ಚಿತ್ರದುರ್ಗ: ಕಾನೂನು, ಕಾಯ್ದೆಗಳಲ್ಲಿ ಈಚೆಗೆ ಆಗಿರುವ ಬದಲಾವಣೆ, ತಿದ್ದುಪಡಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಹಕಾರ ಸಂಘಗಳ ಅಭಿವೃದ್ಧಿಗೆ ಶ್ರಮಿಸುವಂತೆ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಆರ್.ಮಲ್ಲೇಶಪ್ಪ ಸಲಹೆ ನೀಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸಹಕಾರ ಇಲಾಖೆ, ರಾಜ್ಯ ಮಹಾಮಂಡಳ ಹಾಗೂ ಚಿತ್ರದುರ್ಗ ಜಿಲ್ಲಾ ಯೂನಿಯನ್ ಸಹ ಯೋಗದಲ್ಲಿ ಬೆಂಗಳೂರು ವಿಭಾಗದ ಪರಿಶಿಷ್ಟ ಜಾತಿ, ಪಂಗಡದ ಪದಾಽಕಾರಿಗಳು, ಆಡಳಿತ ಮಂಡಳಿ ನಿರ್ದೇಶಕರು ಮತ್ತು ಮುಖ್ಯ ಕಾರ‍್ಯನಿರ್ವಹಣಾಽಕಾರಿಗಳಿಗೆ ಗುರುವಾರ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ೭ ಜಿಲ್ಲೆಗಳ ಸಹಕಾರಿಗಳು ಸಹಕಾರ ಕಾನೂನು ತಿದ್ದುಪಡಿ, ಬದಲಾವಣೆಗಳನ್ನು ಅರಿತು ಸಂಘಗಳ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸಂಘಗಳ ಏಳಿಗೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಯೂನಿಯನ್ ನಿರ್ದೇಶಕ ಜೆ.ಶಿವಪ್ರಕಾಶ್ ಮಾತನಾಡಿ, ರಾಜ್ಯ ಸಹಕಾರ ಮಹಾಮಂಡಳ, ಶಿಕ್ಷಣ, ತರಬೇತಿ ಮತ್ತು ಪ್ರಚಾರಕ್ಕೆ ಮುಂದಡಿ ಇಟ್ಟಿದೆ. ಸಹಕಾರ ಸಂಘಗಳ ಲಾಭಾಂಶದಲ್ಲಿ ಶೇ.೨ ಸಹಕಾರ ಶಿಕ್ಷಣ ನಿಽ ಉಪಯೋಗಿಸಿಕೊಂಡು ತರಬೇತಿ ಕರ‍್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಹಕಾರಿಗಳು ತರಬೇತಿ ಪ್ರಯೋಜನ ಪಡೆದರೆ ಸಂಘಗಳ ಸಬಲತೆ, ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಬೆAಗಳೂರು ಸಹಕಾರ ಇಲಾಖೆ ನಿವೃತ್ತ ಅಪರ ನಿಬಂಧಕ ಎಚ್.ಎಸ್.ನಾಗರಾಜಯ್ಯ, ಯೂನಿಯನ್ ಸಮನ್ವಯಾಽಕಾರಿ ಎಸ್.ವಿ.ಹಿರೇಮಠ್, ಸಮಾಜ ಕಲ್ಯಾಣ ಇಲಾಖೆ ಬಿ.ಮಲ್ಲಿಕಾರ್ಜುನ, ಚಿತ್ರದುರ್ಗ ಸಹಕಾರ ಸಂಘಗಳ ಉಪನಿಬಂಧಕ ಆರ್. ಎಸ್.ದಿಲೀಪ್ ಕುಮಾರ್, ಅಧ್ಯಕ್ಷತೆ ವಹಿಸಿದ್ದ ಯೂನಿಯನ್ ನಿರ್ದೇಶಕ ಜಿ.ಇ.ಅಜ್ಜಪ್ಪ ಮಾತನಾಡಿದರು.
ಯೂನಿಯನ್ ನಿರ್ದೇಶಕರಾದ ಜಿ.ವಿ.ಗಂಗಾಧರಪ್ಪ, ಎ.ಚನ್ನಬಸಪ್ಪ, ಮಂಜಮ್ಮ ಇದ್ದರು. ಯೂನಿಯನ್ ಮುಖ್ಯಕಾರ್ಯ ನಿರ್ವಣಾಽಕಾರಿ ಜಯಶ್ರೀ ಪಿ.ಹುನಗುಂದ ನಿರೂಪಿಸಿದರು. ಜಿಲ್ಲಾ ಸಹಕಾರ ಶಿಕ್ಷಕ ನಾಗರಾಜ್ ಪಾಟೀಲ್ ಸ್ವಾಗತಿಸಿದರು. ಸಿಬ್ಬಂದಿ ಟಿ.ಎನ್.ಶ್ರೀನಿವಾಸ್ ವಂದಿಸಿದರು.