ಯಶಸ್ವಿ ಉದ್ಯಮಿಯಾಗಲು ಬೇಕು ದೂರದೃಷ್ಟಿ, ಪ್ರಯತ್ನ

ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ಉದ್ಯಮಶೀಲತೆ ಮತ್ತು ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕ, ಯುವತಿಯರು ಹಾಗೂ ರೈತರು.
ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ಉದ್ಯಮಶೀಲತೆ ಮತ್ತು ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕ, ಯುವತಿಯರು ಹಾಗೂ ರೈತರು.
Published on

ಪ್ರಮುಖ ಮುಖ್ಯಾಂಶಗಳು

  • ಐಐಎಸ್ಸಿ ಮುಖ್ಯಸ್ಥ ಪ್ರೊ. ಸುಬ್ಬಾರೆಡ್ಡಿ ಹೇಳಿಕೆ
  • ಕೌಶಾಲಾಭಿವೃದ್ಧಿ ಜಾಗೃತಿ ಕಾರ್ಯಕ್ರಮ
ನಾಯಕನಹಟ್ಟಿ:ನಿರಂತರ ಪ್ರಯತ್ನ, ದೂರದೃಷ್ಟಿಯ ಕನಸುಗಳಿದ್ದರೆ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ಕುದಾಪುರದ ಐಐಎಸ್ಸಿ ಮುಖ್ಯಸ್ಥ ಪ್ರೊ. ಸುಬ್ಬಾರೆಡ್ಡಿ ಹೇಳಿದರು.
ಸಮೀಪದ ಕುದಾಪುರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಗುರುವಾರ ಆಯೋಜಿಸಿದ್ದ ವಿವಿಧ ಜಿಲ್ಲೆಗಳ ಎಸ್‌ಸಿ, ಎಸ್‌ಟಿ ರೈತರು, ಯುವಕ, ಯುವತಿಯರಿಗೆ ಉದ್ಯಮಶೀಲತೆ ಮತ್ತು ಕೌಶಾಲಾಭಿವೃದ್ಧಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯೋಗ ಸಿಕ್ಕಿಲ್ಲವೆಂದು ಪರಿತಪಿಸುವುದಕ್ಕಿಂತ ಸ್ವಂತ ಉದ್ಯಮ ಯಾಕೆ ಆರಂಭಿಸಬಾರದು ಎನ್ನುವ ಆಲೋಚನೆ ಯುವಕರಲ್ಲಿ ಬರಬೇಕು. ಉದ್ಯಮ ಆರಂಭಿಸಲು ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಉದ್ಯಮ ಆರಂಭಿಸಲು ಒಳ್ಳೆಯ ಕಲ್ಪನೆಗಳಿದ್ದರೆ ಸಾಲದು. ಅದನ್ನು ಯಾವ ರೀತಿಯಲ್ಲಿ ತಾಂತ್ರಿಕತೆ ಉಪಯೋಗಿಸಿ ಯಶಸ್ವಿಯಾಗಬೇಕು ಎಂಬುದು ಮುಖ್ಯವಾಗುತ್ತದೆ ಎಂದರು.
ಡಾ.ತುಳಸಿ ಮಾತನಾಡಿ, ಸ್ಥಳೀಯ ಸಮಸ್ಯೆಗಳಿಗೆ ಪುಸ್ತಕ ಓದುವುದರಿಂದ ಪರಿಹಾರ ಸಿಗುವುದಿಲ್ಲ. ವೈಜ್ಞಾನಿಕವಾಗಿ ಆಲೋಚಿಸಿ ಪರಿಣಿತರಿಂದ ಸಲಹೆ ಪಡೆದುಕೊಳ್ಳಬೇಕು. ಯಾವುದೇ ವೃತ್ತಿಯಲ್ಲಿ ತಾಂತ್ರಿಕ ಸಮಸ್ಯೆಗಳಿದ್ದರೆ ಪರಿಣಿತರಿಂದ ಪರಿಹಾರೋಪಾಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ದಾವಣಗೆರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ದೇವರಾಜ್ ಮಾತನಾಡಿ, ತರಬೇತಿಯಲ್ಲಿ ಪಡೆದ ಜ್ಞಾನ ಸರಿಯಾದ ರೀತಿಯಲ್ಲಿ ಉಪಯೋಗವಾಗಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಎಸ್‌ಐಡಿ ಶಾಖೆ ಮುಖ್ಯಸ್ಥ ಡಾ. ಅಮಿತಾವ ಪ್ರಮಾಣಿಕ್, ಮುರುಳಿ, ಪ್ರೊ. ರಾಘವೇಂದ್ರ, ಹೇಮಂತ್, ಗಣೇಶ್ ತೋಳಾರ್, ಪ್ರಸನ್ನ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net