ಮುನ್ನುಡಿ ಬರೆದಿದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಹನುಮಂತೇಗೌಡ ಹೇಳಿದ್ದಾರೆ. ಬಿಹಾರ ಜನತೆ ಪ್ರಧಾನಿ ನರೇಂದ್ರ ಮೋದಿ,ಮುಖ್ಯಮಂತ್ರಿ ನಿತೇಶ್‌ಕುಮಾರ್ ಅವರಿಗೆ ವ್ಯಾಪಕ ಬೆಂಬಲ ಸೂಚಿಸಿದ್ದಾರೆ.
ಅಲ್ಲಿ ಬಿಜೆಪಿ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವುದು ಸಂತಸದ ವಿಷಯ. ಮಹಾಘಟ ಬಂಧನ್‌ಗೆ ಅಲ್ಲಿಯ ಜನರು ತಕ್ಕ ಪಾಠ ಕಲಿಸಿದ್ದಾರೆ, ಜಂಗಲ್‌ರಾಜ್ ಆಡಳಿತವನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಎರಂಡಕ್ಕಿ ದಾಟದೇ ಇರುವುದು ಕಾಂಗ್ರೆಸ್ ಮುಕ್ತ ಭಾರತ ದ ಮುನ್ಸೂಚನೆ ಆಗಿದೆ.ರಾಷ್ಟಿçÃಯ ಚುನಾವಣಾ ಆಯೋದ ವಿರುದ್ಧ ಆರೋಪಿಸುವ ಬದಲು ಕಾಂಗ್ರೆಸ್ ನಾಯಕರು ಈಗಲಾದ ರೂ ಆತ್ಮಾವಲೋಕನ ಮಾಡಿಕೊಳ್ಳಲಿ.ಬಿಹಾರದ ಗೆಲುವು ಪ್ರಜಾಪ್ರಭುತ್ವಕ್ಕೆ ಸಂದ ಜಯವೆಂದು ಹನುಮಂತೇಗೌಡ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net