ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳೊAದಿಗೆ ಉತ್ತೀರ್ಣರಾದ ಕುಂಚಿಗ ವೀರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳನ್ನು ಚಿತ್ರದುರ್ಗದಲ್ಲಿ ಶನಿವಾರ ಪುರಸ್ಕರಿಸಲಾಯಿತು. ಬಿ.ಸಿ. ಶಾಂತರಾಜ್, ಎಲ್.ಬಿ. ರಾಜಶೇಖರಪ್ಪ, ಎಚ್. ಕುಬೇರಪ್ಪ ದಗ್ಗೆ, ಕೆ.ಎಚ್. ಮುರುಗೇಶಗೌಡ್ರು, ನಿವೃತ್ತ ಡಿವೈಎಸ್ಪಿ ಎಸ್. ಬಸವರಾಜಪ್ಪ, ಯು.ಪಾರ್ವತಮ್ಮ, ಎನ್.ಎಸ್. ಲವಕುಮಾರ್, ಆಡನೂರುಸ್ವಾಮಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಿವೃತ್ತ ಪ್ರಾಚಾರ್ಯ ಬಿ.ಸಿ. ಶಾಂತರಾಜ್ ಅನಿಸಿಕೆ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಕೃಷಿಯ ಮಹತ್ವ ಅರಿತುಕೊಳ್ಳಬೇಕು
ಚಿತ್ರದುರ್ಗ:
ತಮ್ಮ ಪ್ರತಿಭೆ, ಸಾಧನೆಯ ಹಿಂದೆ ತಂದೆ, ತಾಯಿ, ಗುರುಹಿರಿಯರ ಪರಿಶ್ರಮ ಇದೆ ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದು ನಿವೃತ್ತ ಪ್ರಾಚಾರ್ಯ ಬಿ.ಸಿ. ಶಾಂತರಾಜ್ ಹೇಳಿದರು.
ಕುಂಚಿಗ ವೀರಶೈವ ಲಿಂಗಾಯತ ಸಮಾಜ ಹಾಗೂ ಉತ್ಥಾನ ಟ್ರಸ್ಟ್ ಶ್ರೀ ನೀಲಕಂಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳೊAದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶನಿವಾರ ಆ ಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯೆ ಎನ್ನುವುದು ತಪಸ್ಸಿದ್ದಂತೆ. ಕಷ್ಟಪಟ್ಟು ಓದಿದರೆ ಬದುಕು ಸುಖವಾಗಿರುತ್ತದೆ. ವಿದ್ಯೆಗಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಶಿಕ್ಷಣದ ಜತೆ ಕೃಷಿಯ ಮಹತ್ವ ಅರಿತುಕೊಳ್ಳಬೇಕು. ಪದವಿ ಪಡೆದ ತಕ್ಷಣ ಕೃಷಿಗೂ ನಮಗೂ ಸಂಬAಧವಿಲ್ಲ ಎಂಬAತೆ ಇ ರುವುದು ಸರಿಯಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದರಿಂದ ಮತ್ತೊಬ್ಬರಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಸಮಯ ಅಮೂಲ್ಯ. ಮೊಬೈಲ್‌ನಲ್ಲಿ ಕಾಲ ಹರಣ ಮಾಡದೆ ಓದಿನ ಕಡೆ ಗಮನ ಕೊಡಬೇಕು. ದುಶ್ಚಟಗಳಿಂದ ದೂರವಿದ್ದು, ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ನಿರುದ್ಯೋಗ ಎಲ್ಲ ಕಾಲದಲ್ಲೂ ಇದೆ. ಸರ್ಕಾರಿ ನೌಕರಿ ನೆಚ್ಚಿ ಕೂರದೆ ಸ್ವಂತ ಉದ್ದಿಮೆ ಮೂಲಕ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಂಚಿಗ ವೀರಶೈವ ಲಿಂಗಾಯತ ಸಮಾಜದ ನಿರ್ದೇಶಕ ಎಲ್.ಬಿ. ರಾಜಶೇಖರಪ್ಪ ಮಾತನಾಡಿ, ಕಳೆದ ೧೫ ವರ್ಷಗಳಿಂದಲೂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಎಷ್ಟೇ ಸಮಸ್ಯೆಗಳಿದ್ದರೂ ಮಕ್ಕಳಿಗೆ ವಿದ್ಯೆ ನೀಡಬೇಕು ಎಂದು ತಿಳಿಸಿದರು.
ಸಮುದಾಯದ ಕಾರ್ಯದರ್ಶಿ ಎಚ್. ಕುಬೇರಪ್ಪ ದಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಕೆ.ಎಚ್. ಮುರುಗೇಶ ಗೌಡ್ರು, ನಿವೃತ್ತ ಡಿವೈಎಸ್ಪಿ ಎಸ್. ಬಸವರಾಜಪ್ಪ, ಯು.ಪಾರ್ವತಮ್ಮ, ಎನ್.ಎಸ್. ಲವಕುಮಾರ್, ಆಡನೂರುಸ್ವಾಮಿ, ದಗ್ಗೆಶಿವಪ್ರಕಾಶ್ ಮತ್ತಿತರರು ಇದ್ದರು.