ಚಿತ್ರದುರ್ಗ: ಜಿ¯್ಲÉಯ ಜನರ ಜೀವನಾಡಿ ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಭಾಗದ ಕಾಮಗಾರಿಗಳನ್ನು ಶೀಘ್ರ ಪೂರ್ಣ ಗೊಳಿಸಿ ಕಾಲುವೆ ಮೂಲಕ ನೀರು ಹರಿಸಲಾಗುವುದು ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಭರವಸೆ ನೀಡಿದರು.
ಕುಂಚಿಗನಾಳ್ ಸಮೀಪದ ಹಳೆಯ ರಾಷ್ಟಿçÃಯ ಹೆz್ದÁರಿ-೪ರ ಬಳಿ ಹಾದು ಹೋಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಶುಕ್ರವಾರ ಅಽಕಾರಿಗಳೊಂದಿಗೆ ವೀಕ್ಷಿಸಿ ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆ ಕುರಿತು ನಮ್ಮ ಸರ್ಕಾರಕ್ಕೆ ಕಾಳಜಿ ಇದೆ. ಹೀಗಾಗಿ ತ್ವರಿತವಾಗಿ ಪೂರ್ಣಗೊಳಿಸಲು ಅಽಕಾರಿ ಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಕಾಮಗಾರಿಗೆ ವೇಗ ನೀಡುವಂತೆ ಸೂಚಿಸಲಾಗಿದೆ ಎಂದರು.
ಯೋಜನೆಯಿAದ ಜಿ¯್ಲÉಯ ರೈತ ಸಮೂಹಕ್ಕೂ ಅನುಕೂಲ ಮಾಡಿಕೊಡಲಾಗುವುದು. ಈಗಾಗಲೇ ೪೭ ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ (ಡ್ರಿಪ್ಪಿಂಗ್) ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ೧೯ ಕೆರೆಗಳಿಗೆ ನೀರುಣಿಸಲು ಸರ್ಕಾರದಿಂದ ಅನು ಮೋದನೆ ಸಿಕ್ಕಿದೆ. ಇದರೊಟ್ಟಿಗೆ ಇನ್ನೂ ೮ ಕೆರೆಗಳನ್ನು ಸೇರಿಸಲು ಸಿಎಂ, ಡಿಸಿಎಂಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಚಿತ್ರದುರ್ಗ ತಾಲೂಕಿನ ಮಠದ ಕುರುಬರಹಟ್ಟಿ, ಕಾಟೀಹಳ್ಳಿ, ಸಿದ್ಧಾಪುರ, ಮಾನಂಗಿ, ಹುಲ್ಲೂರು, ತಿಮ್ಮಣ್ಣನಾಯಕನ ಕೆರೆ, ನಂ ದೀಪುರ, ಅನ್ನೇಹಾಳ್ ಗ್ರಾಮಗಳ ಕೆರೆಗಳಿಗೆ ಭದ್ರಾ ನೀರು ತುಂಬಿಸುವ ಕಾರ್ಯಕ್ಕೆ ಈಗಾಗಲೇ ಸರ್ಕಾರ ಅನುಮೋದಿಸಿದೆ. ಯೋಜನೆಯಡಿ ಸಾರ್ವಜನಿಕ ನಳಗಳ ಮೂಲಕ ಕುಡಿವ ನೀರು ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಈ ನಿಟ್ಟಿನಲ್ಲಿ ಅಽಕಾರಿಗಳ ಜವಾಬ್ದಾರಿ ಹೆಚ್ಚಿದೆ. ಮಾಡುವ ಕೆಲಸದಲ್ಲಿ ಪ್ರಾ ಮಾಣಿಕತೆಯಿದ್ದರೆ ಕಾಮಗಾರಿಗಳು ಶಾಶ್ವತವಾಗಿ ಉಳಿಯಲಿವೆ. ಯಾವುದೇ ಲೋಪವಾಗದಂತೆ ಎಚ್ಚರವಹಿಸಬೇಕು ಎಂದು ಜತೆಯಲ್ಲಿದ್ದ ಅಽಕಾರಿಗಳಿಗೆ ತಾಕೀತು ಮಾಡಿದರು.
ಇದೇ ವೇಳೆ ಯೋಜನಾ ವ್ಯಾಪ್ತಿಯ ದೊಡ್ಡಸಿದ್ದವ್ವನಹಳ್ಳಿ, ಮದಕರಿಪುರ, ಗೋನೂರು, ದಂಡಿನ ಕುರುಬರಹಟ್ಟಿ, ಬೊಮ್ಮನಹಳ್ಳಿ, ಸಾಸಲಹಟ್ಟಿ, ಮುತ್ತಯ್ಯನಹಟ್ಟಿ, ಕಲ್ಲೇನಹಳ್ಳಿ, ಬಚ್ಚಬೋರನಹಟ್ಟಿ, ಹಂಪಯ್ಯನಮಾಳಿಗೆ, ಎಚ್.ಎಂ. ಗೊಲ್ಲರಹಟ್ಟಿ ಗ್ರಾಮಗಳ ಬಳಿ ಹಾದು ಹೋಗಿರುವ ಕಾಮಗಾರಿಗಳನ್ನು ವೀಕ್ಷಿಸಿದರು.
ಅಽಕಾರಿಗಳಾದ ಹರೀಶ್, ಕಿರಣ್‌ಕುಮಾರ್, ಶ್ರೀಧರ್ ನಾಯಕ್, ಗಂಗೇಶ್, ಹರೀಶ್, ಸುನಿಲ್‌ಕುಮಾರ್, ಜೀವಿತಾ, ದೇವ ರಾಜ್, ಸತ್ಯನಾರಾಯಣ್, ಕೂಡಾ ಮಾಜಿ ಅಧ್ಯಕ್ಷ ಆರ್.ಕೆ. ಸರ್ದಾರ್, ರಾಜೇಶ್ ಮಧುರೆ, ರವಿ ಚಿನ್ನು ಇತರರಿದ್ದರು.