ಕಲಾವಿದರಿಗೆ ಬೇಕಿದೆ ಸರ್ಕಾರಗಳ ಪ್ರೋತ್ಸಾಹ

ಚಿತ್ರದುರ್ಗದಲ್ಲಿ ಶನಿವಾರ ನೀನಾಸಂ ತಿರುಗಾಟದ ನಾಟಕ ಅವತರಣಮ್ ಭ್ರಾಂತಾಲಯಮ್ ಪ್ರದರ್ಶನವನ್ನು ರಾಜ್ಯ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಕೆ.ಎಂ.ವೀರೇಶ್ ಉದ್ಘಾಟಿಸಿದರು. ಡಾ.ಬಿ.ರಾಜಶೇಖರಪ್ಪ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶನಿವಾರ ನೀನಾಸಂ ತಿರುಗಾಟದ ನಾಟಕ ಅವತರಣಮ್ ಭ್ರಾಂತಾಲಯಮ್ ಪ್ರದರ್ಶನವನ್ನು ರಾಜ್ಯ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಕೆ.ಎಂ.ವೀರೇಶ್ ಉದ್ಘಾಟಿಸಿದರು. ಡಾ.ಬಿ.ರಾಜಶೇಖರಪ್ಪ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಗೀತ ಕ್ಷೇತ್ರ
  • ನೀನಾಸಂ ತಿರುಗಾಟದ ಶನಿವಾರ ನಾಟಕ
  • ರಾಜ್ಯ ಶರಣ ಸಾಹಿತ್ಯನ ಪರಿಷತ್
ಚಿತ್ರದುರ್ಗ: ಸರ್ಕಾರಗಳು ಕಲಾವಿದರನ್ನು ಪೋಷಿಸಬೇಕಿದೆ,ಈ ವಿಷಯದಲ್ಲಿ ಹಿಂದೇಟು ಹೊಡೆಯಬಾರದು ಎಂದು ರಾಜ್ಯ ಶರಣ ಸಾಹಿತ್ಯನ ಪರಿಷತ್ ಉಪಾಧ್ಯಕ್ಷ ಕೆ.ಎಂ.ವೀರೇಶ್ ಹೇಳಿದರು. ರಂಗಸೌರಭ ಕಲಾ ಸಂಘ, ದೀವಿಗೆ ಎಜುಕೇಷನ್ ಟ್ರಸ್ಟ್,ಎಸ್.ಜೆ.ಎಂ.ವಿದ್ಯಾಪೀಠ, ಕನ್ನಡ ಮತ್ತು ಸಂಸ್ಕ್ಪçತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮುರುಘಾಮಠದದಲ್ಲಿ ಏರ್ಪಡಿಸಿದ್ದ ನೀನಾಸಂ ತಿರುಗಾಟದ ನಾಟಕ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ನಾಟಕ,ನÊತ್ಯ,ಸಂಗೀತ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸರ್ಕಾರ ಧನಸಹಾಯದೊಂದಿಗೆ ಬೆಂಬಲ ನೀಡ ಬೇಕಿದೆ. ಆಧುನಿಕ ಯುವಪೀಳಿಗೆಯಲ್ಲಿ ನಾಟಕದ ಅಭಿರುಚಿ ಕಡಿಮೆಯಾಗುತ್ತಿದೆ. ಕೆಟ್ಟ ಚಟುವಟಿಕೆಗಳಿಗೆ ಬಲಿಯಾಗಿ ತಮ್ಮ ಅಂತಃ ಸತ್ವವನ್ನು ಕಳೆದುಕೊಳ್ಳುತ್ತಿರುವುದು ಆತಂಕಕ್ಕೀಡು ಮಾಡಿದೆ. ಈ ನಿಟ್ಟಿನಲ್ಲಿ ರಂಗಭೂಮಿಯಿAದ ಜಾಗೃತಿ ಕೆಲಸವಾಗುತ್ತಿದೆ ಎಂದರು.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ,ಸರ್ಕಾರ ಕಲಾವಿದರನ್ನು ಮರೆತಿರುವುದು ವಿಪರ್ಯಾಸವಾಗಿದೆ ಎಂ ದರು.ನಾಟಕಕಾರ ಡಾ.ಜಿ.ಎನ್ ಮಲ್ಲಿಕಾರ್ಜುನಪ್ಪ ಮಾತನಾಡಿ ನಾಟಕ ಎಂಬುದು ತಕ್ಷಣಕ್ಕೆ ರೂಪುಗೊಳ್ಳುವಂಥದ್ದಲ್ಲವೆAದರು.
ರAಗನಿರ್ದೇಶಕ ಕೆ.ಪಿ.ಎಂ.ಗಣೆÃಶಯ್ಯ, ಹಿರಿಯ ಪ್ರಾಧ್ಯಾಪಕಿ ಡಾ.ತಾರಿಣಿ ಶುಭದಾಯಿನಿ,ಉಪನ್ಯಾಸಕ ಎಂವಿ.ನಟರಾಜ್, ಯೋಗಗುರು ಎಂ.ಬಿ.ಮುರುಳಿ,ಶ್ಯಾಮಲಾ,ಎA.ವಿ.ನಾಗರಾಜ್,-Àಣಿರಾಜ,ನೀನಾಸA ತಿರುಗಾಟದ ಮ್ಯಾನೇಜರ್ ಗಣÉÃಶ್ ಭೀಮನ ಕೋಣÉ,ನಿವÊತ್ತ ಪ್ರಾಚಾರ್ಯ ಕೆ.ಜಂಬುನಾಥ್,ಸುನಿತಾಮುರುಳಿ,ನಿವÊತ್ತ ಪ್ರಾಧ್ಯಾಪಕ ರುದ್ರಪ್ಪ ಅಂಗಡಿ ಇತರರು ಇದ್ದರು.
ನಾಟಕಕಾರ ಜಿ.ಶಂಕರಪಿಳ್ಳೆ ರಚಿಸಿದ,ನಾ.ದಾಮೋದರಶೆಟ್ಟಿ ಕನ್ನಡಕ್ಕೆ ಅನುವಾದಿಸಿರುವ,ಶಂಕರ ವೆಂಕಟೇಶ್ವರನ್ ನಿರ್ದೇಶನದಲ್ಲಿ ನೀನಾಸಂ ತಿರುಗಾಟದ ಅವತರಣಮ್ ಭ್ರಾಂತಾಲಯಮ್ ನಾಟಕ ಪ್ರದರ್ಶನಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net