ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಭಾರತದಲ್ಲಿ ನಿರುದ್ಯೋಗಿಗಳು ಆದವರೊ, ಇಲ್ಲಾ ಮಾಡಿದವರೋ?ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಆರ್. ಚಂದ್ರಶೇಖರ್ ಉದ್ಘಾಟಿಸಿದರು. ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಪ್ರೊ.ಟಿ.ಎಚ್. ಕೃಷ್ಣಮೂರ್ತಿ, ದಿಲ್‌ಷಾದ್‌ಉನ್ನಿಸಾ, ಬಿ.ಕೆ. ಶಿವರಶ್ಮಿ, ಎಚ್‌ಎಸ್‌ಟಿ ಸ್ವಾಮಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಜ್ಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ನಿವೃತ್ತ ಶಿಕ್ಷಕರ ಒಕ್ಕೂಟ
ರೋಟರಿ ಕ್ಲಬ್ ಚಿನ್ಮೂಲಾದ್ರಿ
ಚಿತ್ರದುರ್ಗ ಸೈನ್ಸ್ -Ëಂಡೇಶನ್
ಚಿತ್ರದುರ್ಗ: ಉದ್ಯೋಗ ಒದಗಿಸುವಲ್ಲಿ ಸರ್ಕಾರಗಳು ನುಣುಚಿಕೊಳ್ಳುತ್ತಿರುವುದರಿಂದ ಸಾರ್ವಜನಿಕ ಹೂಡಿಕೆ ಕುಸಿಯುತ್ತಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಆರ್.ಚಂದ್ರಶೇಖರ್ ಹೇಳಿದರು.
ರಾಜ್ಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ನಿವೃತ್ತ ಶಿಕ್ಷಕರ ಒಕ್ಕೂಟದ ಜಿಲ್ಲಾ ಘಟಕ, ರೋಟರಿ ಕ್ಲಬ್ ಚಿನ್ಮೂಲಾದ್ರಿ ಮತ್ತು ಚಿತ್ರದುರ್ಗ ಸೈನ್ಸ್ -Ëಂಡೇಶನ್‌ನಿAದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ `ಭಾರತದಲ್ಲಿ ನಿರುದ್ಯೋಗಿಗಳು, ಆದವರೊ ಇಲ್ಲ ಮಾಡಿದವರೋ'?ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದರು.
ಸರ್ಕಾರಗಳಿಗೆ ತಾಯಿ ಗುಣ ಇರಬೇಕು, ಉದ್ಯೋಗ ಕೊಡದಿದ್ದರೆ ಹೇಗೆ? ಪ್ರಶ್ನೆ ಮಾಡುವವರನ್ನು ಕ್ರಿಮಿನಲ್‌ಗಳಂತೆ ನೋಡ ಬಾರದು. ಕೌಶಲ ಮತ್ತು ಉದ್ಯೋಗದ ನಡುವೆ ಸಂಬAಧವೇ ಇಲ್ಲದಂತಾಗಿದೆ. ಸಾಲ, ಸಬ್ಸಿಡಿ, ಕೌಶಲ ತರಬೇತಿಗಳನ್ನು ನೀಡು ವ ಸರ್ಕಾರಗಳು ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಜವಾಬ್ದಾರಿಯಿಂದ ದೂರವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಚಾರ್ಯ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ವಿಷಯ ಮಂಡಿಸಿ, ದೇಶದಲ್ಲಿರುವ ಅಸಮಾನತೆ ಪ್ರಜಾಪ್ರಭುತ್ವದ ಲಕ್ಷಣ ವಲ್ಲ. ನಿವೃತ್ತ ನೌಕರರಿಗೆ ಪಿಂಚಣಿ ಕೊಡುವುದರಲ್ಲಿ ಭಾರತ ೫೨ನೇ ಕಡೆಯ ಸ್ಥಾನದಲ್ಲಿದೆ. ನಿರುದ್ಯೋಗವಿರುವ ದೇಶದಲ್ಲಿ ಬಡ ತನ, ಅಸಮಾನತೆಯಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರೊ.ಟಿ.ಎಚ್. ಕೃಷ್ಣಮೂರ್ತಿ ಮಾತನಾಡಿ, ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಶಾಪ ವಾಗಿದೆ. ಇದಕ್ಕೆ ವ್ಯವಸ್ಥೆಯ ವೈ-Àಲ್ಯವೇ ಕಾರಣ ಎಂದರು.
ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷೆ ದಿಲ್‌ಷಾದ್ ಉನ್ನಿಸಾ, ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಬಿ.ಕೆ. ಶಿವರಶ್ಮಿ, ಚಿತ್ರದುರ್ಗ ಸೈನ್ಸ್ -Ëಂಡೇಶನ್ ಕಾರ್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ ಇದ್ದರು.