ಜನನ-ಮರಣದ ನಡುವೆ ಒಳ್ಳೆಯ ಕೆಲಸಗಳೇ ಶಾಶ್ವತ

ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ದಿ. ಕೆ.ಆರ್. ಶಿವಪ್ರಕಾಶ್ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಎಂ. ಕಾರಜೋಳ, ಎಚ್. ಏಕಾಂತಯ್ಯ, ಸೊಗಡು ಶಿವಣ್ಣ, ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಮನೋಹರ ಮಸ್ಕಿ, ಕೆ.ಎಸ್.ನವೀನ್ ಇದ್ದರು. ನಾನಾ ಪೂಜ್ಯ ಮಠಾಽÃಶರು ಸಾನ್ನಿಧ್ಯ ವಹಿಸಿದ್ದರು.
ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ದಿ. ಕೆ.ಆರ್. ಶಿವಪ್ರಕಾಶ್ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಎಂ. ಕಾರಜೋಳ, ಎಚ್. ಏಕಾಂತಯ್ಯ, ಸೊಗಡು ಶಿವಣ್ಣ, ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಮನೋಹರ ಮಸ್ಕಿ, ಕೆ.ಎಸ್.ನವೀನ್ ಇದ್ದರು. ನಾನಾ ಪೂಜ್ಯ ಮಠಾಽÃಶರು ಸಾನ್ನಿಧ್ಯ ವಹಿಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಗೋವಿಂದ ಎಂ. ಕಾರಜೋಳ ಅಭಿಮತ
  • ದಿ.ಕೆ.ಆರ್. ಶಿವಪ್ರಕಾಶ್ ಸ್ಮರಣೆ ಕಾರ್ಯಕ್ರಮ
  • ಬಸವ ತತ್ವಗಳ ಪರಿಣಾಮಕಾರಿ ಅನುಷ್ಠಾನ
ಚಿತ್ರದುರ್ಗ: ಉತ್ತಮ ಕೆಲಸಗಳ ಮೂಲಕ ಬದುಕಿನಲ್ಲಿ ನಮ್ಮ ಹೆಜ್ಜೆ ಗುರುತುಗಳನ್ನು ಶಾಶ್ವತವಾಗಿ ಉಳಿಸಬೇಕಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ವೀರಶೈವ ಸಮಾಜದ ಮಾಜಿ ಅಧ್ಯಕ್ಷ, ದಿ ವಂಗತ ಕೆ.ಆರ್. ಶಿವಪ್ರಕಾಶ್ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು, ಹುಟ್ಟಿದ ಮೇಲೆ ಸಾವು ನಿಶ್ಚಿತ,
ಹುಟ್ಟು-ಸಾವಿನ ನಡುವೆ ಒಳ್ಳೆಯ ಕೆಲಸಗಳನ್ನು ಮಾಡಿದರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗಲಿದೆ. ಅಂಥವರಲ್ಲಿ ಶಿವಪ್ರಕಾಶ್ ಒಬ್ಬರು, ಬಸವ ತತ್ವಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಮಾಜ ಮುಂದಾಗಬೇಕಿದೆ ಎಂದು ಗೋ ವಿಂದ ಕಾರಜೋಳ ಅಭಿಪ್ರಾಯಪಟ್ಟರು.
ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನAದ ಸ್ವಾಮೀಜಿ ಮಾತನಾಡಿ, ತಂದೆಯವರ ಸಾಮಾಜಿಕ ಚಟುವಟಿಕೆಗಳನ್ನು ಅವರ ಪುತ್ರ ನವೀನ್ ಮುಂದುವರಿಸಬೇಕು ಎಂದು ಆಶಿಸಿದರು. ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಶಿವಪ್ರಕಾಶ್ ಅವರು ಮುರುಘಾ ಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಚ್. ಏಕಾಂತಯ್ಯ ಮಾತನಾಡಿ, ನುಡಿದಂತೆ ನಡೆಯುವ ದಾರಿ ನಮ್ಮದಾದರೆ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಪತ್ರಕರ್ತರಾದ ಜಿ.ಎಸ್. ಉಜ್ಜನಪ್ಪ ಮಾತನಾಡಿದರು. ಶ್ರೀ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂಚಿಟಿಗ ಮಠದ ಡಾ. ಶಾಂತವೀರ ಸ್ವಾಮೀಜಿ, ಭೋವಿಗುರು ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಹರಿಹರ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ.
ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಕೇತೇಶ್ವರ ಗುರುಪೀಠದ ಶ್ರೀ ಬಸವ ಇಮ್ಮಡಿ ಕೇತೇಶ್ವರ ಸ್ವಾಮೀಜಿ ಸೇರಿ ನಾನಾ ಮಠಾಽÃಶರು ಸಾನ್ನಿಧ್ಯ ವಹಿಸಿದ್ದರು.
ಮಾಜಿ ಸಚಿವ ಸೊಗಡು ಶಿವಣ್ಣ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಸಹಕಾರಿ ಧುರೀಣ ಮನೋಹರ ಮಸ್ಕಿ, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಶಿವಪ್ರಕಾಶ್ ಅವರ ಪುತ್ರ ಎಂಎಲ್‌ಸಿ ಕೆ.ಎಸ್. ನವೀನ್ ಹಾಗೂ ಕುಟುಂಬ ವರ್ಗದವರು, ನಾನಾ ಗಣ್ಯರು ಉಪಸ್ಥಿತರಿದ್ದರು. ತೋಟಂಪ್ಪ ಉತ್ತಂಗಿ ಹಾಗೂ ಕೋಕಿಲ ಪ್ರಾರ್ಥಿಸಿದರು. ನವೀನ್‌ ಮಸ್ಕಲ್ ನಿರೂಪಿಸಿದರು.
ಸರಳ, ಸಜ್ಜನಿಕೆಯ ವ್ಯಕ್ತಿತ್ವ
ಶಿವಪ್ರಕಾಶ್ ಸರಳ, ಸಜ್ಜನ ವ್ಯಕ್ತಿತ್ವದವರಾಗಿದ್ದವರು. ಯಾರಿಗೂ ಕೆಟ್ಟದನ್ನು ಬಯಸಿರಲಿಲ್ಲ ಎಂದು ಶ್ರೀ ಬಸವಮೂರ್ತಿ ಮಾದಾ ರ ಚನ್ನಯ್ಯ ಸ್ವಾಮೀಜಿ ಹೇಳಿದರು. ಅವರ ಪುತ್ರ ನವೀನ್ ಎಂಎಲ್‌ಸಿ ಆಗಿದ್ದರೂ ಎಂದಿಗೂ ತಮ್ಮ ಅಽಕಾರ ದುರ್ಬಳಕೆ ಮಾಡಿ ಕೊಳ್ಳದೆ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಶ್ರೀಗಳು ಹೇಳಿದರು.
ಉತ್ತಮ ಮೌಲ್ಯಗಳು
ಶಿವಪ್ರಕಾಶ್ ಅವರು ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಿದ್ದಾರೆ ಎಂದು ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು. ಅವರ ಈ ಮೌಲ್ಯಗಳನ್ನು ಮುನ್ನಡೆಸುವ ಹೊಣೆ ಅವರ ಕುಟುಂಬ ವರ್ಗದವರ ಮೇಲಿದೆ ಎಂದು ಶ್ರೀಗಳು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net