ಚಿತ್ರದುರ್ಗ: ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗದ ಆಮಿಷವೊಡುವ ವಂಚಕರ ಜಾಲದ ಬಗ್ಗೆ ಉದ್ಯೋಗಾಕಾಂಕ್ಷಿಗಳು ಎಚ್ಚರಿಕೆ ವಹಿಸಬೇಕು ಎಂದು ಸಿಎಂಸಿಆರ್‌ಐ ಸಂಸ್ಥೆ ನಿರ್ದೇಶಕ ಡಾ. ಯುವರಾಜ್ ತಿಳಿಸಿದ್ದಾರೆ.
ಉದ್ಯೋಗ ಕೊಡಿಸುವುದಾಗಿ ಆಕಾಂಕ್ಷಿಗಳಿAದ ಹಣ ವಸೂಲಿ ಮಾಡಿರುವ ಮಾಹಿತಿ ಗಮನಕ್ಕೆ ಬಂದಿದೆ. ವಂಚಕರ ಮಾತಿಗೆ ಮರುಳಾಗಿ ಹಣ ಕೊಟ್ಟು ಕಳೆದುಕೊಂಡರೆ ಅದಕ್ಕೆ ಸಂಸ್ಥೆ ಹೊಣೆ ಆಗುವುದಿಲ್ಲ.
ಸಾಕಷ್ಟು ಆಕಾಂಕ್ಷಿಗಳು ಜನಪ್ರತಿನಿಽಗಳ ಶಿ-Áರಸ್ಸಿನೊಂದಿಗೆ ನಿತ್ಯ ಸಂಸ್ಥೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಮಧ್ಯವರ್ತಿಗಳನ್ನೂ ಕರೆದು ಕೊಂಡು ಬರುತ್ತಿದ್ದಾರೆ. ಆದರೆ, ಸಂಸ್ಥೆಯಿAದ ಯಾವುದೇ ನೇಮಕಾತಿ ಇದ್ದರೂ ಪತ್ರಿಕೆ ಪ್ರಕಟಣೆಯೊಂದಿಗೆ ನಿಯಮಾನುಸಾರ ಮೀಸಲಾತಿ ಹಾಗೂ ಅಂಕಗಳ ಅನ್ವಯ ನೇಮಕಾತಿ ಮಾಡಿಕೊಳ್ಳಲಾಗುವುದು. ಆದ್ದರಿಂದ ಆಕಾಂಕ್ಷಿಗಳು ಯಾವುದೇ ಆಮಿಷ ಗಳಿಗೆ ಬಲಿಯಾಗಬಾರದು ಎಂದು ಯುವರಾಜ್ ಮನವಿ ಮಾಡಿದ್ದಾರೆ.
ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಶುಶ್ರೂಷಾಽಕಾರಿಗಳ ನೇಮಕ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಸಂಸ್ಥೆಯ ಹೆಸರಲ್ಲಿ ಗ್ರೂಫ್‌ಡಿ, ಲ್ಯಾಬ್ ಟೆಕ್ನೀಷಿಯನ್, ಶುಶ್ರೂಷಾಽಕಾರಿಗಳು, ವೈದ್ಯಾಽಕಾರಿಗಳು, ಬೋಧಕರು ಇತರೆ ತಂತ್ರಜ್ಞರ ಕೆಲಸ ಕೊಡಿಸುವುದಾಗಿ ಯಾರಾದರೂ ಆಮಿಷವೊಡ್ಡಿದ್ದಲ್ಲಿ ಮೋಸ ಹೋಗಬಾರದು.
ಯಾರಿಗೂ ಹಣ ನೀಡದೆ ಜಾಗರೂಕರಾಗಿರಬೇಕು. ಒಂದು ವೇಳೆ ಯಾರಾದರೂ ಕೆಲಸಕೊಡಿಸುವ ಆಮಿಷವೊಡ್ಡಿದ್ದರೆ ಗಮನಕ್ಕೆ ತರಬೇಕೆಂದು ಯುವರಾಜ್ ಪ್ರಕಟಣೆಯಲ್ಲಿ ಕೋರಿದ್ದಾರೆ.