ಕ್ರೀಡಾಪಟುಗಳಿಗೆ ಉದ್ಯೋಗದ ಭರವಸೆ ಅಗತ್ಯ

 ಚಿತ್ರದುರ್ಗದ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಬುಧವಾರ ಕರ್ನಾಟಕ ಕ್ರೀಡಾ ಪ್ರಾಽಕಾರದ ಉಪಾಧ್ಯಕ್ಷ ಅರು ಣ್‌ಮಾಚಯ್ಯ ಭೇಟಿ ನೀಡಿದ್ದರು. ಸುಚೇತನಾ ನೆಲವಗಿ, ಎನ್.ಡಿ.ಕುಮಾರ್, ಮಹೀಬುಲ್ಲಾ, ನಿಶ್ಚಿತ್, ಗುರು ಇತರರು ಇದ್ದರು. -----
ಚಿತ್ರದುರ್ಗದ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಬುಧವಾರ ಕರ್ನಾಟಕ ಕ್ರೀಡಾ ಪ್ರಾಽಕಾರದ ಉಪಾಧ್ಯಕ್ಷ ಅರು ಣ್‌ಮಾಚಯ್ಯ ಭೇಟಿ ನೀಡಿದ್ದರು. ಸುಚೇತನಾ ನೆಲವಗಿ, ಎನ್.ಡಿ.ಕುಮಾರ್, ಮಹೀಬುಲ್ಲಾ, ನಿಶ್ಚಿತ್, ಗುರು ಇತರರು ಇದ್ದರು. -----
Published on

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾ ಪ್ರಾಽಕಾರದ ಉಪಾಧ್ಯಕ್ಷ ಅರುಣ್‌ಮಾಚಯ್ಯ ಅನಿಸಿಕೆ
  • ಮುಖ್ಯಮಂತ್ರಿಗೆ ಮನವಿ ಮಾಡುವ ನಿರ್ಧಾರ
  • ಉತ್ತಮ ಕ್ರೀಡಾಂಗಣ
ಚಿತ್ರದುರ್ಗ: ರಾಜ್ಯಸರ್ಕಾರ ಕ್ರೀಡಾಪಟುಗಳಿಗೆ ಉದ್ಯೋಗ ಭರವಸೆ ನೀಡಿದರೆ ಕ್ರೀಡೆಗಳಲ್ಲಿ ಭಾಗವಹಿಸಲು ಯುವ ಜನರು ಆಸಕ್ತಿ ತೋರಿಸುತ್ತಾರೆ ಎಂದು ಕರ್ನಾಟಕ ಕ್ರೀಡಾ ಪ್ರಾಽಕಾರದ ಉಪಾಧ್ಯಕ್ಷ ಅರುಣ್‌ಮಾಚಯ್ಯ ಹೇಳಿದರು.
ನಗರದ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ಕ್ರೀಡಾಪಟುಗಳ ಉದ್ಯೋಗಾವಕಾಶಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು. ಚಿತ್ರದುರ್ಗದಲ್ಲಿ ಉತ್ತಮ ಕ್ರೀಡಾಂಗಣ, ಕ್ರೀಡಾ ಶಾಲೆ ಇದೆ. ಕ್ರೀಡಾ ಶಾಲೆಯಲ್ಲಿ ೫-೭ನೇ ತರಗತಿಯವರೆಗೆ ಅವಕಾಶವಿದ್ದು, ೮ ರಿಂದ ೧೦ ನೇ ತರಗತಿಯವರೆಗೆ ವಿಸ್ತರಿಸಿ ಹಾಸ್ಟೆಲ್ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಕರ್ನಾಟಕ ಕ್ರೀಡಾ ಪ್ರಾಽಕಾರದ ಉಪಾಧ್ಯಕ್ಷನಾದ ಬಳಿಕ ಜಿಲ್ಲಾ ಪ್ರವಾಸ ಕೈಗೊಂಡು ಎಲ್ಲ ಕ್ರೀಡಾಂಗಣಗಳ ಸ್ಥಿತಿಗತಿ ಪರೀಶಿಲಿಸುತ್ತಿ ದ್ದೇನೆ. ಕ್ರೀಡಾಪಟುಗಳಿಗೆ ತರಬೇತಿದಾರರ ಕೊರತೆ ಕಂಡು ಬಂದರೆ ಅತಿಥಿ ತರಬೇತಿದಾರರನ್ನು ನೇಮಿಸಲಾಗುವುದು ಎಂದರು.
ಕ್ರೀಡಾಪಟು ಎನ್.ಡಿ.ಕುಮಾರ್ ಮಾತನಾಡಿ, ಕ್ರೀಡಾಪಟುವಿಗೆ ಉತ್ತಮ ಕ್ರೀಡಾಂಗಣ, ಕ್ರೀಡಾ ಪರಿಕರ ಹಾಗೂ ತರಬೇತುದಾರರ ಅಗತ್ಯವಿದೆ ಎಂದರು.
ಇಲಾಖೆ ಸಹಾಯಕ ನಿರ್ದೇಶಕಿ ಸುಚೇತನಾ ನೆಲವಗಿ, ಮಹೀಬುಲ್ಲಾ, ನಿಶ್ಚಿತ್, ಗುರು, ವಿನಯ್, ಗುರುರಾಜ್, ಕಲ್ಲೇಶ್, ಜಯಣ್ಣ, ಗುರುಮೂರ್ತಿ, ಅಕ್ರಮ್, ರಘು ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net