ಅಥಣಿ ಶ್ರೀಗಳು ಶಿವಯೋಗ ಸಿದ್ಧಿಯ ಸಾಧಕರು

 ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳವರ ೧೯೧ನೇ ಜಯಂತ್ಯುತ್ಸವದಲ್ಲಿ ಡಾ. ಬಸವ ಕುಮಾರ ಸ್ವಾಮೀಜಿ, ಬಸವಮಹಾಂತ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಡಾ. ಬಸವಚೇತನ ಸ್ವಾಮೀಜಿ, ಡಾ. ಪುಷ್ಪಾ ಶೆಲವಾಡಿಮಠ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳವರ ೧೯೧ನೇ ಜಯಂತ್ಯುತ್ಸವದಲ್ಲಿ ಡಾ. ಬಸವ ಕುಮಾರ ಸ್ವಾಮೀಜಿ, ಬಸವಮಹಾಂತ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಡಾ. ಬಸವಚೇತನ ಸ್ವಾಮೀಜಿ, ಡಾ. ಪುಷ್ಪಾ ಶೆಲವಾಡಿಮಠ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಪುಷ್ಪಾ ಶೆಲವಾಡಿಮಠ ಅಭಿಪ್ರಾಯ
  • ಮುರುಘಾಮಠದಲ್ಲಿ ೧೯೧ನೇ ಜಯಂತ್ಯುತ್ಸವ
  • ಮುರುಘಾಮಠ
ಚಿತ್ರದುರ್ಗ: ಕಠಿಣವಾದ ಶಿವಯೋಗವನ್ನು ೨೦ ವರ್ಷಗಳ ಕಾಲ ಅನುಷ್ಠಾನ ಮಾಡಿ ಸಾಽಸಿದವರು ಅಥಣಿ ಮುರುಘೇಂದ್ರ ಶಿವಯೋಗಿಗಳು ಎಂದು ಹಾನಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಪುಷ್ಪಾ ಶೆಲವಾಡಿಮಠ ಅಭಿಪ್ರಾಯಪಟ್ಟರು.

ಮುರುಘಾಮಠದಲ್ಲಿ ಬುಧವಾರ ಅಥಣಿ ಮುರುಘೇಂದ್ರ ಶಿವಯೋಗಿಗಳವರ ೧೯೧ನೇ ಜಯಂತ್ಯುತ್ಸವದಲ್ಲಿ ವಿಷಯಾವಲೋಕನ ಮಾಡಿದ ಅವರು, ಶಿವಯೋಗ ಕೇವಲ ಅಂತರAಗ ವಿಕಸನಕ್ಕೆ ಮಾತ್ರ ಸೀಮಿತವಲ್ಲ. ಅದು ಬಹಿರಂಗ ವಿಕಾಸಕ್ಕೂ ಕಾರಣವಾ ಗುವುದರಿಂದ ಶಿವಯೋಗ ಸಾಧನೆಯಿಂದ ಶರಣರು ಸಿದ್ಧಪುರುಷರಾಗುತ್ತಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಶಿವಯೋಗಿಗಳ ಬದು ಕನ್ನು ಓದಿ ಅರ್ಥಮಾಡಿಕೊಳ್ಳಬೇಕಿದೆ. ಅಥಣಿ ಗಚ್ಚಿನಮಠ ಮುರುಘಾಮಠದ ತವರುಮನೆ. ಕಾರಣ ಇಲ್ಲಿನ ಜಯದೇವ, ಜಯ ವಿಭವ, ಮಲ್ಲಿಕಾರ್ಜುನ ಶ್ರೀಗಳವರು ಶಿವಯೋಗಿಗಳವರ ಆಶೀರ್ವಾದ ಪಡೆದವರಾಗಿದ್ದಾರೆ ಎಂದರು.
ಶಿರಸಂಗಿ ಮಹಾಲಿಂಗೇಶ್ವರ ಮಠದ ಬಸವಮಹಾಂತ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಡಾ. ಬಸವಚೇತನ ಸ್ವಾಮೀಜಿ, ಎಸ್. ಷಣ್ಮುಖಪ್ಪ, ಕುಬೇರಪ್ಪ, ಎಸ್. ವೀರೇಶ್, ಬಸವರಾಜಕಟ್ಟಿ, ನಾಗರಾಜ ಸಂಗಮ್, ಗೀತಾ ರುದ್ರೇಶ್, ಮಹಾಂತಮ್ಮ ಜಯಪ್ಪ, ಕಮ್ಮಾರ ಹನುಮಂತಪ್ಪ, ಜಯಶೀಲ.
ರಾಜಶೇಖರಮೂರ್ತಿ, ಇಟಗಿ ವಿಜಯಕುಮಾರ್, ಕವಿ ಗಂಗಾಧರಪ್ಪ, ಚಂದ್ರಣ್ಣ, ಸಿದ್ದಾಪುರ ಮಲ್ಲಿಕಾರ್ಜುನಪ್ಪ, ಪ್ರಾಚಾರ್ಯರಾದ ಎಸ್.ವಿ. ರವಿಶಂಕರ್, ಡಾ.ಪಿ.ಬಿ. ಭರತ್ ಇತರರು ಇದ್ದರು. ಜಮುರಾ ಕಲಾವಿದ ಉಮೇಶ ಪತ್ತಾರ್ ಪ್ರಾರ್ಥಿಸಿದರು. ಕೆ. ಸುರೇಶ್ ಸ್ವಾಗತಿಸಿ, ಲತಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net