ಚಿತ್ರದುರ್ಗದಲ್ಲಿ ಸೋಮವಾರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಡಾ. ರಂಗಸ್ವಾಮಿ, ಡಾ.ಜಿ.ಪಿ. ರೇಣುಪ್ರಸಾದ್, ಡಾ.ಎಸ್.ಪಿ. ರವೀಂದ್ರ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಽಕಾರಿಗಳಿಗೆ ಎಡಿಸಿ ತಾಕೀತು
೨೧ರಿಂದ ೪ ದಿನಗಳ ಕಾಲ ಕಾರ್ಯಕ್ರಮ
ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆ
ಚಿತ್ರದುರ್ಗ: ರಾಷ್ಟಿçÃಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಡಿ ಡಿ. ೨೧ರಿಂದ ೨೪ ರವರೆಗೆ ಜಿಲ್ಲಾದ್ಯಂತ ಐದು ವರ್ಷ ದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶದ ೯೮,೨೭೯ ಹಾಗೂ ನಗರ ಪ್ರದೇಶದ ೨೮,೦೮೨ ಮಕ್ಕಳು ಸೇರಿ ೧,೨೬,೩೬೧ ಮಕ್ಕಳಿಗೆ ಲಸಿ ಕೆ ಹಾಕುವ ಗುರಿ ಇದೆ. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದAತೆ ಎಚ್ಚರ ವಹಿಸಬೇಕೆಂದು ಅಽಕಾರಿಗಳಿಗೆ ತಾಕೀತು ಮಾಡಿದರು.
ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇನ್ನಿತರ ಇಲಾಖೆೆಗಳ ಸಹಕಾರದೊಂದಿಗೆ ಜವಾಬ್ದಾರಿ ಯುತವಾಗಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಪೋಲಿಯೋದಿಂದ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಜಾಗÊತಿ ಮೂಡಿಸಬೇಕು. ಎಲ್ಲ ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ತಾಕೀತು ಮಾಡಿದರು.
ತಹಸೀಲ್ದಾರ್ ನೇತÊತ್ವದಲ್ಲಿ ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಹೈರಿಸ್ಕ್ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಪಲ್ಸ್ ಪೋಲಿ ಯೋ ಬೂತ್ ಸ್ಥಾಪಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸಕ್ರಿಯವಾಗಿ ಪಾಲ್ಗೊಳ್ಳ ಬೇಕು ಎಂದರು.
ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಮಾತನಾಡಿ, ಈ ಕಾರ್ಯಕ್ರಮಕ್ಕಾಗಿ ೧೦೯೧ಲಸಿಕಾ ಕೇಂದ್ರಗಳು, ೬೩ ಟ್ರಾನ್ಸಿಟ್ ಪಾ ಯಿಂಟ್ ಮತ್ತು ೧೫ ಮೊಬೈಲ್ ತಂಡಗಳ ಮೂಲಕ ಲಸಿಕೆ ಹಾಕಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ೨೩೩೮ ಲಸಿಕಾ ಕಾ ರ್ಯಕರ್ತರು, ೨೩೯ ಮೇಲ್ವಿಚಾರಕನ್ನು ನಿಯೋಜಿಸಲಾಗಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ. ಅಭಿನವ್ ಮಾತನಾಡಿ, ೨೧ರಂದು ಬೂತ್‌ಮಟ್ಟದಲ್ಲಿ ಹಾಗೂ ೨೨ರಿಂದ ೨೪ರವರೆಗೆ ಮನೆ, ಮನೆ ಭೇಟಿ ಮೂಲಕ ಲಸಿಕೆ ಹಾಕಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಕಳೆದ ೨೦೨೧ನೇ ವರ್ಷದಲ್ಲಿ ೧,೫೪,೫೭೨, ೨೦೨೨ರಲ್ಲಿ ೧,೫೬,೧೩೨, ೨೦೨೩ರಲ್ಲಿ ೧,೫೫,೭೨೯ ಹಾಗೂ ೨೦೨೪ನೇ ವರ್ಷದಲ್ಲಿ ೧,೪೨,೮೫೧ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ. ಬೂತ್‌ಮಟ್ಟದಲ್ಲೇ ಶೇ.೯೫ ಲಸಿಕೆ ಹಾಕಲಾಗುತ್ತದೆ. ನಂತರದಲ್ಲಿ ಮನೆ, ಮನೆ ಭೇಟಿ ಮೂಲಕ ಲಸಿಕೆ ಹಾಕಲಾಗುತ್ತದೆ.
ಕಾರ್ಯಕ್ರಮದ ಅಂಗವಾಗಿ ೨೦ರಂದು ಶಾಲಾ ಮಟ್ಟದಲ್ಲಿ ಜಾಥಾ ನಡೆಸಿ, ಜಾಗÊತಿ ಮೂಡಿಸಬೇಕು. ವಿವಿಧ ಇಲಾಖೆ ಮುಖ್ಯಸ್ಥರು ತಮ್ಮ ಇಲಾಖೆ ವಾಹನಗಳನ್ನು ನಿಗದಿತ ಸಮಯಕ್ಕೆ ನಿಯೋಜಿಸಬೇಕು ಎಂದರು.
ಜಿಪA ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್‌ಕುಮಾರ್, ಆರ್‌ಟಿಒ ಭರತ್ ಎಂ. ಕಾಳಿಸಿಂಗೆ, ಜಿಲ್ಲಾಸ್ಪತ್ರೆ ಡಿಎಸ್ ಡಾ.ಎಸ್.ಪಿ. ರವೀಂದ್ರ ಮತ್ತಿತರರು ಇದ್ದರು.