ಕೌಶಲ ತರಬೇತಿಯೊಂದಿಗೆ ಸ್ವಾವಲಂಬಿಗಳಾಗಿ

ಚಿತ್ರದುರ್ಗದಲ್ಲಿ ಮಂಗಳವಾರ ಯುವನಿಽ -Àಲಾನುಭವಿಗಳಿಗೆ ಏರ್ಪಡಿಸಿದ್ದ ಕೌಶಲ ತರಬೇತಿ,ಅರಿವು ಕಾರ್ಯಕ್ರಮದಲ್ಲಿ ಆರ್. ಶಿವಣ್ಣ ಗಂಜಿಕಟ್ಟೆ, ಸಣ್ಣಕ್ಕಿ ಮಾರುತಿ, ತೋಟಪ್ಪ, ರವೀಂದ್ರ, ಸುಹಾಸ್, ವೇಮಣ್ಣ, ರವಿಕಾಂತ್, ತಿಪ್ಪೇಸ್ವಾಮಿ, ಸರಸ್ವತಿ, ಶ್ರೀಹರಿ, ಸತೀಶ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಯುವನಿಽ -Àಲಾನುಭವಿಗಳಿಗೆ ಏರ್ಪಡಿಸಿದ್ದ ಕೌಶಲ ತರಬೇತಿ,ಅರಿವು ಕಾರ್ಯಕ್ರಮದಲ್ಲಿ ಆರ್. ಶಿವಣ್ಣ ಗಂಜಿಕಟ್ಟೆ, ಸಣ್ಣಕ್ಕಿ ಮಾರುತಿ, ತೋಟಪ್ಪ, ರವೀಂದ್ರ, ಸುಹಾಸ್, ವೇಮಣ್ಣ, ರವಿಕಾಂತ್, ತಿಪ್ಪೇಸ್ವಾಮಿ, ಸರಸ್ವತಿ, ಶ್ರೀಹರಿ, ಸತೀಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವ ನಿಽ ಫಲಾನುಭವಿಗಳಿಗೆ ಕೌಶಲ ತರಬೇತಿ
  • ಪದವೀಧರರಿಗೆ ಸಲಹೆ
  • ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರ
ಚಿತ್ರದುರ್ಗ: ನಿರುದ್ಯೋಗ ಭತ್ಯೆ ತಮ್ಮ ಗುರಿಯಾಗಿರದೆ, ಅಗತ್ಯ ಕೌಶಲ ತರಬೇತಿಯೊಂದಿಗೆ ಉದ್ಯೋಗ ಪಡೆದು ಸ್ವಾವಲಂಬಿ ಗಳಾಗಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಶಿವಣ್ಣ ಗಂಜಿಗಟ್ಟೆ ಯುವ ಜನರಿಗೆ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವ ನೋಪಾಯ ಇಲಾಖೆ ನಗರದ ಸರ್ಕಾರಿ ವಿಜ್ಞಾನ ಕಾಲೇಜಲ್ಲಿ ಮಂಗಳವಾರ ಆಯೋಜಿಸಿದ್ದ ಯುವನಿಽ -Àಲಾನುಭವಿಗಳಿಗೆ ಕೌಶಲ ತರಬೇತಿ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪದವಿ, ಡಿಪ್ಲೊಮಾ ಶಿಕ್ಷಣದೊಂದಿಗೆ ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ಯುವ ಜನರಿಗೆ, ಆರ್ಥಿಕ ಮತ್ತು ಮಾನಸಿಕ ಸ್ಥೆÊರ್ಯ ತುಂಬಲು ಯುವನಿಽ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ. ಶಿಕ್ಷಣ ಪೂರ್ಣಗೊಳಿಸಿದ ಪದವೀಧರರಿಗೆ ಮಾಸಿಕ ೩೦೦೦ ರೂ.,ಡಿಪ್ಲೊಮಾ ಪದವೀಧರರಿಗೆ ೧೫೦೦ ರೂ.ಭತ್ಯೆ ಮೂಲಕ ಸರ್ಕಾರ ಅವರ ಬೆನ್ನಿಗೆ ನಿಂತಿದೆ. ಭತ್ಯೆ ಕೊಡುವುದು ಸರ್ಕಾರದ ಉದ್ದೇಶವಲ್ಲ.
ಅಭ್ಯರ್ಥಿಗಳು ತಮ್ಮ ಕೌಶಲ ಹೆಚ್ಚಿಸಿಕೊಂಡು ಉದ್ಯೋಗ ಪಡೆಯಬೇಕೆಂಬುದು ಯೋಜನೆ ಆಶಯವಾಗಿದೆ. ಬ್ಯಾಂಕ್‌ಗಳು ಮತ್ತು ತರಬೇತಿ ಸಂಸ್ಥೆಗಳ ಮೂಲಕ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಕೌಶಲಾಭಿವೃದ್ಧಿ ಅಽಕಾರಿ ಸಣ್ಣಕ್ಕಿ ಮಾರುತಿ ಮಾತನಾಡಿ, ಜಿಲ್ಲೆಯುವಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಜಿಟಿಟಿಸಿ ಹಾಗೂ ಐಟಿಐ ನಂತಹ ಸಂಸ್ಥೆಗಳ ಮೂಲಕ ಉಚಿತ ತರಬೇತಿ ನೀಡಿ ಶೇ.೭೦ ಉದ್ಯೋಗಾವಕಾಶ ಕೊಡಿಸುವ ಗುರಿ ಸರ್ಕಾರ ಮುಂದಿದೆ ಎಂದರು.
ರುಡ್‌ಸೆಟ್ ಸಂಸ್ಥೆ ಉಪನ್ಯಾಸಕ ತೋಟಪ್ಪ ಮಾತನಾಡಿ,ಉತ್ಪಾದನಾ ವಲಯದಲ್ಲಿ ಆಧುನಿಕ ಆಟೊಮೇಷನ್ ತಂತ್ರಜ್ಞಾ ನದ ಕುರಿತು ತಿಂಗಳಿAದ ೧ವರ್ಷ ಅವಽ ತರಬೇತಿ ಲಭ್ಯವಿದೆ. ವಿಶೇಷವಾಗಿ ಎಸ್‌ಸಿ,ಎಸ್‌ಟಿ ಮತ್ತು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ತರಬೇತಿ ಪಡೆದವರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಕ್ಕೆ ನೆರವು ನೀಡಲಾಗುತ್ತಿದೆ ಎಂದರು.
ಉದ್ಯೋಗಾಽಕಾರಿ ರವೀಂದ್ರ, ಚಿತ್ರದುರ್ಗ ಜಿಟಿಟಿಸಿ ಪ್ರಾಚಾರ್ಯ ಸುಹಾಸ್, ಸಹಾಯಕ ಸಾಂಖ್ಯಿಕ ಅಽಕಾರಿ ವೇಮಣ್ಣ, ಸ ರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಂಶುಪಾಲ ರವಿಕಾಂತ್,ಕೆನರಾ ಬ್ಯಾಂಕ್ ಹಣಕಾಸು ಮತ್ತು ಸಾಕ್ಷರತೆ ಸಮಾಲೋಚಕ ತಿಪ್ಪೇಸ್ವಾಮಿ, ಡಿಪ್ಲೊಮಾ ಕಾ ಲೇಜು ಪ್ಲೇಸ್‌ಮೆಂಟ್ ಅಽಕಾರಿ ಸರಸ್ವತಿ, ಯುವನಿಽ ಸಂಯೋಜಕ ಶ್ರೀಹರಿ, ಐಟಿಐ ತರಬೇತಿ ಅಽಕಾರಿ ಸತೀಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net