ಸರ್ಕಾರಿ ಯೋಜನೆ ಹೆಸರಿನ ವಂಚನೆ

 ಪ್ರವೀಣ್
ಪ್ರವೀಣ್
Published on

ಪ್ರಮುಖ ಮುಖ್ಯಾಂಶಗಳು

  • ಸ್ವಯಂ ಉದ್ಯೋಗ
  • ಪ್ರಧಾನ ಮಂತ್ರಿ ಮುದ್ರಾ ಯೋಜನೆ
  • ಲೀಡ್ ಬ್ಯಾಂಕ್
ಚಿತ್ರದುರ್ಗ: ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸೇರಿ ವಿವಿಧ ಜನಕಲ್ಯಾಣ ಯೋಜನೆಗಳ ಹೆಸರಲ್ಲಿ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ. ಪ್ರವೀಣ್ ತಿಳಿಸಿದ್ದಾರೆ.
ಸ್ವಯಂ ಉದ್ಯೋಗ ಆರಂಭಿಸಲು, ಸಣ್ಣ ವ್ಯಾಪಾರ ವಿಸ್ತರಣೆಗೆ ಸಾಲದ ನಿರೀಕ್ಷೆಯಲ್ಲಿ ಇರುವವರನ್ನು ಗುರಿಯಾಗಿಸಿ ಕೆಲ ಅಸಂಘ ಟಿತ ಖಾಸಗಿ -ೆÊನಾನ್ಸ್ ಸಂಸ್ಥೆಗಳು ಹಾಗೂ ಮಧ್ಯವರ್ತಿಗಳು ವಂಚಿಸುತ್ತಿರುವ ಆರೋಪಗಳಿವೆ. ೫-೧೦ ಲಕ್ಷ ರೂ. ಮುದ್ರಾ ಸಾಲ ಮಂಜೂರಾಗಿದೆ ಎಂದು ನಕಲಿ ಮಂಜೂರಾತಿ ಪತ್ರ ತೋರಿಸಿ, ಪ್ರೋಸೆಸಿಂಗ್ ಶುಲ್ಕ, ವಿಮೆ, ಅಗ್ರಿಮೆಂಟ್ ಶುಲ್ಕ ಇತ್ಯಾದಿ ಹೆಸರಲ್ಲಿ ಮುಂಗಡ ಹಣ ಪಡೆದು ಬಳಿಕ ಸಂಪರ್ಕಕ್ಕೆ ಸಿಗದೆ ವಂಚಿಸುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಸರ್ಕಾರಿ ಯೋಜನೆಯಡಿ ಶೇ.೩೫ ಸಹಾಯಧನ ಕೊಡಿಸುವುದಾಗಿ ನಂಬಿಸಿ ಕಮಿಷನ್ ಪಡೆಯುವ ಪ್ರಯತ್ನ, ಕಡಿಮೆ ಬಡ್ಡಿ ದರದಲ್ಲಿ ಸರ್ಕಾರಿ ಸಾಲ ಕೊಡಿಸುವುದಾಗಿ ಹೇಳಿ, ಬಳಿಕ ಖಾಸಗಿ ಸಂಸ್ಥೆಗಳ ಮೂಲಕ ಹೆಚ್ಚಿನ ಬಡ್ಡಿದರ ಹಾಗೂ ಅಽಕ ಸೇವಾ ಶುಲ್ಕ ವಿಽಸಿ ಸಾಲದ ಸುಳಿಗೆ ಸಿಲುಕಿಸುವ ಸಾಧ್ಯತೆಯೂ ಇದೆ.
ಸರ್ಕಾರಿ ಲೋಗೋ, ಅಽಕಾರಿಗಳ ಹೆಸರು ದುರುಪಯೋಗಪಡಿಸಿಕೊಂಡು ನಕಲಿ ವೆಬ್‌ಸೈಟ್, ಲಿಂಕ್, ಎಸ್‌ಎಂಎಸ್ ಹಾಗೂ ವಾ ಟ್ಸಾಪ್ ಸಂದೇಶಗಳ ಮೂಲಕ ಜನರನ್ನು ಸಂಪರ್ಕಿಸಲಾಗುತ್ತಿದೆ. ಬ್ಯಾಂಕ್ ಖಾತೆ ವಿವರ, ಎಟಿಎಂ ಮಾಹಿತಿ, ಒಟಿಪಿ ಸೇರಿ ದಂತೆ ವೈಯಕ್ತಿಕ ಮಾಹಿತಿ ಪಡೆದು ಹಣ ವಂಚಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸ ಬಾರದು. ಯಾ ವುದೇ ಕಾರಣಕ್ಕೂ ಒಟಿಪಿ, ಪಾಸ್‌ವರ್ಡ್ ಅಥವಾ ಬ್ಯಾಂಕ್ ಖಾತೆ ಮಾಹಿತಿ ಹಂಚಿಕೊಳ್ಳಬಾರದು ಎಂದು ಅವರು ತಿಳಿಸಿದ್ದಾರೆ.
ಖಾಸಗಿ ಪೈನಾನ್ಸ್ ಅಥವಾ ಮಧ್ಯವರ್ತಿಗಳು ಸರ್ಕಾರಿ ಯೋಜನೆ ಹೆಸರಲ್ಲಿ ವಂಚಿಸಲು ಯತ್ನಿಸಿದರೆ ಕೂಡಲೇ ರಾಷ್ಟೀಯ ಸೈಬರ್ ಅಪರಾಧ ಸಹಾಯವಾಣಿ ೧೯೩೦ಕ್ಕೆ ಮಾಹಿತಿ ನೀಡಬೇಕು. ಅಗತ್ಯವಿದ್ದಲ್ಲಿ ಪೊಲೀಸರಿಗೆ ದೂರು ನೀಡಬೇಕು. ಸರ್ಕಾ ರಿ ಯೋಜನೆಗಳ ಹೆಸ ರಿನ ಸಾಲದ ಆಮಿಷಕ್ಕೆ ಒಳಗಾಗದೆ, ಅಽಕÊತ ಮೂಲಗಳಿಂದ ಮಾಹಿತಿ ಪಡೆದು ವ್ಯವಹರಿಸಬೇಕು. ಜಾಗÊತಿಯೇ ಹಣಕಾಸಿನ ಸು ರಕ್ಷತೆಗೆ ಅತಿ ದೊಡ್ಡ ಅಸ್ತçವೆಂದು ಪ್ರವೀಣ್ ತಿಳಿಸಿದ್ದಾರೆ.
ನೇರ ಸಾಲ ವಿತರಣೆ ಇಲ್ಲ

ಮುದ್ರಾ ಸಂಸ್ಥೆ ನೇರವಾಗಿ ಸಾಲ ವಿತರಿಸುವುದಿಲ್ಲ. ಅರ್ಹ ಸಾಲಗಾರರಿಗೆ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಅರ್ಹ ಎನ್‌ಬಿಎ-ï‌ಸಿಗಳು, ನೋಂದಾಯಿತ ಮೈಕ್ರೋ-ÉÊನಾನ್ಸ್ ಸಂಸ್ಥೆಗಳ ಮೂಲಕ ಮುದ್ರಾ ಸಾಲ ಸೌಲಭ್ಯ ದೊರೆಯುತ್ತದೆ.
ಸಾಲ ಮಂಜೂರಾತಿಗಾಗಿ ಅಪರಿಚಿತ ವ್ಯಕ್ತಿ ಅಥವಾ ಮಧ್ಯವರ್ತಿಗೆ ಮುಂಗಡ ಹಣ ನೀಡುವ ಮುನ್ನ ಸಂಸ್ಥೆ ಅಽಕÊತತೆ ಹಾಗೂ ಸಾಲದ ವಿವರ ಪರಿಶೀಲಿ ಸಬೇಕು.
ಸಾಲ ಪಡೆಯುವ ಆಸಕ್ತರು ಸಮೀಪದ ಬ್ಯಾಂಕ್ ಶಾಖೆಗೆ ನೇರವಾಗಿ ಭೇಟಿ ನೀಡಿ ಮಾಹಿತಿ ಪಡೆಯಬೇಕು. ಮುದ್ರಾ ಮತ್ತು ಇತರ ಸರ್ಕಾರಿ ಸಾಲಗಳಿಗಾಗಿ ಅಽಕÊತ ಪೋರ್ಟಲ್ ಡಿಡಿಡಿ.ಞ್ಠb್ಟZ.ಟ್ಟಜ.ಜ್ಞಿ ಅಥವಾ ್ಠbqsZಞಜಿಞಜಿಠ್ಟಿZ.ಜ್ಞಿ ಮೂಲಕ ಅರ್ಜಿ ಸಲ್ಲಿಸ ಬೇಕು ಎಂದು ಪ್ರವೀಣ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net